ವಸತಿ ಶಾಲೆಯ ಪ್ರಾಂಶುಪಾಲೆಯ ನಿರ್ಲಕ್ಷ್ಯದಿಂದ ಲೈಂಗಿಕ ಪ್ರಕರಣಗಳು ನಡೆದಿದೆ

ಸುದ್ದಿ ಕಡೂರು: ತಾಲ್ಲೂಕಿನ ಅಂಚೇಚೋಮನಹಳ್ಳಿ ಗ್ರಾಮದ ಮೂರಾರ್ಜಿ ವಸತಿ ಶಾಲೆಯ ಅಪ್ರಾಪ್ತೆ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಗಂಭೀರ ಸ್ವರೂಪವಾದ ಪ್ರಕರಣದ ಬಗ್ಗೆ ದೂರು ನೀಡಲು ವಿಳಂಬ ಮಾಡಿದ ವಸತಿ ಶಾಲೆಯ ಪ್ರಾಂಶುಪಾಲೇ ಘಟನೆಗೆ ನೇರ ಹೊಣೆಗಾರಳು ಎಂದು ಅಂಚೇಚೋಮನಹಳ್ಳಿ ಗ್ರಾಮದ ಮುಖಂಡ ಕೆ.ಕೆ. ಮಹೇಶ್ ಅರೋಪಿಸಿದರು.
ಗ್ರಾಮದಲ್ಲಿ  ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೇಯಕೃತ್ಯದ ಘಟನೆಯ ನಡೆದು ಎರಡು ತಿಂಗಳಾಗಿದೆ. ಗ್ರಾಮಸ್ಥರು ಸೇರಿ ಕಳೆದ ಅಕ್ಟೋಬರ್ ತಿಂಗಳ 10ರಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಸಂಬಂಧಿಸಿದ ಹಿರಿಯ ಇಲಾಖೆಗಳ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ವಸತಿ ಶಾಲೆಯ ಪ್ರಾಂಶುಪಾಲೆ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತ ದೂರು ನೀಡಲು ಹಿಂದೇಟು ಹಾಕಿ ಬಳಿಕ ಪ್ರಕರಣದ ಸ್ವರೂಪ ಗಂಭೀರವಾಗುತ್ತಿದ್ದಂತೆ ನ.7ರಂದು ದೂರು ನೀಡಿದ್ದಾರೆ. ಬಳಿಕ ಆರೋಪಿಗಳ ಬಂಧನವಾಗಿದೆ. ಇಡೀ ಪ್ರಕರಣದ ಬಗ್ಗೆ ಮಾಹಿತಿ ಇದ್ದರೂ ತಡವಾಗಿ ನೀಡಿದ್ದು ಯಾಕೆ? ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಮೂಡಿದೆ ವಸತಿ ಶಾಲೆಯ ಸಮಸ್ತ ಜವಾಬ್ದಾರಿ ಹೊತ್ತ ಪ್ರಾಂಶುಪಾಲೆಯದ್ದು ಉಡಾಫೆಯ ವರ್ತನೆಯ ಬೇಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದ್ದಾರೆ ಎಂದು ಕಿಡಿಕಾರಿದರು.

