ಬೆಳೆವಿಮೆ ಮಾಡಿಸಲು ಕೊನೆಡೇಟ್‌ ಯಾವಾಗ? ಇಲ್ಲಿದೆ ನೋಡಿ ಡಿಟೈಲ್ಸ್

ಸುದ್ದಿಕಡೂರು : 2023-24ನೇ ಸಾಲಿನ ಹಿಂಗಾರು ಬೇಸಿಗೆ ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಗ್ರಾಪಂ ಮಟ್ಟ ಮತ್ತು ಹೋಬಳಿ ಮಟ್ಟಕ್ಕೆ ಅಧಿಸೂಚಿತ ಬೆಳೆಗಳಿಗೆ ನೊಂದಾಯಿಸಲು ಅಂತಿಮ ದಿನಾಂಕವನ್ನು ನಿಗಧಿಪಡಿಸಲಾಗಿದ್ದು, ಅಗ್ರೀ ಕಲ್ಚರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಸಂಸ್ಥೆಯು ಅನುಷ್ಟಾನ ಸಂಸ್ಥೆಯಾಗಿರುತ್ತದೆ. ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆ ವಿಮೆಗಾಗಿ ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರು ಈ ಯೋಜನೆಯಡಿ ನೊಂದಾಯಿಸಿಕೊಳ್ಳಬಹುದಾಗಿದೆ.

ಬೆಳೆವಾರು ನಿಗಧಿಪಡಿಸಿರುವ ಜೋಳ, ಕಡಲೆ, ಹುರುಳಿ, ಟೊಮ್ಯಾಟೊ ಬೆಳೆಗಳಿಗೆ ವಿಮಾ ನೊಂದಾಣಿ ಮಾಡಿಸಲು ಡಿ.1ರಂದು ಕೊನೆಯ ದಿನವಾಗಿದ್ದು, ನೆಲಗಡಲೆ(ಶೇಂಗಾ)ಬೆಳೆಗೆ ಫೆ.28(2024) ನೊಂದಾಯಿಸಲು ಅಂತಿಮ ದಿನವಾಗಿದೆ. ರೈತರು ನಿಗಧಿತ ಅವಧಿಯೊಳಗೆ ಸಂಬಂಧಿಸಿದ ಬ್ಯಾಂಕ್ ಸಾರ್ವಜನಿಕ ಸೇವಾಕೇಂದ್ರಗಳಲ್ಲಿ ನೊಂದಾಯಿಸಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಕಚೇರಿಯನ್ನು ಸಂಪರ್ಕಿಸುವಂತೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಂ. ಅಶೋಕ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!