ಕಡೂರು ಪೊಲೀಸರ ದಿನಚರಿ ಮಾಹಿತಿ ಪಡೆದ ಪ್ರಜ್ಞಾಶಾಲೆಯ ಮಕ್ಕಳು

ಸುದ್ದಿ ಕಡೂರು: ಪೊಲೀಸ್ ಠಾಣೆಯ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ, ಕಾನೂನಿನ ಬಗ್ಗೆ ಮಕ್ಕಳು ತಮ್ಮ ವ್ಯಾಸಂಗದ ಬದುಕಿನಲ್ಲಿಯೇ  ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕಿದೆ ಎಂದು ಅಪರಾಧ ವಿಭಾಗದ ಪಿಎಸ್ಐ ಕೆ.ಶೋಭಾ ಅಭಿಪ್ರಾಯಿಸಿದರು.
ಕಡೂರು ಪಟ್ಟಣದ ಪ್ರಜ್ಞಾ ಶಾಲೆಯ ವಿದ್ಯಾರ್ಥಿ ಗಳು ಗುರುವಾರ ಕಡೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ಇಲಾಖೆಯ ಕಾರ್ಯವೈಖರಿಗಳನ್ನು ಠಾಣೆಯ ಚಿತ್ರಣವನ್ನು ಕಣ್ತುಂಬಿಕೊಂಡರು. ಬಳಿಕ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ ಪಿಎಸ್ಐ ಶೋಭಾ ಮಾತನಾಡಿ,
ಕಾನೂನು ಸಮಾನವಾದ ಹಕ್ಕನ್ನು ರೂಪಿಸುತ್ತದೆ. ಶಿಸ್ತು ಮತ್ತು ಸಂಯಮಕ್ಕೆ ಹೆಚ್ಚು ಒತ್ತು ನೀಡಿದಾಗ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯವಾಗಲಿದೆ.
ವಿಶೇಷವಾಗಿ ಹೆಣ್ಣು ಮಕ್ಕಳು ತಮ್ಮ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸಬೇಕು.ಅಗತ್ಯ ಕಂಡಾಗ ಮಹಿಳಾ ಪೊಲೀಸರ ಸಹಾಯ ಪಡೆಯಬೇಕು. ಮುಕ್ತವಾಗಿ ಠಾಣೆಗೆ ಬಂದು ತಮ್ಮ ಸಮಸ್ಯೆ ಹೇಳಿ ಕೊಳ್ಳಬಹುದು. ಜೀವನದಲ್ಲಿ‌ ನಿಖರವಾದ ಗುರಿಯಿಟ್ಟುಕೊಂಡು ಮುನ್ನಡೆದು ಸಾಧನೆ ಮಾಡಬೇಕು ಎಂದು ಮಕ್ಕಳ ಭವಿಷ್ಯದ ಗುರಿಯ ಬಗ್ಗೆ ಮಾಹಿತಿ ಪಡೆದುಕೊಂಡು ಹಾರೈಸಿದರು.
ಪೊಲೀಸ್‌ ಅಧಿಕಾರಿಗಳ ದಿನಚರಿ ಮಾಹಿತಿ ಪಡೆದ ಮಕ್ಕಳು
ಪೊಲೀಸರ ಕಚೇರಿ ದಿನಚರಿ, ಕಾನೂನು ಅನುಷ್ಟಾನಗೊಳಿಸುವ ಕ್ರಮ, ವೈರ್ ಲೆಸ್ ಉಪಕರಣಗಳ ಬಳಕೆ, ಪೊಲೀಸ್ ಬೀಟ್ ವ್ಯವಸ್ಥೆ, ಅಧಿಕಾರಿಗಳ ದರ್ಜೆಗಳ ವಿವರ ಮುಂತಾದವುಗಳನ್ನು ವಿದ್ಯಾರ್ಥಿಗಳು ಕುತೂಹಲಕಾರಿಯಾಗಿ ವೀಕ್ಷಿಸಿ ಮಾಹಿತಿ ಪಡೆದುಕೊಂಡರು‌.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಎಚ್.ಆರ್.ಉಮೇಶ್, ನಾರಾಯಣಪ್ಪ,
ಪ್ರಜ್ಞಾ ಶಾಲೆಯ ಮುಖ್ಯ ಶಿಕ್ಷಕಿ ಕ್ಲಾರಾ ಡಿಮೆಲ್ಲೋ, ಶಿಕ್ಷಕಿಯರಾದ ಸೌಮ್ಯ, ಶಿಲ್ಪ ಮತ್ತಿತರಿದ್ದರು‌.

Leave a Reply

Your email address will not be published. Required fields are marked *

error: Content is protected !!