ವಸತಿ ಶಾಲೆಯ ವಿದ್ಯಾರ್ಥಿನಿಯರ ಭವಿಷ್ಯದ ಬಗ್ಗೆ ಆತಂಕಗೊಂಡು ಪೋಷಕರು ಮತ್ತು ಗ್ರಾಮಸ್ಥರು ಸೇರಿ. ಆರೋಪಿ ನರ್ಸ್ ಚಂದನ ನಡವಳಿಕೆ ಬಗ್ಗೆ ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯಾಧಿಕಾರಿಗಳು ದೂರು ಸಲ್ಲಿಸಿದ ಕೂಡಲೇ ಸ್ಪಂದಿಸಿದ ಅವರು ಚಂದನಳನ್ನು ಅಮಾನತ್ತು ಗೊಳಿಸಿ ತನಿಖೆಗೆ ಆದೇಶಿಸಿದ್ದಾರೆ. ಜಿಲ್ಲಾಧಿಕಾರಿಗಳು, ಎಸ್ಪಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಕಡೂರು ಪೊಲೀಸರ ಸಕಾರಾತ್ಮಕ ಸ್ಪಂದನೆಯಿAದ ಸುತ್ತಮುತ್ತಲ ಗ್ರಾಮಸ್ಥರು ಅಭಾರಿಯಾಗಿದ್ದು, ಆದರೆ ಈ ಪ್ರಕರಣ ಕೇವಲ ಎರಡು ವಿದ್ಯಾರ್ಥಿನಿಯರಿಗೆ ಆದ ಪ್ರಕರಣವಲ್ಲ. ಇನ್ನೂ ಹಲವಾರು ವಿದ್ಯಾರ್ಥಿನಿಯರಿಗೆ ಹೀಗೆ ಆಗಿರುವ ಬಗ್ಗೆ ಸಂತ್ರಸ್ತ ಪೋಷಕರು ಧೈರ್ಯ ತಂದುಕೊAಡು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಶಾಲೆಯಲ್ಲಿನ ಹಲವಾರು ವಿದ್ಯಾರ್ಥಿನಿಯರನ್ನು ಚಿಕ್ಕಮಗಳೂರಿಗೂ ಕರೆದೊಯ್ದಿದ್ದಾರೆ ಯಾವುದಕ್ಕೆ ಕರೆದೊಯ್ಯಲಾಯಿತು ಎಂಬ ಬಗ್ಗೆ ಬಹಿರಂಗಗೊಳ್ಳಬೇಕಿದೆ. ಆದರೆ ಮರ್ಯಾದೆಗಂಜಿ ಪೋಷಕರು ಮೌನವಹಿಸಿದ್ದಾರೆ. ಈ ಬಗ್ಗೆ ಕೂಲಂಕುಷ ತನಿಖೆಯಾಗಿ ಸತ್ಯಸತ್ಯತೆಯ ಬಗ್ಗೆ ಹೊರ ಬರಬೇಕಿದೆ ಎಂಬುದು ನಮ್ಮ ಉದ್ದೇಶವಾಗಿದೆ. ಸಂಬಂಧಿಸಿದ ಸಾಕ್ಷ್ಯ ನೀಡಲು ನಾವು ಸಿದ್ದರಿದ್ದೇವೆ. ವಸತಿ ಶಾಲೆಯ ಪ್ರಾಂಶುಪಾಲೆ ಈಗಾಗಲೇ ಹತ್ತಾರು ವರ್ಷಗಳಿಂದ ಮೊರಾರ್ಜಿ ವಸತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದೆ ವಿದ್ಯಾರ್ಥಿಯೊಬ್ಬ ಇದೇ ಶಾಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಆ ಪ್ರಕರಣ ಬೆಳಕಿಗೆ ಬಾರದೆ ಹಾಗೆಯೇ ಉಳಿಯಿತು. ಆ ಪ್ರಕರಣದ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಹೆಣ್ಣುಮಕ್ಕಳಿಗೆ ಸುರಕ್ಷೆ ದೊರೆಯಬೇಕೆಂಬುದು ನಮ್ಮೆಲ್ಲರ ಆಗ್ರಹವಾಗಿದೆ. ಇದೇ ವಸತಿ ಶಾಲೆಯಲ್ಲಿ ಯಗಟಿ ವಸತಿ ಶಾಲೆಯ ಮಕ್ಕಳೂ ವ್ಯಾಸಂಗ ಮಾಡುತ್ತಿದ್ದಾರೆ. ಎರಡೂ ಶಾಲೆಯ ಮಕ್ಕಳು ಸೇರಿ ಈ ವಸತಿ ಶಾಲೆಯಲ್ಲಿ ಮೂಲಸೌಕರ್ಯ ಕೊರತೆಯಿದೆ. ಯಗಟಿ ಶಾಲೆಯಲ್ಲಿ ಕಟ್ಟಡ ಕೊರತೆಯಿಂದ ಆಲ್ಲಿಯ ಶಾಲೆಯ ವಿದ್ಯಾರ್ಥಿಗಳೂ ಇಲ್ಲಿಯೇ ಇದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಗಮನಹರಿಸಿ ಹಲವು ಅಪಸ್ವರಗಳಿಂದ ಕೂಡಿರುವ ವಸತಿ ಶಾಲೆಯ ಕಳಂಕದಿAದ ಮುಕ್ತಗೊಳಿಸಿಕೊಡಬೇಕಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಜಪ್ಪ, ಮಲ್ಲಪ್ಪನಹಳ್ಳಿ ಧರಣೇಶ್, ರಾಜಪ್ಪ, ಅಣ್ಣಪ್ಪನಾಯ್ಕ್, ಸೇವಾನಗರದ ಪ್ರದೀಪ್, ಮಹೇಶಾಚಾರ್, ಗಿರೀಶ್, ಸಿ.ಆರ್. ಮಧು, ದಿಲೀಪ್ ಮತ್ತಿತರಿದ್ದರು.

