ಗೌರವಧನ ನೀಡಿ ಹರಕೆ ತೀರಿಸಿದ ಶಾಸಕ ಕೆ.ಎಸ್.ಆನಂದ್

ಕಡೂರು : ಶಾಸಕನಾಗಿ 11 ತಿಂಗಳು ಕಳೆದ ಹಿನ್ನಲೆಯಲ್ಲಿ ಮನೆದೇವರಿಗೆ ಪ್ರತಿ ತಿಂಗಳ ಶಾಸಕರ ಗೌರವಧನದ ಬಾಬ್ತುನಲ್ಲಿ ತಲಾ 10 ಸಾವಿರದಂತೆ 1.10ಲಕ್ಷ ಹಣವನ್ನು ತಾಲ್ಲೂಕಿನ ಹೊಗರೇಹಳ್ಳಿ ಶ್ರೀ ರಂಗನಾಥಸ್ವಾಮಿ ದೇವಾಲಯದ ಸೇವಾಕಾರ್ಯಕ್ಕೆ ನೀಡುವ ಮೂಲಕ ತಮ್ಮ ಹರಕೆಯನ್ನು ಶಾಸಕ ಕೆ.ಎಸ್.ಆನಂದ್ ಸಮರ್ಪಿಸಿದ್ದಾರೆ.
ಕಳೆದ 2023ರ ಏಪ್ರಿಲ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾದರೆ ಮನೆದೇವರರಾದ ಹೊಗರೇಹಳ್ಳಿಯ ರಂಗನಾಥಸ್ವಾಮಿಗೆ ತನ್ನ ಶಾಸಕನ ಗೌರವಧನ ನೀಡುವ ಬಾಬ್ತಿನಲ್ಲಿ ಪ್ರತಿ ತಿಂಗಳು 10 ಸಾವಿರ ಹಣವನ್ನು ಸ್ವಾಮಿಯ ಸೇವಾ ಕಾರ್ಯಕ್ಕೆ ನೀಡುವ ಬಗ್ಗೆ ಹರಕೆ ಹೊತ್ತಿದ್ದ ಹಿನ್ನಲೆಯಲ್ಲಿ ಗೌರವಧನ ಮಂಜೂರಾದ ಬಳಿಕ ದೇವಾಲಯದ ಸೇವಾಕಾರ್ಯಕ್ಕೆ ಹಣವನ್ನು ಮೀಸಲಿಟ್ಟು ದೇವಾಲಯದ ಆಡಳಿತದ ಮಂಡಳಿಗೆ ಪತ್ರ ಬರೆಯವ ಮೂಲಕ 1.10ಲಕ್ಷ ಮೊತ್ತದ ಚೆಕ್ ರೂಪದಲ್ಲಿ ದೇವಾಲಯಕ್ಕೆ ನೀಡಿ ಭಕ್ತಿಯನ್ನು ಅರ್ಪಿಸಿದ್ದಾರೆ. ಗೌರವಧನದ ಬಾಬ್ತಿನ ಹಣ ನೀಡುವ ಬಗ್ಗೆ ಬರೆದಿದ್ದ ಪತ್ರದ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ಗೊಂಡಿದೆ.

Leave a Reply

Your email address will not be published. Required fields are marked *

error: Content is protected !!