ಇಟ್ಟರಾಮನಬಾಣಕ್ಕೆ ಹುಸಿಯಿಲ್ಲ…ಬೀರೂರು ಮೈಲಾರಲಿಂಗಸ್ವಾಮಿಯ ಕಾರ್ಣಿಕ

ಸುದ್ದಿ ಬೀರೂರು : ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ “ ಸುರರು ಅಸೂರರು ಕಾದಾಡಿದರು, ಭಕ್ತ ಕೋಟಿಗೆ ಮಂಗಳವಾಯಿತು… ಶಾಂತಿಯ ಮಂತ್ರ ಪಠಿಸಿದರು. ಸರ್ವರು ಎಚ್ಚರದಿಂದರಬೇಕು” ಇದು ಬೀರೂರಿನ ಶ್ರೀ ಮೈಲಾರಲಿಂಗ ಸ್ವಾಮಿಯ ದಶರಥರÀ ಪೂಜಾರಾರ ಬಾಯಿಂದ ಬಂದಂತಹ ಈ ಬಾರಿಯ ಕಾರ್ಣಿಕದ ನುಡಿಮುತ್ತುಗಳು.
ಬೀರೂರು ಪಟ್ಟಣದ ಸರಸ್ವತಿಪುರಂ ಬಡಾವಣೆಯಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ದ ಶ್ರೀ ಮೈಲಾರಲಿಂಗಸ್ವಾಮಿ ದಸರಾ ಕಾರ್ಣಿಕದ ನುಡಿಮುತ್ತುಗಳು ಶನಿವಾರ ಬೆಳಗ್ಗಿನ ಜಾವ 4-42ಕ್ಕೆ ಸುಸಂಪನ್ನವಾಗಿ ಜರುಗಿತು.
ವಿಜಯದಶಮಿಯ ಸಡಗರ ಸಂಭ್ರಮದ ನಡುವೆ ಸಂಪ್ರದಾಯದಂತೆ ಸರಸ್ವತಿಪುರಂ ಬಡಾವಣೆಯಲ್ಲಿ ಪ್ರತಿವರ್ಷವೂ ಕಾರ್ಣಿಕ ಮಹೋತ್ಸವವು ನಡೆಯುತ್ತದೆ. ಕಾರ್ಣಿಕದ ದೈವ ಮೈಲಾರಲಿಂಗೇಶ್ವರಸ್ವಾಮಿಯವರ ಉತ್ಸವ ಮೂರ್ತಿಯನ್ನು ಮಂಗಳವಾರ ರಾತ್ರಿ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಸ್ಥಾಪಿಸಿ ದೇವಾಲಯದ ಬಳಿಯಿಂದ ಹೊರಟು ಬೀರೂರು ಪಟ್ಟಣದ ಹೊರವಲಯದ ಗಾಳಿಹಳ್ಳಿ ಬಳಿಯ ಪಾದದಕೆರೆಯಲ್ಲಿ ಇರುವ ಸ್ವಾಮಿಯ ಪಾದಗಳನ್ನು ಪೂಜಿಸಿದ ಭಕ್ತರು ಸ್ವಾಮಿಗೆ ಗಣಂಗಳ ಸೇವೆ ಮತ್ತು ಗೊರವಪ್ಪರೊಂದಿಗೆ 101 ದೋಣಿ ಸೇವೆ ಎಡೆ ಸಲ್ಲಿಸಿ ಬಳಿಕ ಬನ್ನಿಮುಡಿದು ಮೆರವಣಿಗೆಯಲ್ಲಿ ಶ್ರೀ ವೀರಭದ್ರಸ್ವಾಮಿ ದೇವಾಲಯಕ್ಕೆ ಪೂಜೆ ಸಲ್ಲಿಸಿ ಊರ ಪ್ರಮುಖ ದೇವರುಗಳ ಮೆರವಣಿಗೆಯ ಮೂಲಕ ಮಹಾನವಮಿ ಬಯಲಿಗೆ ಬುಧವಾರ ನಸುಕಿನ ಜಾವ ಆಗಮಿಸಿತು.
ಈ ಸಂದರ್ಭದಲ್ಲಿ ಆದಿದೈವ ವೀರಭದ್ರಸ್ವಾಮಿ, ಬೀರಲಿಂಗೇಶ್ವರ ಸ್ವಾಮಿ, ಹಿರಿಯಂಗಳದ ರುದ್ರಸ್ವಾಮಿ, ಮತ್ತು ಕಾತ್ಯಾಯಿನಿ ದೇವರ ಉತ್ಸವ ಮೂರ್ತಿಗಳು ಮಹಾನವಮಿ ಬಯಲಿನಲ್ಲಿ ಸ್ಥಾಪಿತಗೊಂಡಿದ್ದವು. ಮೈಲಾರಲಿಂಗಸ್ವಾಮಿಯನ್ನು ಕಾರ್ಣಿಕ ನುಡಿಯಲು ಅನುವು ಮಾಡಿಕೊಡುವಂತೆ ಗೊರವರು ಮತ್ತು ಗೌಡರುಗಳು ಸ್ವಾಮಿಯ ಅಪ್ಪಣೆ ಕೋರಿದಾಗ ನೆರದಿದ್ದ ಭಕ್ತರನ್ನೆಲ್ಲಾ ಕಂಡು ಸಂತಸದಿಂದ ಒಪ್ಪಿ ಕಾರ್ಣಿಕ ನುಡಿಯುಲು ತೆರಳುವ ದೃಶ್ಯ ವಿಶೇಷವಾಗಿತ್ತು. ನಂತರ ಬಾಳೆ ಅಂಬನ್ನು ಮೂರು ಬಾರಿ ಪ್ರದಕ್ಷಿಣೆ ನಡೆಸಿ ಕಾರ್ಣಿಕ ನುಡಿಯುವ ಸ್ಥಳವನ್ನು ಸ್ವಾಮಿಯು ಗುರುತಿಸಿ ದೊಡ್ಡಬಿಲ್ಲಯ್ಯನನ್ನು ನಿಲ್ಲಿಸುವಂತೆ ಸೂಚಿಸಿತು.
