ನ. 26-27ಕ್ಕೆ ಕೆ.ಬಿದರೆ ದೊಡ್ಡಮಠದಲ್ಲಿ ಕಾರ್ತಿಕೋತ್ಸವ

ಸುದ್ದಿ ಕಡೂರು : ತಾಲ್ಲೂಕಿನ ಕೆ.ಬಿದರೆ ದೊಡ್ಡ ಮಠದ ಶ್ರೀಗುರು ಪ್ರಭು ದೊಡ್ಡಜ್ಜಯ್ಯನವರ 79ನೇ ಕಾರ್ತಿಕ ಪೌರ್ಣಮಿ ಜಾತ್ರಾ ಮಹೋತ್ಸವ ನವೆಂಬರ್ 26 ಮತ್ತು 27 ರಂದು ಶ್ರೀ ಮಠದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ನವೆಂಬರ್ 26 ರಂದು ಬೆಳಿಗ್ಗೆ 7 ಗಂಟೆಗೆ ಧ್ವಜಾರೋಹಣ,ನಂತರ ಗಂಗಾಪೂಜೆ,ಗಣಪತಿ ಪೂಜೆ,ಸ್ವಸ್ತಿರ್ವಾಚನ, ನಾಂದಿಸಮಾರಾಧನ,ಪAಚಕಲಶ ಸ್ಥಾಪನೆ, ನವಗ್ರಹಾರಾಧನೆ,ನಂತರ ಸಾಮೂಹಿಕ ಶಿವದೀಕ್ಷೆ ನೆರವೇರುತ್ತದೆ. 9.30 ರಿಂದ ಶ್ರೀಗುರು ದೊಡ್ಡಜ್ಜಯ್ಯನವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ರಾಜೋಪಚಾರ, ಮಧ್ಯಾಹ್ನ 2 ಯಿಂದ ಗಣಪತಿ ಹೋಮ, ನವಗ್ರಹ ಹೋಮ, ಪ್ರಧಾನ ರುದ್ರ ಹೋಮ, ಜಯಾದಿಹೋಮ ಪೂರ್ಣಾವತಿ,ಮಹಾಮಂಗಳಾರತಿ, ಸಂಜೆ 6 ಗಂಟೆಗೆ ಊರಿನ ರಾಜಬೀದಿಗಳಲಿ ಮದ್ದುಗುಂಡಿನ ಸುರಿಮಳೆ, ತುಮಕೂರಿನ ಕರಡಿ ರವಿರಾಜ್ ಮತ್ತು ತ್ಯಾಗರಾಜ್ ಸಂಗಟಿಗರಿಂದ ಚಿಟ್ಟಿಮೇಳ ಮತ್ತು ನಾಗವಂಗಲ ಚೇತನ್ ಕಲಾಕಾರ್ ಅವರಿಂದ ಭದ್ರಕಾಳಿ ವೀರಭದ್ರ ನೃತ್ಯದೊಂದಿಗೆ ಶ್ರೀಗುರು ದೊಡ್ಡಜ್ಜಯ್ಯನವರ ಮುತ್ತಿನ ಪಲ್ಲಕ್ಕಿ ಉತ್ಸವ ನೆರವೇರಲಿದೆ.

ನವೆಂಬರ್ 27 ರಂದು ಬ್ರಾಹ್ಮಿ ಮಹೂರ್ತದಲ್ಲಿ ಶ್ರೀಗುರು ದೊಡ್ಡಜ್ಜಯ್ಯನವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಮಹಾಮಂಗಳಾರತಿ ನೆರವೇರುತ್ತದೆ.ನಂತರ ಬೆಳಿಗ್ಗೆ 8.3 ಕ್ಕೆ ದೊಡ್ಡಜ್ಜಯ್ಯನವರ ಅಡ್ಡಪಲ್ಲಕ್ಕಿ ಉತ್ಸವ, ಬಸವಶ್ರೀ ಮಹಿಳಾ ವೀರಗಾಸೆ ಆಸಂಧಿ ಕಲಾತಂಡದೊಂದಿಗೆ ನೇರವೇರಿಲಿದೆ. ಗುಗ್ಗಳ ಸೇವೆ ನಂತರ ಶ್ರೀಗುರುಗಳಿಗೆ ಉಯ್ಯಾಲೋತ್ಸವ ನೆರವೇರಲಿದೆ.ನಂತರ 11.30 ಕ್ಕೆ ಧರ್ಮ ಜಾಗೃತಿ ಸಮಾರಂಭ ನಡೆಯಲಿದ್ದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಹೊನ್ನವಳ್ಳಿ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ದೊಡ್ಡಮೇಟಿಕುರ್ಕೆ ವಿರಕ್ತ ಮಠದ ಶಶಿಶೇಖರ ಸಿದ್ದಬಸವ ಸ್ವಾಮೀಜಿ, ಹಾರನಹಳ್ಳಿ ಕೋಡಿಮಠದ ಉತ್ತರಾಧಿಕಾರಿ ಚೇತನ್ ಕುಮಾರ್ ಮರಿದೇವರು,ಐನಳ್ಳಿ ಪ್ರಶಾಂತ್ ಕುಮಾರ್ ದೇವರು,ಕುಪ್ಪೂರು ಗದ್ದಿಗೆ ಮಠದ ಉತ್ತರಾಧಿಕಾರಿ ತೇಜಸ್ ಕುಮಾರ್ ದೇವರು,ಶಾಸಕ ಕೆ.ಎಸ್.ಆನಂದ್, ಮಾಜಿ ಶಾಸಕರುಗಳಾದ ವೈ.ಎಸ್.ವಿ.ದತ್ತ, ಬೆಳ್ಳಿ ಪ್ರಕಾಶ್ ಕಾರ್ಯಕ್ರಮದ ಭಾಗವಹಿಸಲಿದ್ದಾರೆ. ಸಾಹಿತಿ ಕಲ್ಕಟ್ಟೆ ನಾಗರಾಜರಾವ್ ಉಪನ್ಯಾಸ ನೀಡಲಿದ್ದಾರೆ ಎಂದು  ದೊಡ್ಡಮಠದ ಶ್ರೀ ಪ್ರಭುಕುಮಾರ ಶಿವಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!