ತಾವೇ ಹಣಹಾಕಿಕೊಂಡು ರಸ್ತೆ ದುರಸ್ಥಿ ಪಡಿಸಿದ ಗ್ರಾಮಸ್ಥರು

ಸುದ್ದಿ ಚಿಕ್ಕಮಗಳೂರು : ತಮ್ಮ ಊರಿನ ರಸ್ತೆಯನ್ನ ತಾವೇ ಹಣ ಹಾಕಿಕೊಂಡು ದುರಸ್ಥಿ ಮಾಡಿಕೊಂಡ ಹಳ್ಳಿಗರು!

ಅಧಿಕಾರಿಗಳು, ಜನನಾಯಕರಿಗೆ ಎಷ್ಟೇ ಮನವಿ ಮಾಡಿದರೂ ನೋ ಯೂಸ್….ತಾವೇ ಹಣ ಹಾಕಿ, ಮಣ್ಣು ತರಿಸಿಕೊಂಡು ರಸ್ತೆ ದುರಸ್ಥಿ ಮಾಡಿಕೊಂಡು ಜನಪ್ರತಿನಿಧಿಗಳ ವಿರುದ್ದ ಅಸಮಾಧಾನಗೊಂಡು. ಬೇಜವಾಬ್ದಾರಿ ಅಧಿಕಾರಿಗಳು, ಜನನಾಯಕರ ವಿರುದ್ಧ ಮಲೆನಾಡಿಗರ ಆಕ್ರೋಶವನ್ನು ಹೊರಹಾಕಿದ್ದಾರೆ.

ಎನ್.ಆರ್.ಪುರ ತಾಲೂಕಿನ ಕರ್ಕೇಶ್ವರ-ಗಬ್ಬೂರು ರಸ್ತೆಯ ದುರಸ್ಥಿಗೆ ಮುಂದಾದ ಗ್ರಾಮಸ್ಥರು ಮಣ್ಣು ತರಿಸಿಕೊಂಡು ಹದಮಾಡಿ ಸಂಚಾರಕ್ಕೆ ಅಗತ್ಯವಾದ ಕ್ರಮಗಳನ್ನು ತಾವೇ ಮಾಡಿಕೊಳ್ಳುತ್ತ ಸ್ಥಳೀಯ ಆಡಳಿತ ವ್ಯವಸ್ಥೆ ವಿರುದ್ಧ ಅಕ್ರೋಶಗೊಂಡಿದ್ದಾರೆ.

ನಮ್ ಕಡೆ ಯಾರು ಕೇಳುತ್ತಿಲ್ಲ…..

ರಾಜ್ಯ, ತಾಲೂಕು, ಪಂಚಾಯಿತಿಯಲ್ಲೂ ಕಾಂಗ್ರೆಸ್ ಸರ್ಕಾರ, ಆದ್ರೆ ರಸ್ತೆ ಇಲ್ಲ….ಕಳೆದ ಬಾರಿ ಕೆಲಸಕ್ಕೆ ಜೀವರಾಜ್ ಕೆಲಸ ಮಾಡಲು ಬಿಡುತ್ತಿಲ್ಲ ಎನ್ನುತ್ತಿದ್ರಿ…ಈಗ ಯಾರು ನಿಮಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಹಳ್ಳಿಗರ ಪ್ರಶ್ನೆಯನ್ನು ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡರಿಗೆ ಮುಂದಿಟ್ಟಿದ್ದಾರೆ‌.

Leave a Reply

Your email address will not be published. Required fields are marked *

error: Content is protected !!