 ಗ್ರಾಮಸ್ಥರಲ್ಲಿ ಕಾಡುತ್ತಿರುವ ಪ್ರಶ್ನೆಗಳು : ಆರೋಗ್ಯ ಇಲಾಖೆಯಿಂದ ಅಮಾನತ್ತುಗೊಂಡರೂ ವಸತಿಗೃಹದಲ್ಲೆ ಉಳಿದ ಚಂದನ ತನ್ನ ವಸತಿಗೃಹಕ್ಕೆ ವಿದ್ಯಾರ್ಥಿನಿಯರನ್ನು ಕರೆದುಕೊಂಡು ಬಂದದ್ದು ಹೇಗೆ? ಸುರೇಶನ ಸಹಾಯ ಪಡೆದು ಕರೆದುಕೊಂಡು ಬಂದದ್ದೇ ಆದರೆ ವಸತಿ ಶಾಲೆಯ ಪ್ರಾಂಶುಪಾಲೆ ಮತ್ತು ವಾರ್ಡನ್ ಜವಾಬ್ದಾರಿ ಏನು? ಇದುವರೆಗೂ ಶಾಲೆಯ ಪ್ರಾಂಶುಪಾಲೆ ಮತ್ತು ಆಡಳಿತ ಮಂಡಳಿಯ ವಿಚಾರಣೆಯಾಗಿಲ್ಲ? ಶಾಲೆಯಲ್ಲಿ ಇಂತಹ ಹೇಯಕೃತ್ಯದ ಘಟನೆ ನಡೆದರೂ ಸುಮಾರು ಒಂದು ತಿಂಗಳ ಕಳೆದ ನಂತರ ದೂರು ನೀಡಲಾಗಿದೆ. ಇದರಲ್ಲಿ ಯಾರನ್ನಾದರೂ ರಕ್ಷಣೆ ಮಾಡಲು ಈ ವಿಳಂಬ ಮಾಡಲಾಗಿದೆಯೇ? ವಿದ್ಯಾರ್ಥಿನಿಯರು ಒಂದು ರಾತ್ರಿ ಹಾಸ್ಟೆಲ್ ಒಳಗೆ ಇರಲಿಲ್ಲವೆಂದರೆ ಅದಕ್ಕೆ ವಾರ್ಡನ್ ಅನುಮತಿಯಿತ್ತೆ? ಅವರ ಪೋಷಕರಿಗೆ ಇದನ್ನು ತಿಳಿಸಿದ್ದಾರೆಯೇ? ಘಟನೆಗಳು ನಡೆದರೂ ಏನೂ ಆಗಿಲ್ಲವೆಂಬ ನಿರ್ಲಕ್ಷö್ಯ ವಹಿಸಿರುವ ಪ್ರಾಂಶುಪಾಲೆಯ ಜವಬ್ದಾರಿ ಏನಿದೆ? ಎಂಬುದರ ಬಗ್ಗೆ ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!