ದುರ್ಗಾಸಮಿತಿಯ ಆಸ್ಥಾನ ಮಂಟಪದಲ್ಲಿ ಚಂಡಿಕಾಹೋಮ ಸಂಪನ್ನ

ಸುದ್ದಿಕಡೂರು : ಕಡೂರುಪಟ್ಟಣದ ಛತ್ರದ ಬೀದಿಯಲ್ಲಿನ ಶ್ರೀ ದುರ್ಗಾ ಸೇವಾ ಸಮಿತಿಯ ಆಸ್ಥಾನ ಮಂಟಪದಲ್ಲಿ ಭಾನುವಾರ ದುರ್ಗಾಷ್ಠಮಿಯ ಅಂಗವಾಗಿ ಚಂಡಿಕಾಹೋಮ ಕಾರ್ಯಕ್ರಮವು ಸುಸಂಪನ್ನವಾಗಿ ನೆರವೇರಿಸಲಾಯಿತು.
ಬೆಳಿಗ್ಗೆ ಜ್ಯೋತಿಷ್ಯ ವಿದ್ವಾನ್ ಶೃಂಗೇರಿಯ ವಸಂತ್‍ಭಟ್ ನೇತೃತ್ವದಲ್ಲಿ ಲೋಕಕಲ್ಯಾಣರ್ಥವಾಗಿ ಸಂಕಲ್ಪ ಪೂಜಾ ಕಾರ್ಯಕ್ರಮಗಳು ಜರುಗಿದವು. ಬಳಿಕ ಪೂರ್ಣಹುತಿ ಕಾರ್ಯಕ್ರಮ ನೆರವೇರಿತು. ನೂರಾರು ಸಂಖ್ಯೆಯ ಮಹಿಳೆಯರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಳಿಕ ಶ್ರೀವೀರಭದ್ರೇಶ್ವಸ್ವಾಮಿ ಸಮುದಾಯಭವನದಲ್ಲಿ ದಾಸೋಹದ ವ್ಯವಸ್ಥೆ ಕಲ್ಪಿಸಲಾಯಿತು.
ಗಮನಸೆಳೆಯ ದೇವಿಕಲಾಕೃತಿ
ಇದೇ ವೇಳೆ ಆಸ್ಥಾನ ಮಂಟಪದ ಬಳಿ ಕಲಾವಿದ ಸುರೇಂದ್ರ ಶೆಟ್‌ ಕೈಚಳಕದಿಂದ ದುರ್ಗಾದೇವಿಯ ಆಕರ್ಷಕ ಕಲಾಕೃತಿಯ ಚಿತ್ರವನ್ನು ರಚಿಸಿದ್ದು ಭಕ್ತರ ಗಮನಸೆಳೆಯಿತು. ಕಡೂರಿನ ಪ್ರತಿಭೆ ಕಲಾವಿದ ಸುರೇಂದ್ರ ಶೆಟ್‌ ಕೈಚಳಕದಿಂದ ಮೂಡಿಬಂದ ದೇವಿಯ ಕಲಾಕೃತಿಗೆ ಪ್ರಶಂಸೆವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಹೋಮಾದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಂಗಳವಾರ ವಿಜಯದಶಮಿಯ ಅಂಗವಾಗಿ ಶ್ರೀ ದೇವಿಯ ವಿಸರ್ಜನಾ ಮಹೋತ್ಸವವು ಅದ್ದೂರಿಯಾಗಿ ಜರುಗಲಿದೆ. ಭಕ್ತಾದಿಗಳು ಹೆಚ್ಚಿನಸಂಖ್ಯೆಯಲ್ಲಿ ವಿಸರ್ಜನಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಸಮಿತಿಯ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಮಿತಿಯ  ಪದಾಧಿಕಾರಿಗಳಾದ ಭದ್ರಿಸ್ವಾಮಿ, ಕೆ.ಪಿ.ಶ್ರೀನಿವಾಸ್, ಪುರಸಭಾ ಸದಸ್ಯ ಯತಿರಾಜ್, ಸೋಮೇಶ್ ಶಿವಮೊಗ್ಗೆ,  ವಿಕಾಸ್ ಚಂದ್ರು, ರಂಗನಾಥ್, ಎಚ್.ಆರ್. ದೇವರಾಜ್, ಕೆ.ಪಿ. ಪ್ರದೀಪ್(ಪದ್ದು), ನಾಗೇಂದ್ರ, ಗೌತಮ್, ರಾಜುಕರಿಬಡ್ಡೆ, ಹುಲಿಕೆರೆ ಮಹೇಶ್, ಆಕಾಶ್, ಸಿದ್ದೇಶ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!