ಯಗಟಿಯಲ್ಲಿ ಚಿರತೆಧಾಳಿಗೆ ಕುರಿ-ಆಡುಗಳು ಸಾವು

ಸುದ್ದಿ ಕಡೂರು: ತಾಲ್ಲೂಕಿನ ಯಗಟಿಯಲ್ಲಿ ಚಿರತೆ ಧಾಳಿಗೆ ಏಳು ಕುರಿಗಳು ಮತ್ತು ಎರಡು ಆಡುಗಳು ಮೃತಪಟ್ಟಿವೆ. ಬುಧವಾರ ತಡ ರಾತ್ರಿ ಚಿರತೆ ಯಗಟಿಯ ಕೆಂಚಪ್ಪ ಮತ್ತು ರಾಜಪ್ಪ ಎಂಬುವವರ ಕೊಟ್ಟಿಗೆಗೆ ನುಗ್ಗಿ ಒಳಗಿದ್ದ ಕುರಿಗಳ ಮೇಲೆ ಧಾಳಿ ನಡೆಸಿದೆ.

ಗುರುವಾರ ಉಪ ವಲಯ ಅರಣ್ಯಾಧಿಕಾರಿ ಅಮೃತಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ನಷ್ಟದ ಬಗ್ಗೆ ಇಲಾಖೆಗೆ ವರದಿ ಕಳಿಸಲಾಗಿದೆ. ಈಗಾಗಲೇ ಚಿರತೆ ಓಡಾಡುತ್ತರುವ ಮಾಹಿತಿ ಮೇರೆಗೆ ಕುಕ್ಕಸಮುದ್ರ ಬಳಿ ಅರಣ್ಯ ಇಲಾಖೆ ಮೂಲಕ ಬೋನು ಇಡಲಾಗಿತ್ತು. ಇಂದು ಯಗಟಿ ಬಳಿಯೂ ಬೋನು ಇಡಲು ವ್ಯವಸ್ಥೆ ಮಾಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ರಜಾಕ್ ನದಾಫ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!