ಅಂಚೇಚೋಮನಹಳ್ಳಿ ವಸತಿ ಶಾಲೆಯ ಆಡಳಿತ ಮಂಡಳಿಯನ್ನು ವಿಚಾರಣೆ ಒಳಪಡಿಸಿ- ಎಬಿವಿಪಿ ಆಗ್ರಹ

ಸುದ್ದಿ ಕಡೂರು : ಇಡೀ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ನಡೆದಿರುವ ತಾಲ್ಲೂಕಿನ ಅಂಚೇಚೋಮನಹಳ್ಳಿಯ ಮೂರಾರ್ಜಿ ವಸತಿ ಶಾಲೆಯಲ್ಲಿ ಲೈಂಗಿಕ ಪ್ರಕರಣದಡಿ ಬಂಧನವಾಗಿರುವ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿ ಪಟ್ಟಣದ ಎಬಿವಿಪಿ ಕಡೂರು ಘಟಕ ತಾಲ್ಲೂಕು ಕಚೇರಿಯ ಆವರಣದಲ್ಲಿ ಸೋಮವಾರ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಚಂದು ಮಾತನಾಡಿ, ವಸತಿ ಶಾಲೆಯಲ್ಲಿ ಯಾವ ವಿದ್ಯಾರ್ಥಿನಿಯರಿಗೆ ಅನ್ಯಾಯವಾಗಿದೆ. ಪ್ರಕರಣದಲ್ಲಿ ಕಾಣದ ಕೈಗಳ ವ್ಯಕ್ತಿಗಳ ಬಗ್ಗೆಯೂ ಬಹಿರಂಗಗೊಳ್ಳಬೇಕಿದೆ. ಸಂಬಂಧಪಟ್ಟವರ ವಿರುದ್ದ ಸೂಕ್ತಕ್ರಮಗಳನ್ನು ಜರುಗಿಸಬೇಕಿದೆ. ವಸತಿ ಶಾಲೆಯಲ್ಲಿ ಇಂತಹ ಹೇಯಕೃತ್ಯದ ಘಟನೆಯು 2 ತಿಂಗಳಿನಿಂದ ನಡೆಯುತ್ತಿದೆ ಎಂಬುದು ಅತ್ಯಂತ ಬೆಚ್ಚಿಬೀಳಿಸುವ ಸಂಗತಿ. ಇದಕ್ಕೆ ಹೊಣೆಗಾರಿಕೆ ಆಗಿರುವ ಶಾಲಾ ಮಂಡಳಿಯು ಪ್ರಕರಣಕ್ಕು ನಮಗೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಲೆಯ ಪ್ರಾಂಶುಪಾಲೆಯನ್ನು ಹಾಗೂ ವಸತಿ ಶಾಲೆಯ ವಾರ್ಡನ್‌  ಸೇರಿದಂತೆ ಆಡಳಿತ ಮಂಡಳಿಯನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ವಶಕ್ಕೆ ಪಡೆಯಬೇಕಿದೆ. ಪೋಕ್ಸೊ ಕಾಯ್ದಿಯಡಿಯಲ್ಲಿ ಬಂಧನವಾಗಿರುವ ಆರೋಪಿತರಿಗೆ ಕಠಿಣವಾದ ಶಿಕ್ಷೆಗೆ ಒಳಪಡಿಸಿಬೇಕಿದೆ, ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಗ್ರೇಡ್2 ತಹಸೀಲ್ದಾರ್ ಮಂಜುನಾಥ್ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಕಡೂರು ತಾಲ್ಲೂಕು ಸಂಚಾಲಕ ರವಿತೇಜ, ಕಾರ್ಯಕರ್ತರಾದ ಸಚಿನ್, ರಮೇಶ್, ರೋಹಿತ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!