ಮೈಲಾರಲಿಂಗಸ್ವಾಮಿಯ ಅರ್ಚಕ ದಶರಥ ಪೂಜಾರರು ಉತ್ಸವದಲ್ಲಿ ಬಂದು ಬಾಳೆಮರದ ಅಂಬನ್ನು ಮೂರುಬಾರಿ ಪ್ರದಕ್ಷಿಣಿ ನಡೆಸಿ ನಂತರ ಬೆಣ್ಣೆ ಮೆತ್ತಿದ ದೊಡ್ಡಬಿಲ್ಲಯ್ಯನನ್ನು ಏರಿ ತನ್ನ ಕೈಯಲ್ಲಿದ್ದ ಗಂಟೆಯನ್ನು ಬಾರಿಸಿದ ಕೂಡಲೇ ನೆರೆದಿದ್ದ ಜನರಲ್ಲಿ ಗಾಢ ಮೌನ ಆವರಿಸಿತು.
ನಂತರ ತನ್ನ ತ್ರಿಶೂಲದಲ್ಲಿ ಸ್ವಾಮಿಯು ಮುಂದಿನ ಭವಿಷ್ಯದ ನುಡಿಗಳನ್ನು ಸತ್ಯ ಮತ್ತು ಅಧರ್ಮಗಳನ್ನು ತೂಗಿಸಿ ನಂತರ ನುಡಿದದ್ದೆ

“ಇಟ್ಟರಾಮನ ಬಾಣಕ್ಕೆ ಹುಸಿಯಿಲ್ಲ. ಸುರರು ಅಸೂರರು ಕಾದಾಡಿದರು, ಭಕ್ತ ಕೋಟಿಗೆ ಮಂಗಳವಾಯಿತು… ಶಾಂತಿಯ ಮಂತ್ರ ಪಠಿಸಿದರು. ಸರ್ವರು ಎಚ್ಚರದಿಂದರಬೇಕು” ಎಂದು ನುಡಿಯುವ ಮೂಲಕ ಬಿಲ್ಲಪ್ಪನಿಂದ ಜಾರಿ ತಮ್ಮ ಈ ಬಾರಿಯ ಕಾರ್ಣಿಕದ ನುಡಿಮುತ್ತುಗಳಿಗೆ ಸಮರ್ಪಣೆಗೊಳಿಸಿದರು.ಸ್ಥಳದಲ್ಲಿದ್ದ ಗೊರವರು ಗಂಟೆ ಮತ್ತು ಡಮರುಗಳ ಸಪ್ಪಳದೊಂದಿಗೆ ‘ಏಳುಕೋಟಿಗೆ ಏಳುಕೋಟಿ ಚಾಂಗಮಲೊ’ ಎನ್ನುವ ಸದ್ದು ಮರ್ಧಾನಿಸಿತು. ನೆರದಿದ್ದ ಭಕ್ತರು ಹರ್ಷೋದ್ಗಾರದೊಂದಿಗೆ ಕಾರ್ಣಿಕದ ನುಡಿಮುತ್ತುಗಳನ್ನು ಆಲಿಸಿದರು. ಕಾರ್ಣಿಕದ ಬಳಿಕ ವೀರಭದ್ರಸ್ವಾಮಿಯ ಗುರಿಕಾರ ಅಂಬುಹೊಡೆಯುವ ಸಲುವಾಗಿ ನೆಟ್ಟಿದ್ದ ಬಾಳೆಕಂಬವನ್ನು ಬಾಣಹೂಡಿ ಕತ್ತರಿಸಿದ ನಂತರ ಭಕ್ತರು ಉತ್ಸವಮೂರ್ತಿಗಳೊಂದಿಗೆ ತೆರಳಿದರು. ಶನಿವಾರ ಸಂಜೆ ಸ್ವಾಮಿಯ ವಕ್ಕಲುಗಳು ಹಾಗೂ ದೇವಾಲಯ ಸಮಿತಿಯ ವತಿಯಿಂದ ದೇಗುಲದ ಆವರಣದಲ್ಲಿ ದೋಣಿಸೇವೆ ನೆರವೇರಿತು. ಇದೇ ವೇಳೆ ಶಾಸಕ ಕೆ.ಎಸ್.ಆನಂದ್ ಸೇರಿದಂತೆ ಬೀರೂರು ಪಟ್ಟಣದ ಪುರಸಭಾ ಸದಸ್ಯರು ಹಾಗೂ ದೇವಾಲಯ ಸಮಿತಿಯ ಪದಾಧಿಕಾರಿಗಳು ಗುಡಿಗೌಡರು ಧಾರ್ಮಿಕ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!