ದೀರ್ಘಾಯುಷು ಪಡೆಯಲು ಆರ್ಯುವೇದ ಔಷಧ ಪದ್ದತಿಬಹುಮುಖ್ಯ – ನಿವೃತ್ತಎಸಿಎಫ್ ಬಸವರಾಜಪ್ಪ

ಸುದ್ದಿಕಡೂರು : ದೀರ್ಘಾಯುಷು ಪಡೆಯಲು ಆರ್ಯುವೇದ ಔಷಧ ಪದ್ದತಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದು ನಿವೃತ್ತ ಎಸಿಎಫ್ ಬಸವರಾಜಪ್ಪ ತಿಳಿಸಿದರು. ತಾಲ್ಲೂಕಿನ ಕುಪ್ಪಾಳು ಗ್ರಾಮದಲ್ಲಿ ಆಯುಷ್ ಇಲಾಖೆ, ಗ್ರಾಪಂ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಉಚಿತ ಆಯುಷ್ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ, ನಮ್ಮ ದೇಶದ ಪ್ರಾಚೀನ ಔಷಧಿ ಪದ್ದತಿಯಾಗಿರುವ ಆರ್ಯುವೇದ ಪದ್ದತಿಯಲ್ಲಿ ಆರೋಗ್ಯಯುತ ಬದುಕನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದರು.

ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಎಸ್. ಗೀತಾ ಮಾತನಾಡಿ, ನಮ್ಮ ಆರ್ಯುವೇದ ಪದ್ದತಿಯಲ್ಲಿ ತಿಳಿಸಿರುವ ದಿನಚರ್ಯ ಮತ್ತು ಋತುಚರ್ಯಗಳನ್ನು ಪಾಲಿಸಿದರೆ ರೋಗಗಳನ್ನು ಬರದಂತೆ ತಡೆಗಟ್ಟಬಹುದಾಗಿದೆ. ಇಲಾಖೆಯ ವತಿಯಿಂದ ವಿವಿಧ ಗ್ರಾಮಗಳಲ್ಲಿ ಆಯೋಜಿಸುತ್ತಿರುವ ಉಚಿತಾ ಚಿಕಿತ್ಸಾ ಶಿಬಿರಗಳ ಪ್ರಯೋಜನವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕಿದೆ ಎಂದರು.

ಈ ಸಂದರ್ಭದಲ್ಲಿ ಉಚಿತ ನೇತ್ರ ತಪಾಸಣೆ ನಡೆಸಲಾಯಿತು. ಆರ್ಯುವೇದ ವೈದ್ಯರಾದ ಡಾ. ಶಿವಪ್ರಸಾದ್, ಡಾ. ದೊಡ್ಡಗುಣಿ, ಡಾ. ಶ್ರೀನಿವಾಸ್, ಡಾ. ಮಂಜುನಾಥ್, ಡಾ. ಲಕ್ಷö್ಮಣ್ ಮಾನೆ, ಡಾ. ಅರವಿಂದ, ಡಾ. ರತ್ನಶೇಖರ್, ಡಾ. ಹೇಮಂತ್, ಯೋಗ ಶಿಕ್ಷಕ ಬಿ.ಎಂ. ಗಿರೀಶ್, ಚಂದ್ರುಶೇಖರ್, ಸಿಎಚ್‌ಒ ಬಸವರಾಜ್, ಗ್ರಾಪಂ ಸದಸ್ಯ ತೀರ್ಥಪ್ಪ, ನಂಜುಡಾರಾಧ್ಯ, ಆಶಾ ಕಾರ್ಯಕರ್ತೆಯರು ಮತ್ತು ಅಂಗವನಾಡಿ ಕಾರ್ಯಕರ್ತೆರು ಇದ್ದರು.

Leave a Reply

Your email address will not be published. Required fields are marked *

error: Content is protected !!