ಸುದ್ದಿ ತರೀಕೆರೆ : ಕಲ್ಲಾಟಾಂಮ್ ಬಾಂಬು ಸಿಡಿದು ಯುವಕನೋರ್ವ ಸಾವನ್ನಪ್ಪಿದ ಘಟನೆ ತರೀಕೆರೆ ತಾಲ್ಲೂಕಿನ ಸುಣ್ಣದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಣ್ಣದಹಳ್ಳಿ ಗ್ರಾಮದ ಯುವಕ ಪ್ರದೀಪ್ (30) ಮೃತ ದುರ್ದೈವಿಯಾಗಿದ್ದು, ಪಟಾಕಿ ಸಿಡಿದ ರಭಸಕ್ಕೆ ನೆಲದಿಂದ 5 ಅಡಿ ಹಾರಿ ಬಿದ್ದ ಯುವಕ ಮೃತಪಟ್ಟಿದ್ದು ಚೇರ್ ಕೆಳಗೆ ಪಟಾಕಿ ಇಟ್ಟುಕೊಂಡು ಕೂತಿದ್ದ ಯುವಕ ಅಡಕೆ ಗೋಟು (ಕಲ್ಲು ಆಟಂಬಾಂಬ್) ಪಟಾಕಿಯನ್ನ ಚೇರ್ ಕೆಳಗೆ ಇಟ್ಟುಕೊಂಡು ಕೂತಿದ್ದ ಎನ್ನಲಾಗಿದೆ.
ಪಟಾಕಿ ಕಿಡಿ ಸಿಡಿದ ರಭಸಕ್ಕೆ ಬ್ಲಾಸ್ಟ್ ಆದ ಚೀಲದಲ್ಲಿದ್ದ ಅಡಿಕೆಗೋಟು ದೇಹದ ಸೂಕ್ಷ್ಮ ಜಾಗಕ್ಕೆ ಗಂಭೀರ ಒದೆ ಬಿದ್ದು ಅಸುನೀಗಿದ್ದು, ಪ್ರದೀಪ್ ಜೊತೆಗಿದ್ದ ಮತ್ತೋರ್ವ ಯುವಕನಿಗೆ ಗಂಭೀರ ಗಾಯವಾಗಿದೆ. ಮೂವರು ಮಕ್ಕಳಿಗೂ ಗಾಯವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಲು ಆಟಂಬಾಂಬ್ ಸಿಡಿದ ರಭಸಕ್ಕೆ ಮನೆಯ ಗ್ಲಾಸ್ ಗಳು ಪುಡಿ-ಪುಡಿಯಾಗಿದ್ದು ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.