ಪರಿಸರ ಉಳಿಸಲು ಪ್ರತಿಯೊಬ್ಬರು ಕೈಜೋಡಿಸಿ – ಕೆ.ಎಸ್. ಆನಂದ್

ಸುದ್ದಿ ಕಡೂರು : ಪರಿಸರವನ್ನು ಉಳಿಸಲು ಪ್ರತಿಯೊಬ್ಬರು ಕೈಜೋಡಿಸಬೇಕಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಟ್ಟಣದ ವೇದಾಪಾರ್ಕ್ ಅಲ್ಲಿ
ಗ್ರೀನ್‌ಪೋರ್ಸ್ ಸಂಸ್ಥೆಯ ವತಿಯಿಂದ ಕರ್ನಾಟಕ ಏಕೀಕರಣದ 50ರ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ಗಿಡಗಳ ನೆಡುವಿಕೆಗೆ ಚಾಲನೆ ನೀಡಿ ಮಾತನಾಡಿ, ರಾಜ್ಯ ಹಾಗೂ ದೇಶ ಬರಗಾಲಕ್ಕೆ ತುತ್ತಾಗುತ್ತಿದೆ. ಪರಿಸರದ ನಾಶದಿಂದಾಗಿ ಎಲ್ಲಡೆ ಮಳೆ ಕೊರತೆ ಉಂಟಾಗಲು ಕಾರಣವಾಗಿದೆ. ಪರಿಸರ ಸಮತೋಲನ ಕಾಪಾಡಿಕೊಳ್ಳಲು ಗಿಡಮರಗಳ ಅವಶ್ಯಕತೆ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಪಟ್ಟಣದಾದ್ಯಂತ ಪುರಸಭೆ ಮತ್ತು ಅರಣ್ಯ ಇಲಾಖೆಗಳ ಜೊತೆ ಸಂಘ ಸಂಸ್ಥೆಗಳು  ಸಹಯೋಗದೊಂದಿಗೆ ಸಸಿಗಳ ನಡುವಿಕೆಗೆ ಕ್ರಮ ವಹಿಸಲಾಗುತ್ತದೆ ಎಂದರು.

ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ, 2019ರಲ್ಲಿ ತಾವು ಆಯ್ಕೆಯಾದ ವಾರ್ಡಿನ ಪ್ರತಿ ಬೀದಿಗಳಲ್ಲಿ ಸುಮಾರು 800ಕ್ಕು ಅಧಿಕ ಸಸಿಗಳನ್ನು ನೆಡುವುದರ ಮೂಲಕ ಸಾರ್ವಜನಿಕರ ಪ್ರೋತ್ಸಾಹದಿಂದ 400 ಗಿಡಗಳು ಉತ್ತಮವಾಗಿ ಬೆಳೆದು ಹಸಿರೀಕರಣ ವಾರ್ಡ್ಗಳನ್ನಾಗಿ ಪರಿವರ್ತಿಸಿರುವ ಆತ್ಮತೃಪ್ತಿ ಇದೆ. ತಮಿಳುನಾಡಿನಿಂದ ಸುಮಾರು 1500 ಗುಣಮಟ್ಟದ ಸಸಿಗಳನ್ನು ಸಂಸ್ಥೆಯ ವತಿಯಿಂದ ಪುರಸಭೆಯು ತರಿಸಲಾಗಿದೆ. ವೇದಾಪಾರ್ಕ್ ಸೇರಿದಂತೆ ಪಟ್ಟಣದ ಎಲ್ಲಾ ವಾರ್ಡ್ಗಳಲ್ಲಿನ ಶಾಲೆ ಆವರಣ ಸೇರಿದಂತೆ ಅಗತ್ಯ ಜಾಗದಲ್ಲಿ ಸಸಿಗಳ ನೆಡುವಿಕೆಗೆ ಮುಂದಾಗುವ ಮೂಲಕ ಪರಿಸರ ಕಾಳಜಿಗೆ ಎಲ್ಲಾ ಸದಸ್ಯರು ತೊಡಗಿಸಿಕೊಳ್ಳಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ತೋಟದಮನೆ ಮೋಹನ್‌ಕುಮಾರ್, ಈರಳ್ಳಿರಮೇಶ್, ಮರುಗುದ್ದಿಮನು,ಗೋವಿಂದರಾಜು, ಚಿನ್ನರಾಜು, ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್, ಗ್ರೀನ್‌ಪೋರ್ಸ್ ಸಂಸ್ಥೆಯ ಮುಖ್ಯಸ್ಥ ಪ್ರದೀಪ್‌ಗೌಡ, ದಿವ್ಯ ಪ್ರದೀಪ್, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಏಕಾಂತಪ್ಪ, ಸಿದ್ದೇಶ್, ತಿಮ್ಮಯ್ಯ, ಪರಿಸರ ಅಭಿಯಂತರ ಶ್ರೇಯಸ್‌ಕುಮಾರ್, ವಾಸು, ಕೆ.ಎಂ.ಮAಜುನಾಥ್, ದಾಸಯ್ಯನಗುತ್ತಿ ಚಂದ್ರಪ್ಪ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!