ಸ್ಥಳೀಯ ಪುರಸಭೆ ಅನುಮತಿ ಪಡೆಯದೆ ಮಾರಾಟಕ್ಕೆ ಮುಂದಾದ ಬೀರೂರಿ‌ನ ಪಟಾಕಿ ಅಂಗಡಿಗಳು!

ಸುದ್ದಿ ಬೀರೂರು : ಬೆಳಕಿನ ಹಬ್ಬ ದೀಪಾವಳಿಗೆ ಬಹುಬೇಡಿಕೆಯಾಗಿರುವ ಪಟಾಕಿಗೆ ನಿಯಾನುಸಾರವಾಗಿ ಪಟಾಕಿ ಅಂಗಡಿಗಳನ್ನು ನಿಗಧಿತ ಸ್ಥಳದಲ್ಲಿ ಗುರುತಿಸಿ ಪಟಾಕಿ ಅಂಗಡಿಗಳನ್ನು ತೆರೆಯಲು ಅನುಮತಿಯನ್ನು ಸ್ಥಳೀಯ ತಾಲ್ಲೂಕು ಆಡಳಿತ ನೀಡುತ್ತದೆ. ಆದರೆ ಬೀರೂರು ಪಟ್ಟಣದಲ್ಲಿ ತೆರೆಯಲಾಗಿರುವ ಪಟಾಕಿ ಅಂಗಡಿಗಳಿಗೆ ಯಾವುದೇ ಅನುಮತಿ ಪಡೆಯದೆ ನಿರ್ಗಳವಾಗಿ ಮಾರಾಟಕ್ಕೆ ಮುಂದಾಗಿರುವುದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಜೊತೆಯಲ್ಲಿ ಪಟಾಕಿ ಅಂಗಡಿಗಳಲ್ಲಿ ಇರಬೇಕಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ನೇರ ಮಾರಾಟಕ್ಕೆ ಮುಂದಾಗಿರುವುದು ನೋಡಿದರೆ ಸ್ಥಳೀಯ ಪುರಸಭೆ ಅಧಿಕಾರಿಗಳು ಜಾಣ ಮೌನಕ್ಕೆ ಜಾರಿರುವುದು ಗ್ರಾಹಕರು ಕಿಡಿಕಾರುತ್ತಿದ್ದಾರೆ. ಕೂಡಲೇ ಪಟಾಕಿ ಅಂಗಡಿಗಳ ವ್ಯಾಪಾರಸ್ಥರು ನಿಯಮಾನುಸಾರವಾಗಿ ಅನುಮತಿ ಪಡೆದುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ ಎಂಬುದನ್ನು ಪುರಸಭಾ ಅಧಿಕಾರಿಗಳು ಪರಿಶೀಲಸಬೇಕಿದೆ ಎಂಬುದು ಬೀರೂರು ಪಟ್ಟಣದ ಸಾರ್ವಜನಿಕರ ಆಗ್ರಹವಾಗಿದೆ.

 

ಬೀರೂರು ಪುರಸಭೆ ವತಿಯಿಂದ ಸ್ಥಳೀಯವಾಗಿ ಪಟಾಕಿ ಅಂಗಡಿಗಳನ್ನು ತೆರೆಯಲು ಯಾವುದೇ ಅನುಮತಿ ನೀಡಿರುವುದಿಲ್ಲ. ಕೂಡಲೇ ಪರಿಶೀಲಿಸಲಾಗುವುದು.

– ವಿ.ಡಿ.ಶಾಂತಲಾ, ಮುಖ್ಯಾಧಿಕಾರಿ, ಬೀರೂರು ಪುರಸಭೆ

Leave a Reply

Your email address will not be published. Required fields are marked *

error: Content is protected !!