ಬೀರೂರಿನಲ್ಲಿ ಪ್ರತಿಭಾಕಾರಂಜಿ

ಸುದ್ದಿ ಬೀರೂರು : ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಿದರೆ, ಕ್ರೀಯಾಶೀಲ ಮನಸ್ಸುಗಳು ಮೂಡಿ ಬರಲಿವೆ ಎಂದು ಬಿ.ಸಿ.ಎಂ.ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಅಭಿಪ್ರಾಯಪಟ್ಟರು.

ಪಟ್ಟಣದ ಗುರುಭವನದಲ್ಲಿ ಗುರುವಾರ ಅಲೆಮಾರಿ ಆಶ್ರಮ ವಸತಿ ಶಾಲೆ ಸಹಯೋಗದಲ್ಲಿ ಆಯೋಜಿಸಿದ್ದ ಬೀರೂರು ಶೈಕ್ಷಣಿಕ ವಲಯದ ಬೀರೂರು ಟೌನ್ ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು .

ಮಕ್ಕಳಲ್ಲಿ ಉತ್ತಮ ಸಂಸ್ಕಾರ ಹಾಗೂ ಗೌರವದ ಭಾವನೆ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗುವಂತೆ ಮಾಡಬೇಕಿದೆ. ಕಲೆಗೆ ಬೆಲೆಕಟ್ಟಲಾಗದು, ನಿರ್ಣಾಯಕರ ನಿರ್ಣಯ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಬಾರದು, ಅಲ್ಲದೆ ಮಕ್ಕಳು ಕೂಡ ಗೆಲುವಿನಷ್ಟೆ ಸೋಲನ್ನು ಸಮಾನಾಗಿ ಸ್ವೀಕರಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಗಂಗಾಧರ್ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಮೈಲಾರಪ್ಪ  ಅಲೆಮಾರಿ ಆಶ್ರಮ ವಸತಿ ಶಾಲೆಯ ಪ್ರಾಂಶುಪಾಲ ದೇವರಾಜ್, ಬಿ.ಆರ್.ಸಿ ಶೇಖರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್, ಸಿ.ಆರ್.ಪಿ. ವೈಶಾಲಿ, ಇಸಿಒ ಶಂಕ್ರಪ್ಪ, ಯಮುನಾ, ಕವಿತಾ, ಮಹೇಶ್, ಶಿಕ್ಷಕರಾದ ಸೌಮ್ಯ, ಸುನಿತಾ, ರಾಧ, ಜಯಂತ್ ಸೇರಿದಂತೆ ಶಿಕ್ಷಕರು ಮತ್ತು ಮಕ್ಕಳು ಇದ್ದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಬೀರೂರು ಟೌನ್ ಕ್ಲಸ್ಟರ್ ಮಟ್ಟದ ಸುಮಾರು 18ಕ್ಕೂ ಹೆಚ್ಚಿನ 400 ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಂಡಿದ್ದರು.

 

Leave a Reply

Your email address will not be published. Required fields are marked *

error: Content is protected !!