ಸ್ಕೀಮ್ ಮತ್ತು ಸ್ಕ್ಯಾಮ್‌ ನಡುವಿನ ಚುನಾವಣೆ : ಕಾಂಗ್ರೆಸ್‌ ವಿರುದ್ದ ಕಿಡಿಕಾರಿದ ಮಾಜಿ ಸಚಿವ ಸಿ.ಟಿ.ರವಿ

ಸುದ್ದಿ ಕಡೂರು : ಈ ಬಾರಿ ನಡೆಯುವ ಲೋಕಸಭಾ ಚುನಾವಣೆ ಸ್ಕೀಮ್ ಮತ್ತು ಸ್ಕ್ಯಾಮ್‌ ನಡುವಿನ ರಾಷ್ಟ್ರಭಕ್ತರು ಮತ್ತು ರಾಷ್ಟ್ರಘಾತುಕರ ನಡುವೆ ನಡೆಯಲಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದರು.
ತಾಲ್ಲೂಕಿನ ಚಿಕ್ಕದೇವನೂರು ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಸಿ ಮಾತನಾಡಿ, ನಕ್ಸಲ್ ಬೆಂಬಲಿಗರು, ಏಕತೆಯ ವಿರೋಧಿಗಳು, ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೇಳುವ ಡಿಎಂಕೆ ಪಕ್ಷದಂತಹ ಸಿದ್ದಾಂತ ರಹಿತ ಪಕ್ಷಗಳು ಇಂಡಿಯಾದ ಒಕ್ಕೂಟದಲ್ಲಿವೆ. ಆದರೆ ಮೋದಿಯವರು ಯುವಸಮೂಹ, ರೈತಾಪಿ ವರ್ಗ, ಮಹಿಳೆಯರು ಮತ್ತು ಬಡವರ ಪರವಾದ ಅನೇಕ ಕಾರ್ಯಕ್ರಮಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಸ್ವಾವಲಂಬಿಯ ಬದುಕಿಗೆ ಹೊಸ ರೂಪವನ್ನು ನೀಡಿದ್ದಾರೆ ಎಂದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ಕೋಟಾಶ್ರೀನಿವಾಸಪೂಜಾರಿ ಮಾತನಾಡಿ ದೇಶದದಲ್ಲಿ ಭದ್ರತೆಯನ್ನು ಸೃಷ್ಟಿಸಲು ಮತ್ತು ಭಯೋತ್ಪಾದನೆಯನ್ನು ದೇಶದಿಂದ ಹೋಗಲಾಡಿಸಲು ಸಮರ್ಥ ಸರಕಾರದ ಅವಶ್ಯಕತೆಯಿದೆ ಎಂಬುದು ದೇಶದ ಜನತೆಗೆ ತಿಳಿದಿದೆ. ಇದರ ಜತೆಗೆ ಬಡವರ ಕಲ್ಯಾಣಕ್ಕೆ ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರ ಜಾರಿಗೆ ತಂದ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿವೆ. ಹಾಗಾಗಿ ಹಳ್ಳಿಯಿಂದ ದೆಹಲಿವರೆಗೆ ಮತ್ತೊಮ್ಮೆ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಬೇಕು ಎಂಬ ಆಶಯ ಜನರಲ್ಲಿ ಮೂಡಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜಶೆಟ್ಟಿ, ಮಾಜಿ ಅಧ್ಯಕ್ಷ ಹೆಚ್.ಸಿ. ಕಲ್ಮುರುಡಪ್ಪ, ಜಿಲ್ಲಾ ವಕ್ತಾರ ಕೆ.ಆರ್. ಮಹೇಶ್ ಒಡೆಯರ್, ಮುಖಂಡರಾದ ಚಿಕ್ಕದೇವನೂರು ರವಿ, ಜಿ.ಎನ್. ವಿಜಯಕುಮಾರ್, ಸೋಮಶೇಖರ್, ಈಶ್ವರಹಳ್ಳಿ ಮಹೇಶ್, ಶಾಮಿಯಾನ ಚಂದ್ರು, ಎ.ಮಣಿ ಇದ್ದರು.

Leave a Reply

Your email address will not be published. Required fields are marked *

error: Content is protected !!