ಭಕ್ತ ಗಣಸಾಗರಕ್ಕೆ ದರ್ಶನ ನೀಡಿದ ಬಿಂಡಿಗಾ ದೇವಿರಮ್ಮ

ಸುದ್ದಿ ಚಿಕ್ಕಮಗಳೂರು : ಮಲೆನಾಡಿನ ಚಾರಣದ ಬೆಟ್ಟದ ತುದಿಯಲ್ಲಿ ವರ್ಷಕೊಮ್ಮೆ ಭಕ್ತರಿಗೆ ದರ್ಶನ ಭಾಗ್ಯ ನೀಡುವ ಜಗನ್ಮಾತೆ ಬಿಂಡಿಗಾ ಮಲ್ಲೇನಹಳ್ಳಿಯ ದೇವಿರಮ್ಮ ದೇವಿಯ ದರ್ಶನ ಪಡೆಯಲು ಅಸಂಖ್ಯಾತ ಭಕ್ತರು ಭಾನುವಾರ ಬೆಳ್ಳಂಬೆಳಿಗ್ಗೆ ಬರಿಗಾಲಲ್ಲಿ ಬೆಟ್ಟ ಹತ್ತಿ ಭಕ್ತಿಪರವಶರಾಗುತ್ತಿದ್ದಾರೆ.

ಶನಿವಾರ ತಡರಾತ್ರಿಯಿಂದಲೇ ಬೆಟ್ಟ ಹತ್ತುತ್ತಿರುವ ಭಕ್ತರು ಈಗಾಗಲೇ ಸುಮಾರು 60 ಸಾವಿರಕ್ಕೂ ಅಧಿಕ ಭಕ್ತರಿಂದ ದೇವರ ದರ್ಶನಪಡೆಯುತ್ತಿದ್ದು, 3 ಸಾವಿರ ಅಡಿಗಳ ಎತ್ತರದಲ್ಲಿ ನೆಲಸಿರುವ ಬೆಟ್ಟದ ದೇವಿರಮ್ಮ ತಾಯಿಗೆ ಭಕ್ತರಿಂದ ಹರಕೆಯ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

ದೇವಿಯ ದರ್ಶನಕ್ಕಾಗಿ ರಾಜ್ಯದ ಮೂಲೆ ಮೂಲೆಯಿಂದ  ಭಕ್ತರು ಆಗಮಿಸುತ್ತಿದ್ದಾರೆ.ದೀಪಾವಳಿಯ ಅಂಗವಾಗಿ ದೇವರಿಗೆ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಯಲಿದೆ.

 

Leave a Reply

Your email address will not be published. Required fields are marked *

error: Content is protected !!