ಕಡೂರು ಪೊಲೀಸ್‌ ಠಾಣೆಯಲ್ಲಿ ಆಯುಧಪೂಜೆ ಸಂಭ್ರಮ

ಸುದ್ದಿ ಕಡೂರು : ಸೇವೆಯಲ್ಲಿ ಖಾಕಿ ಸಮವಸ್ತದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದ  ಪೊಲೀಸರು ಸೋಮವಾರ ಆಯುಧ ಪೂಜೆಯ ಪ್ರಯಕ್ತ ಸಾಂಪ್ರಾದಾಯಿಕ ಉಡುಗೆಯೊಂದಿಗೆ ಠಾಣೆಯಲ್ಲಿ ಆಯುಧ ಪೂಜೆಯನ್ನು ಪೊಲೀಸ್ ಠಾಣೆಯ ಅರಕ್ಷಕರು ಸಡಗರ ಸಂಭ್ರಮದೊಂದಿಗೆ ಆಚರಿಸಿದರು.
ಪ್ರತಿನಿತ್ಯ ಕೆಲಸದ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ತಮ್ಮ ಸಹೋದ್ಯೋಗಿಗಳೊಂದಿಗೆ ಠಾಣೆಯಲ್ಲಿ ಒಂದು ಕುಟುಂಬದಂತೆ ಸಾಂಪ್ರಾದಾಯಿಕ ಉಡುಗೆಯೊಂದಿಗೆ ಹಬ್ಬದಲ್ಲಿ ಮಿಂಚಿದರು. ಕಡೂರು ಠಾಣೆಯ ಪಿಎಸೈ ಧನಂಜಯ್ ನೇತೃತ್ವದಲ್ಲಿ ಠಾಣೆಯಲ್ಲಿ ಆಯುಧ ಪೂಜೆಯ ಪ್ರಯುಕ್ತ ವಿಶೇಷ ಪೂಜೆ ನಡೆಸಲಾಯಿತು. ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ವಿಕ್ರಮ್ ಅಮಟೆ ಹಾಗೂ ತರೀಕೆರೆ ಡಿವೈಎಸ್ಪಿ ಹಾಲಮೂರ್ತಿರಾವ್, ಸಿಪಿಐ ಕೆ.ಆರ್. ಶಿವಕುಮಾರ್ ಭೇಟಿ ನೀಡಿ ಪೂಜೆ ಸಲ್ಲಿಸಿದರು.

“ಠಾಣೆಯಲ್ಲಿ ಲೋಕಸ್ಪಂದನಾ ಆ್ಯಪ್‌ ಬಿಡುಗಡೆ”

 ಪಟ್ಟಣದ ಪೊಲೀಸ್ ಠಾಣೆಯಲ್ಲಿ ಲೋಕಸ್ಪಂದನ ಆ್ಯಪ್‌ನ್ನು ಶಾಸಕ ಕೆ.ಎಸ್. ಆನಂದ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ, ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿ ಮಾಡಲು ವಿನೂತನ ಪ್ರಯೋಗವನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ದೂರುಗಳನ್ನು ನೀಡಲು ಅನುಕೂಲವಾಗುವಂತೆ ಲೋಕಸ್ಪಂದನ ಕ್ಯೂ ಆರ್ ಕೋಡ್ ಪರಿಚಯಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಹಾಲಮೂರ್ತಿರಾವ್, ಸಿಪಿಐ ಕೆ.ಆರ್. ಶಿವಕುಮಾರ್, ಪಿಎಸೈ ಧನಂಜಯ್, ಪುರಸಭಾ ಸದಸ್ಯ ತೋಟದಮನೆ ಮೋಹನ್‌ಕುಮಾರ್, ಮುಖಂಡರಾದ ದೊಣ್ಣೇಕೋರನಹಳ್ಳಿ ಉಮೇಶ್, ಹುಚ್ಚಪ್ಪ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!