ಅದ್ದೂರಿಯಾಗಿ ತೆರೆಬಿದ್ದ ಕಡೂರಿನ ಶ್ರೀ ದುರ್ಗಾದೇವಿಯ ವಿಸರ್ಜನೆ

ಸುದ್ದಿ ಕಡೂರು : ಕಡೂರು ಪಟ್ಟಣದ ದೊಡ್ಡಪೇಟೆಯ ಛತ್ರದಬೀದಿಯಲ್ಲಿ ಶ್ರೀ ದುರ್ಗಾ ಸೇವಾ ಸಮಿತಿಯ ವತಿಯಿಂದ ಕಳೆದ 9 ದಿನಗಳಿಂದ ಪ್ರತಿಷ್ಟಾಪಿಸಲಾಗಿದ್ದ ಶ್ರೀದುರ್ಗಾದೇವಿಯನ್ನು ಮಂಗಳವಾರ ರಾತ್ರಿ ವಿಜಯದಶಮಿಯಂದು ವಿಸರ್ಜನಾ ಮಹೋತ್ಸವವು ವೈಭವಯುತವಾಗಿ ಅದ್ದೂರಿಯ ಮೆರವಣಿಗೆಯೊಂದಿಗೆ ಕೆ.ಹೊಸಳ್ಳಿಯ ಕಲ್ಯಾಣಿಯಲ್ಲಿ ತಡರಾತ್ರಿ ದೇವಿಯ ಜಲಸ್ತಂಭನಕಾರ್ಯ ಸುಸಂಪನ್ನಗೊಂಡಿತು.
ಬೆಳಿಗ್ಗೆ ಧಾರ್ಮಿಕ ಪೂಜಾಕಾರ್ಯಗಳು ನೆರವೇರಿಸಿ ನಂತರ ಅಲಂಕೃತಗೊಂಡ ಟ್ರಾಕ್ಟರ್‌ನಲ್ಲಿ ದೇವಿಯನ್ನು ಪ್ರತಿಷ್ಟಾಪಿಸಲಾಯಿತು. ಛತ್ರದಬೀದಿಯಿಂದ ಮಧ್ಯಾಹ್ನ 3 ಗಂಟೆಗೆ ವಿಸರ್ಜನಾಮಹೋತ್ಸವ ಮೆರವಣಿಗೆಗೆ ಚಾಲನೆ ದೊರಕಿತು. ಪಟ್ಟಣದ ರಾಜಬೀದಿಗಳಲ್ಲಿ ಸಾಗಿದ ದೇವಿಯ ಮೆರವಣಿಗೆಗೆ ಭಕ್ತರು ಆಕರ್ಷಕ ರಂಗೋಲಿಗಳನ್ನು ರಚಿಸಿ ದೇವಿಯ ಆಗಮನಕ್ಕೆ ಭಕ್ತಿಪೂರ್ವಕ ಸ್ವಾಗತ ಕೋರಿದರು.
ಪಟ್ಟಣದ ದೊಡ್ಡಪೇಟೆ, ಬಿ.ಎಚ್.ರಸ್ತೆ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಯು.ಬಿ. ರಸ್ತೆ, ಸಂಗೊಳ್ಳಿರಾಯಣ್ಣ ವೃತ್ತ, ಪುರಸಭೆ ರಸ್ತೆ, ಕದಂಬವೃತ್ತ, ಜೆಟಿ ರಸ್ತೆ, ಕೆ.ಎಂ. ರಸ್ತೆ, ಸುಭಾಷ್‌ನಗರ ಮಾರ್ಗವಾಗಿ ಕೆ.ಹೊಸಳ್ಳಿಯವರೆಗೆ ಉತ್ಸವದ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಹುಲಿವೇಷ, ಡ್ರಂಸೆಟ್, ವೀರಗಾಸೆ, ಚಂಡೆಮೇಳ, ಡೊಳ್ಳು, ನಾದಸ್ವರ, ಗೊಂಬೆಮೇಳ ವಿವಿಧ ಪ್ರಕಾರಗಳ ಕಲಾತಂಡಗಳ ಜೊತೆ ವಿಶೇಷವಾಗಿ ಹನುಮವೇಷ ಕಲಾತಂಡ ಮೆರವಣಿಗೆಯಲ್ಲಿ ಮತ್ತಷ್ಟು ಮೆರಗು ನೀಡಿದವು.
ದೇವಿಯ ವಿಸರ್ಜನಾ ಮಹೋತ್ಸವ ಮೆರವಣಿಗೆ ಸಾಗುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ಮಹಿಳೆಯರು ದೇವಿಗೆ ಆರತಿ ಎತ್ತುವ ಮೂಲಕ ವಿಶೇಷ ಪೂಜೆಯನ್ನು ಸಮರ್ಪಿಸಿದರು. ನೂರಾರು ಯುವಕರು ಮೆರವಣಿಗೆಯಲ್ಲಿ ಆಕರ್ಷಕ ಡಿಜೆಯ ದೇವಿ ಗೀತೆಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಉತ್ಸವದ ಮೆರವಣಿಗೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಪ್ರಸಾದದ ವಿತರಣೆ ಕಾರ್ಯ ನಡೆಸಿದರು. ಬಿ.ಎಚ್. ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾದ ಹಿನ್ನಲೆಯಲ್ಲಿ ಪಿಎಸೈ ಧನಂಜಯ್ ನೇತೃತ್ವದ ನಿಯೋಜನೆಗೊಂಡ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು.
ಈ ಸಂದರ್ಭದಲ್ಲಿ ಶ್ರೀ ದುರ್ಗಾ ಸೇವಾ ಸಮಿತಿಯ ಅಧ್ಯಕ್ಷ ಕೆ.ಪಿ. ವೆಂಕಟೇಶ್, ಸಮಿತಿಯ ಪದಾಧಿಕಾರಿಗಳಾದ ಭದ್ರಿಸ್ವಾಮಿ, ಕೆ.ಪಿ.ಶ್ರೀನಿವಾಸ್, ಪುರಸಭಾ ಸದಸ್ಯ ಯತಿರಾಜ್, ಸೋಮೇಶ್ ಶಿವಮೊಗ್ಗೆ, ವಿಕಾಸ್ ಚಂದ್ರು, ರಂಗನಾಥ್, ಎಚ್.ಆರ್. ದೇವರಾಜ್, ಕೆ.ಪಿ. ಪ್ರದೀಪ್(ಪದ್ದು), ನಾಗೇಂದ್ರ, ಗೌತಮ್, ರಾಜುಕರಿಬಡ್ಡೆ, ಹುಲಿಕೆರೆ ಮಹೇಶ್, ಆಕಾಶ್, ಸಿದ್ದೇಶ್, ರಾಜು, ಕಿರಣ್, ಮನು, ಅಜೇಯ್ ಒಡೆಯರ್, ನಲ್ಲೂರಿ ಸುರೇಶ್, ಕೋಟೆ ಭರತ್, ಈ ಸಂದರ್ಭದಲ್ಲಿ ಅಡಿಕೆ ಚಂದ್ರು, ಪಂಗ್ಲಿಮಂಜುನಾಥ್, ವಿನಯ್, ಮಣಿ ಮತ್ತಿತರಿದ್ದರು.

