ನ.2ಕ್ಕೆ ಕಡೂರು ಭಾಗದಲ್ಲಿ ಎಲ್ಲೆಲ್ಲಿ ಕರೆಂಟ್ ಇರಲ್ಲ ಚೆಕ್ ಮಾಡ್ಕೊಳ್ಳಿ

ಸುದ್ದಿ ಕಡೂರು : ಕಡೂರು ಉಪ-ವಿಭಾಗದ ವ್ಯಾಪ್ತಿಗೆ ಬರುವ 220/110/11ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಒಳಪಡುವ ಬ್ಯಾಂಕ್-2ನಲ್ಲಿರುವ ಐ.ಪಿ. ಫೀಡರ್ ಓವರ್‌ಲೋಡ್ ಆಗಿದ್ದು, ಬ್ಯಾಂಕ್-3ನಲ್ಲಿ ಕಡಿಮೆ ಹೊರೆ ಇರುವುದರಿಂದ ಐ.ಪಿ. ಫೀಡರ್‌ನ್ನು ಬ್ಯಾಂಕ್-2ನಿಂದ ಬ್ಯಾಂಕ್‌-3ಗೆ ವರ್ಗಾಯಿಸಬೇಕಾಗಿರುವುದರಿಂದ ನವೆಂಬರ್ 2ರ ಗುರುವಾರ ಬೆಳಗ್ಗೆ 9-00ರಿಂದ ಸಂಜೆ 4-00 ಗಂಟೆಯವರೆಗೆ ಕಡೂರು ಗ್ರಾಮಾಂತರ ಶಾಖಾ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯಿತಿಗಳಾದ ಮಲ್ಲೇಶ್ವರ, ಬಿಳುವಾಲ ಹಾಗೂ ಕಾಮನಕೆರೆ ಗ್ರಾಮ ಪಂಚಾಯಿತಿ ಹಾಗೂ ಬೀರೂರು ಉಪ-ವಿಭಾಗ ವ್ಯಾಪ್ತಿಗೆ ಒಳಪಡುವ ಹುಲ್ಲೇಹಳ್ಳಿ ಹಾಗೂ ಹರಳಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಹಾಗೂ ಕಡೂರು ಪಟ್ಟಣ ಶಾಖಾ ವ್ಯಾಪ್ತಿಗೆ ಒಳಪಡುವ ಹಳೇ ಬಸ್‌ಸ್ಟ್ಯಾಂಡ್ ರಸ್ತೆ, ಮಾತಾ ಲೇಔಟ್, ಕನಕ ವೃತ್ತ, ಮುದಿಯಪ್ಪ ಬಡಾವಣೆ, ರಾಜೀವ್‌ಗಾಂಧಿ ಬಡಾವಣೆ, ಎಸ್.ಎಂ. ಕೃಷ್ಣ ಬಡಾವಣೆ, ಮೂರ್ತಿಹಾಳ್,  ಕೆ.ಎಂ.ರಸ್ತೆ, ಸುಭಾಷ್‌ನಗರ, ಸಿದ್ದರಾಮೇಶ್ವರನಗರ, ಕೋಟೆ, ಕೆ. ಹೊಸಳ್ಳಿ, ಸ್ವರ್ಣಾಂಬ ಕಾಲೋನಿ, ನಜೀರ್ ಸಾಬ್ ಬಡಾವಣೆ, ಕೆ.ಎಸ್.ಆರ್.ಟಿ.ಸಿ. ಡಿಪೋ, ಈದ್ಗಾನಗರ, ತ್ಯಾಗರಾಜನಗರ, ಅಶ್ವಥ್‌ನಗರ, ವೆಂಕಟೇಶ್ವರನಗರ, ಚೆಕ್‌ಪೋಸ್ಟ್, ದೊಡ್ಡಪೇಟೆ, ಹಳೇಪೇಟೆ, ಯು.ಬಿ.ರೋಡ್, ಉಳುಕಿನಕಲ್ಲು, ಕೆ.ಎಂ.ಕೆ. ಸರ್ಕಲ್, ಮಲ್ಲೇಶ್ವರ ಸರ್ಕಲ್, ಕೆ.ಎಸ್.ಆರ್.ಟಿ.ಸಿ. ಬಸ್‌ಸ್ಟ್ಯಾಂಡ್, ವೆಂಕಟೇಶ್ವರನಗರ, ವಿದ್ಯಾನಗರ, ಈದ್ಗಾ ಮೈದಾನ, ಸೋಮೇಶ್ವರನಗರ, ಕಲ್ಗುಂಡಿ, ದೀಕ್ಷಾನಗರ, ಬನ್ನಿಮರ, ಶನೇಶ್ಚರ ದೇವಸ್ಥಾನ, ಅಂಬೇಡ್ಕರ್‌ ನಗರ, ರೆಹಮತ್‌ನಗರ, ಬೆಂಕಿ ಕಾಲೋನಿ, ವಿಜಯಲಕ್ಷ್ಮೀ ಲೇಔಟ್, ವೇದಾವತಿ ಶಾಲೆ, ಟಿ.ಕೆ.ಡಿ. ಲೇಔಟ್, ತಾಲ್ಲೂಕು ಕಛೇರಿ, ಮಸಾಲ ಡಾಬಾ, ಮರವಂಜಿ ಸರ್ಕಲ್, ಹೌಸಿಂಗ್ ಬೋರ್ಡ್, ಲಕ್ಷ್ಮೀಶನಗರ, 31 ಎಕರೆ, ಸರ್ಕಲ್ ಇನ್ಸ್‌ಪೆಕ್ಟರ್ ಕಛೇರಿ, ವೈಭವಲಕ್ಷ್ಮಿ ಬಡಾವಣೆ, ಹಾಗೂ ಇತರೆ ಕಡೂರು ಪಟ್ಟಣ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಭಾರ ಎಇಇ ಮಂಜೇಗೌಡ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!