ಮಾನವೀಯತೆ ರೂಢಿಸಿಕೊಂಡಾಗ ಮಾತ್ರ ಸರ್ಕಾರಿ ಸೇವೆ ಸಾರ್ಥಕ – ಜಿಗಣೇಹಳ್ಳಿ ನೀಲಕಂಠಪ್ಪ

ಸುದ್ದಿ ಕಡೂರು : ಸ್ವಾರ್ಥ, ಅಹಂಕಾರ ದೂರವಿಟ್ಟು ಕರ್ತವ್ಯ ನಿಷ್ಠೆ, ಮಾನವೀಯತೆ ರೂಢಿಸಿಕೊಂಡಾಗ ಮಾತ್ರ ಸರ್ಕಾರಿ ಸೇವೆ ಸಾರ್ಥಕ ಪಡೆಯಲಿದೆ ಎಂದು ಜಿಗಣೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು. ಪಟ್ಟಣದ ಸುರುಚಿ ಸಭಾಂಗಣದಲ್ಲಿ ಗುರುವಾರ ಯಳ್ಳಂಬಳಸೆ ಗ್ರಾಪಂ ಪಿಡಿಒ ಎಸ್.ಡಿ. ವಸಂತ್ ಕುಮಾರ್ ಅವರ ನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಬಿಳ್ಕೋಡುಗೆಯೊಂದಿಗೆ ಗೌರವಿಸಿ ಬಳಿಕ ಮಾತನಾಡಿ, ಪ್ರತಿ ಸರ್ಕಾರಿ ನೌಕರರಿಗೆ ನಿವೃತ್ತಿ ಅನಿವಾರ್ಯ. ಯಾವುದೇ ಇಲಾಖೆಯಲ್ಲಿ ತಮ್ಮ ಕೆಲಸವನ್ನು ಯಶಸ್ವಿಯಾಗಬೇಕಾದರೆ ಮಾನವೀಯತೆ ಮತ್ತು ಸರಳತೆಯಿರಬೇಕು ಎಂದರು.

ಯಳ್ಳಂಬಳಸೆ ಗ್ರಾಮಪಂಚಾಯಿತಿ ಮಾಜಿ ಉಪಾಧ್ಯಕ್ಷ ಯಳಗೊಂಡನಹಳ್ಳಿ ಈಶ್ವರಪ್ಪ ಮಾತನಾಡಿ, ನೇರ ನಡೆ ನುಡಿಯ ವಸಂತಕುಮಾರ್ ಗ್ರಾಮಪಂಚಾಯಿತಿಯಲ್ಲಿ ಸದಸ್ಯರೊಂದಿಗೆ ಸೌಹಾರ್ದಯುತವಾಗಿ ವ್ಯವಹರಿಸುತ್ತಿದ್ದರು. ಬಿಲ್ ಕಲೆಕ್ಟರ್ ಆಗಿ ಪಿಡಿಓ ತನಕ ಹಂತ ಹಂತವಾಗಿ ಬೆಳೆದ ಅವರ   ಸೇವೆಯನ್ನು ಯಳ್ಳಂಬಳಸೆ ಪಂಚಾಯಿತಿ ಸದಾ ಸ್ಮರಿಸಲಿದೆ ಎಂದರು.

ಈ ಸಂದರ್ಭದಲ್ಲಿ   ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರವೀಣ್, ಗ್ರಾಪಂ ಸದಸ್ಯ
ಸೋಮೇಶ್, ಗುತ್ತಿಗೆದಾರ ಅಜಯ್ ಕುಮಾರ್, ಚೌಡ್ಲಾಪುರ ದೇವರಾಜ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!