80 ಸಾವಿರಕ್ಕೆ ಬಾವುಟ ಹರಾಜು :
ಶ್ರೀ ದುರ್ಗಾ ದೇವಿಯ ವಿಸರ್ಜನಾ ಮಹೋತ್ಸವದಲ್ಲಿ ಇದೇ ಪ್ರಥಮ ಬಾರಿಗೆ ಬಾವುಟ ಹರಾಜು ಪ್ರಕ್ರಿಯೆ ನಡೆಸಲಾಯಿತು. ಪೈಪೋಟಿಯೊಂದಿಗೆ ಭಕ್ತರು ಹರಾಜಿನಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ಕಡೂರು ಪಟ್ಟಣದ ಲೋಹಿತ್ ನರ್ಮದಾ ಎಂಬುವವರು 80 ಸಾವಿರಕ್ಕೆ ಹರಾಜು ಕೂಗುವ ಮೂಲಕ ಪ್ರಥಮ ಬಾರಿಯ ಬೆಳ್ಳಿಬಾವುಟವನ್ನು ತಮ್ಮದಾಗಿಸಿಕೊಂಡರು.

ಗಮನಸೆಳೆದ ಕಲಾತಂಡಗಳು

ಗಮನಸೆಳೆದ ಹನುಮವೇಷ
ಮೆರವಣಿಗೆಯಲ್ಲಿ ಸಮಿತಿಯ ಪದಾಧಿಕಾರಿಗಳು
ಹುಲಿವೇಷ ಕುಣಿತ
ಚಂಡೇಮೇಳ ಕುಣಿತ

Leave a Reply

Your email address will not be published. Required fields are marked *

error: Content is protected !!