ಕೋಟಾ ದೇವಸ್ಥಾನದ ಪೂಜಾರಿ ಅಲ್ಲ, ಜನರ ಪೂಜಾರಿ! : ಸಿ.ಟಿ. ರವಿ

ಸುದ್ದಿ ಕಡೂರು : ಸಖರಾಯಪಟ್ಟಣದ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ 26 ಬೂತ್‌ನಲ್ಲಿ ಕನಿಷ್ಟ 15 ಸಾವಿರ ಮತಗಳನ್ನು ಬಿಜೆಪಿ ಅಭ್ಯರ್ಥಿಗೆ ದೊರಕಿಸಿಕೊಡಬೇಕಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.
ತಾಲ್ಲೂಕಿನ ಸಖರಾಯಣದಲ್ಲಿ ಭಾನುವಾರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಶಕ್ತಿಕೇಂದ್ರದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭೋಜೆಗೌಡರ ಪ್ರಭಾವದಿಂದ 10 ಬೂತ್‌ನಲ್ಲಿ ನಿರೀಕ್ಷಿತವಾಗಿ ಬಿಜೆಪಿಗೆ ಮತಲಭಿಸಿರಲಿಲ್ಲ. ಗ್ರಹಚಾರ ಕೆಟ್ಟಾಗ ಎಲ್ಲಾ ಗ್ರಹಗತಿಗಳು ಒಂದಾಗುತ್ತವೆ ಈಗ ಬಿಜೆಪಿ-ಜೆಡಿಎಸ್ ಹೊಂದಾಣಿಕೆಯ ಕೆಲಸವನ್ನು 10 ತಿಂಗಳು ಹಿಂದೆಯೇ ಮಾಡಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುತ್ತಿರಲಿಲ್ಲ. ನಮ್ಮ ಟೈಂ ಸರಿ ಇಲ್ಲದಾಗ ಪರಿಸ್ಥಿತಿಗಳು ಬದಲಾಗುತ್ತವೆ. ಮತ್ತೊಮ್ಮೆ ಮೋದಿ ಆಡಳಿತ ಬರಲು ಕಾರ್ಯಕರ್ತರು ಸನ್ನದರಾಗಬೇಕಿದೆ ಈ ನಿಟ್ಟಿನಲ್ಲಿ ಸಜ್ಜನಿಕೆ ರಾಜಕಾರಣಿಯಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ದೇವಸ್ಥಾನದ ಪೂಜಾರಿ ಅಲ್ಲ, ಬಡಜನರ ಸೇವೆಯ ಪೂಜಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಪೂಜಾರಿಗೆ ಮಂಗಳಾರತಿ ತಟ್ಟೆನೂ ಇಲ್ಲ, ತಟ್ಟೆಗೂ ನೀವೇ ಹಾಕಬೇಕು ಓಟನ್ನು ಕೊಡಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ, ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರಡಪ್ಪ, ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಜಿಲ್ಲಾ ಮತ್ತು ಗ್ರಾಮಾಂತರ ಭಾಗದ ಬಿಜೆಪಿ ಜೆಡಿಎಸ್ ಮುಖಂಡರು ಇದ್ದರು.

 

Leave a Reply

Your email address will not be published. Required fields are marked *

error: Content is protected !!