ಜಿಲ್ಲಾಧಿಕಾರಿ ಮೀನಾನಾಗರಾಜ್‌ ಬೀರೂರು ನಾಡಕಚೇರಿಗೆ ದಿಢೀರ್‌ ಭೇಟಿ

ಸುದ್ದಿ ಬೀರೂರು : ಸಾರ್ವಜನಿಕರ ಅಹವಾಲಿನ ಮೇರೆಗೆ ಜಿಲ್ಲಾಧಿಕಾರಿ ಮೀನಾನಾಗರಾಜ್ ಬೀರೂರು ಪಟ್ಟಣದ ಪುರಸಭೆ ಹಾಗೂ ನಾಡಕಚೇರಿಗೆ ಬುಧವಾರ ಮಧ್ಯಾಹ್ನ ದಿಢೀರ್‌ ಭೇಟಿ ನೀಡಿ  ಕಂದಾಯ ವಿಭಾಗದ ಅಧಿಕಾರಿಗಳಿಂದ ವಿವಿಧ ವಿಭಾಗದ ಕಡತಗಳ ಪರಿಶೀಲನೆ ನಡೆಸಿದರು.

ಉಪತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳಿಗೆ ಗ್ರಾಮೀಣ ಪ್ರದೇಶಗಳ ಸ್ಮಶಾಣ ಭೂಮಿ ಹಂಚಿಕೆ, ಪಾರಂ 50 ಮತ್ತು 53 ಬಗರು ಹುಕುಂ ಅರ್ಜಿಗಳ ಗಣಕೀಕರಣ, ಅಭಿಲೇಖಾಲಯ ಕಡತಗಳ ಕ್ಯಾಟ್ ಲಾಗಿಂಗ್ ಹಾಗೂ ಸಕಾಲ ಅರ್ಜಿಗಳ ವಿಲೇವಾರಿ ಬಗ್ಗೆ ಮಾಹಿತಿ ಪಡೆದರು.

ಗರಂ ಆದ ಜಿಲ್ಲಾಧಿಕಾರಿ!

ಬಳಿಕ ಕಂದಾಯ ನಿರೀಕ್ಷಕರ ಕಚೇರಿಗೆ ತೆರಳಿದಾಗ ಅಧಿಕಾರಿಗಳ ಜೊತೆ ಖಾಸಗಿ ವ್ಯಕ್ತಿಗಳನ್ನು ಕಂಡ ಬಳಿಕ ಗರಂ ಆದ ಜಿಲ್ಲಾಧಿಕಾರಿ ಮೀನಾನಾಗರಾಜ್‌ ಕಚೇರಿಯಲ್ಲಿ ಕಾರ್ಯನಿರ್ವಹಿಸುವಾಗ ಇವರ ಅವಶ್ಯಕತೆ ಏನಿದೆ?  ಇವರುಗಳನ್ನೇಕೆ ಕಚೇರಿ ಒಳಗೆ ಕೂರಿಸಿಕೊಂಡು ಕಾರ್ಯನಿರ್ವಹಿಸುತ್ತೀದ್ದಿರಿ, ನಿಮ್ಮ ಕೆಲಸಕ್ಕೆ ಇವರೇಕೆ ಎಂದು ಪ್ರಶ್ನಿಸಿ, ಇನ್ನು ಮುಂದೆ ಅಧಿಕಾರಿಗಳನ್ನು ಬಿಟ್ಟು ಬೇರೆ ಯಾವುದೇ ಖಾಸಗಿ ವ್ಯಕ್ತಿಗಳನ್ನು ಇಟ್ಟುಕೊಂಡದ್ದು ಕಂಡು ಬಂದಲ್ಲಿ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ಇಂತಹ ಘಟನೆಗಳು ಮರುಕಳಿಸದಂತೆ ತಾಕೀತು ಮಾಡಿದರು.

ನಂತರ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಕಂದಾಯ ರಶೀದಿ ವಹಿ ಪರಿಶೀಲಿಸಿ ಸರ್ಕಾರಕ್ಕೆ ಪ್ರತಿ ದಿನ ಕಡ್ಡಾಯವಾಗಿ ಪಾವತಿಸುವಂತೆ ಸೂಚಿಸಿದರು. ಜೊತೆಗೆ ಮುಂದಿನ ದಿನಗಳಲ್ಲಿ ಕಂದಾಯ ನಿರೀಕ್ಷಕರೇ ಲಾಗಿನ್ ಮತ್ತಿತರ ಜವಾಬ್ದಾರಿ ಹೊತ್ತವರು ಕಂಪ್ಯೂಟರ್ ಆಪರೇಟಿಂಗ್ ಕಲಿತು ನೀವೆ ಬಳಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಡೂರು ತಾಲ್ಲೂಕಿನಲ್ಲಿ ಈ ಹಿಂದೆ ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳ ನಿರ್ಲಕ್ಷದಿಂದ ದುರುಪಯೋಗ ನಡೆದ ಹಿನ್ನಲೆಯಲ್ಲಿ ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು  ನಾಡಕಚೇರಿಗೆ ಭೇಟಿ ನೀಡಲಾಗಿದೆ. ರೈತರು ಮತ್ತಿತರ ಜನರು ನಾಡಕಚೇರಿಯ ವಿವಿಧ ಸರ್ಕಾರಿ ಸವಲತ್ತು ಗಳಿಗೆ ಅರ್ಜಿ ನೀಡಿದರೆ ಅಧಿಕಾರಿಗಳು ಸಕಾಲದಲ್ಲಿ ಮಾಹಿತಿ ನೀಡಿ , ಬಾಕಿ ಉಳಿಸದೆ ಪೂರ್ಣಗೊಳಿಸಿಕೊಡುವಂತೆ ಕಂದಾಯ ವಿಭಾಗದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ನಾಡಕಚೇರಿ ಕಟ್ಟಡ ಶಿಥಿಲಗೊಂಡಿದ್ದು ಇದನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸಾರ್ವಜನಿಕರು ಡಿಸಿಯವರಿಗೆ ಮನವಿ ಮಾಡಿದಾಗ ಉತ್ತರಿಸಿದ ಅವರು ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳಿಂದ ಈಗೀರುವ ಕಟ್ಟಡವನ್ನು ಕಂದಾಯ ಇಲಾಖೆಗೆ ಹಸ್ತಾರಿಸುವಂತೆ ಕೋರಿದ್ದು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು , ಪುರಸಭೆ ಸಂಬಂದ ಪಟ್ಟ ಘನತ್ಯಾಜ ಘಟಕ ನಿರ್ಮಾಣದ ಕಾಮಗಾರಿ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ ಅವರಿಂದ ಮಾಹಿತಿ ಪಡೆದ ಅವರು ಆದಷ್ಟು ಬೇಗ ಕಾಮಗಾರಿ ಮುಗಿಸಲು ಬೇಕಾದ ಕಡತಗಳನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿಕೊಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಬಿ.ಎಂ.ಮಲ್ಲಿಕಾರ್ಜುನ್, ಕಂದಾಯ ನಿರೀಕ್ಷಕ ಶ್ರೀನಿವಾಸ್, ಗ್ರಾಮ ಲೆಕ್ಕಾಧಿಕಾರಿಗಳಾದ ನವೀನ್ ಕುಮಾರ್, ಪ್ರಿಯಾಂಕ ಸೇರಿದಂತೆ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!