ಸಾಂಪ್ರದಾಯಿಕವಾಗಿ ಅಂಬು ಹೊಡೆದ ಕಡೂರು ತಹಸೀಲ್ದಾರ್ ಕವಿರಾಜ್

ಸುದ್ದಿ ಕಡೂರು : ಶರನ್ನವರಾತ್ರಿ ಮಹೋತ್ಸವದ ಕೊನೆಯ ದಿನದ ವಿಜಯದಶಮಿಯ ಅಂಗವಾಗಿ ಮಂಗಳವಾರ ಪಟ್ಟಣದಲ್ಲಿ ಬನ್ನಿಪೂಜೆಯ ಮಹೋತ್ಸವವು ಸುಸಂಪನ್ನವಾಗಿ ಜರುಗಿತು.

ಕಡೂರು ಪಟ್ಟಣದ ದೊಡ್ಡಪೇಟೆಯ ಗ್ರಾಮದೇವತೆ ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಕೋಟೆಯ ಶ್ರೀ ಲಕ್ಷ್ಮೀಚನ್ನಕೇಶವ ಸ್ವಾಮಿಉತ್ಸವ ಮೂರ್ತಿಗಳನ್ನು ಬನ್ನಿಮಂಟಪದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ನಂತರ ಚನ್ನಕೇಶವಸ್ವಾಮಿ ಹಾಗೂ ವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ತಹಸೀಲ್ದಾರ್ ಎಂ.ಪಿ. ಕವಿರಾಜ್ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಾಂಕೇತಿಕವಾಗಿ ನಿರ್ಮಿಸಲ್ಪಟ್ಟ ಬಾಳೆಗೊನೆಗೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ಕತ್ತಿಯೊಂದಿಗೆ ಸಾಂಪ್ರ‍್ರದಾಯದ ಅಂಬು ಹೊಡೆಯುವ ಮೂಲಕ ಬನ್ನಿಪೂಜೆಯ ಉತ್ಸವಗಳು ಶ್ರದ್ದಾಭಕ್ತಿಯಿಂದ ನೆರವೇರಿತು.
ನಂತರ ಭಕ್ತರು ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪರಸ್ಪರ ಬನ್ನಿ ಪತ್ರೆ ವಿನಿಮಯ ಮಾಡಿಕೊಂಡು ಹಿರಿಯರ ಆರ್ಶೀವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಚನ್ನಕೇಶವಸ್ವಾಮಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಅರ್ಚಕರಾದ ಪ್ರಸನ್ನಭಟ್, ವಿನಯ್, ವೀರೇಶ್, ವಿಶ್ವನಾಥ್ ಸೇರಿದಂತೆ ಪುರಸಭಾ ಸದಸ್ಯ ಈರಳ್ಳಿರಮೇಶ್, ಟಿ.ಡಿ.ರಾಜನ್, ಪ್ರದೀಪ್, ಮೋಹನ್, ಕೃಷ್ಣಮೂರ್ತಿ, ಶ್ರೀನಿವಾಸ್, ಭರತ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!