ತುಂತುರು ನೀರಾವರಿ ಮತ್ತು ಸಿಂಕಲರ್ ಸೆಟ್‌ಗೆ 90% ಸಹಾಯ ಧನ

ಸುದ್ದಿ ಕಡೂರು: ತಾಲೂಕಿನ ಎಲ್ಲಾ ವರ್ಗದ ರೈತರಿಗೆ ಕೃಷಿ ಇಲಾಖೆಯಿಂದ ಶೇ.90ರ ಸಹಾಯ ಧನದಲ್ಲಿ ತುಂತುರು ನೀರಾವರಿ ಮತ್ತು ಸಿಂಕಲರ್ ಸೆಟ್‌ಗಳನ್ನು ಒದಗಿಸುತ್ತಿದ್ದು, ತಾಲೂಕಿನ ಎಲ್ಲಾ ಅರ್ಹ ರೈತರು ಯೋಜನೆಯ ಸದುಪಯೋಗಪಡಿಸಿ ಕೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕ ಅಶೋಕ್ ತಿಳಿಸಿದ್ದಾರೆ.

ತಾಲೂಕಿನಲ್ಲಿ 2023-24 ನೇ ಸಾಲಿನಲ್ಲಿ ಅರ್ಹ ಎಲ್ಲಾ ರೈತರಿಗೆ ಶೇ.90 ರ ಸಹಾಯ ಧನದಲ್ಲಿ ತುಂತುರು ನೀರಾವರಿ/ಸಿಂಕಲರ್ ಸೆಟ್‌ಗಳನ್ನು ವಿತರಿಸಲು ಅನುದಾನ ಲಭ್ಯವಿರುತ್ತದೆ. ರೈತರು 4,139 ರೂ. ಗಳ ವಂತಿಕೆ ಹಣವನ್ನು ಸರಬರಾಜು ಸಂಸ್ಥೆಗೆ ಪಾವತಿಸಿ ಸದರಿ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ರೈತರು ನಿಗದಿತ ನಮೂನೆಯಲ್ಲಿ ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಿ, ತಮ್ಮ ಜಮೀನಿನ ಪಹಣ ಪ್ರತಿ, ಆಧಾರ್ ನಕಲು ಪ್ರತಿ, ಜಾತಿ ಪ್ರಮಾಣ ಪತ್ರ, ಇಚ್ಛಿಸುವ ಸರಬರಾಜು ಸಂಸ್ಥೆಗೆ ವಂತಿಕೆ ಹಣವನ್ನು ಪಾವತಿಸುವ ಬ್ಯಾಂಕ್ ಪಾಸ್ ಬುಕ್, ನೀರಿನ ಲಭ್ಯತೆ ಬಗ್ಗೆ ಧೃಡೀಕರಣ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಸೌಲಭ್ಯ ಪಡೆಯದಿರುವ ಬಗ್ಗೆ ಧೃಡೀಕರಣ ಹಾಗೂ 20 ರೂ. ಛಾಪಾ ಕಾಗದದಲ್ಲಿ ಒಪ್ಪಿಗೆ ಪತ್ರದ ದೃಢೀಕರಣಗಳನ್ನು ಸಲ್ಲಿಸಿ ಸವಲತ್ತುಗಳನ್ನು ಪಡೆದುಕೊಳ್ಳ ಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳು ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!