ಕಡೂರಿನಲ್ಲಿ ನೈಜಸಂತೆ ಸ್ಥಾಪಿಸಿದ ಬಾಲಕಿಯರ ಶಾಲೆಯ ಮಕ್ಕಳು

ಸುದ್ದಿಕಡೂರು : ಪಟ್ಟಣದ ಕೆ.ಎಂ. ರಸ್ತೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ ಮಕ್ಕಳಿಂದ ಶನಿವಾರ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ ಮಕ್ಕಳ ಸಂತೆಯು ನೈಜ ವ್ಯಾಪಾರಸ್ಥರ ಸಂತೆಯನ್ನು ಮೀರಿಸುವಂತೆ ವ್ಯಾಪಾರ ಜೋರಾಗಿಯೇ ನಡೆಯಿತು.

ಶಾಲೆಯ 160ಕ್ಕು ಹೆಚ್ಚು ಮಕ್ಕಳು ಸಂತೆಯಲ್ಲಿ ಅಂಗಡಿಗಳನ್ನು ಹಂಚಿಕೊಂಡು ವ್ಯಾಪಾರ ವಹಿವಾಟು ನಡೆಸಿದರು. ಸಂತೆಯಲ್ಲಿ ವಿವಿಧ ಬಗೆಯ ಸೊಪ್ಪು, ತರಕಾರಿಗಳು, ಬೇಲ್‌ಪುರಿ, ತಂಪುಪಾನೀಯಾ, ಹಣ್ಣುಗಳು ಸೇರಿದಂತೆ ಹಲವು ಖ್ಯಾದ್ಯ ವಸ್ತುಗಳನ್ನು ಮಾರಾಟ ಮಾಡಲಾಯಿತು.

ಪರಸ್ಪರ ಸ್ಪರ್ಧಾ ಮನೋಭಾವದಿಂದ ಮಕ್ಕಳು ನಾವೇ ಹೆಚ್ಚು ವ್ಯಾಪಾರ ಮಾಡಬೇಕು ಎಂಬ ಛಲದಿಂದ ಪೋಷಕರನ್ನು ಹಾಗೂ ಗ್ರಾಹಕರನ್ನು ಕೂಗಿ ಕೂಗಿ ಹೇಳುತ್ತ ಕರೆದು ತಮ್ಮ ಅಂಗಡಿಯ ಸಾಮಾಗ್ರಿ ಖರೀದಿಸಲು ಒತ್ತಾಯಿಸುತ್ತಿದ್ದರು.

ಪೋಷಕರು ಸೇರಿದಂತೆ ಸಾರ್ವಜನಿಕರು ಗ್ರಾಹಕರಾಗಿ ಬಂದು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಶಾಲಾ ಆವರಣವು ನೈಜ ಸಂತೆಯಾಗಿ ಗಿಜಿಗುಟುತ್ತಿತ್ತು.

ಕೆಲ ಪೋಷಕರು ಚೌಕಾಸಿ ವ್ಯಾಪಾರವು ನಡೆಯುತ್ತಿದ್ದ ಬಗ್ಗೆ ಹಾಗೂ ಗ್ರಾಹಕರನ್ನು ತಮ್ಮತ್ತ ಸೆಳೆಯುವಲ್ಲಿ ವಿದ್ಯಾರ್ಥಿಗಳು ಅನುಸರಿಸಿದ ತಂತ್ರಗಳು ಗಮನಸೆಳೆದವು, ಲಾಭ-ನಷ್ಟಗಳನ್ನು ವಿದ್ಯಾರ್ಥಿಗಳು ಹಾಕಿರುವ ಬಂಡವಾಳಕ್ಕೆ ಹಾಗೂ ರೈತರು ಕಷ್ಟಪಟ್ಟು ಬೆಳೆದಿರುವ ತರಕಾರಿಗಳ ವಾಸ್ತವ ಚಿತ್ರಣದ ಪ್ರಾತ್ಯಕ್ಷಿಕೆ ನೀಡುತ್ತಿದ್ದ ಬಗ್ಗೆ ಮಕ್ಕಳ ವ್ಯವಹಾರ ಜ್ಞಾನಕಂಡು ಪಾಲಕರು ಹಾಗೂ ಶಾಲೆಯ ಶಿಕ್ಷಕರು ಸಂತಸಗೊAಡರು. ಮಕ್ಕಳ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಶಾಲೆಯ ಅಡುಗೆ ಸಹಾಯಕಿಯರು ಸಹ ಮಕ್ಕಳ ಸಂತೆಯಲ್ಲಿಯೇ ಅಡುಗೆಗೆ ಬೇಕಾದ ತರಕಾರಿಗಳನ್ನು ಖರೀದಿಸಿ ಮಕ್ಕಳಿಗೆ ಉಣಬಡಿಸುತ್ತ ಸಂಭ್ರಮಪಟ್ಟರು.

ಮಕ್ಕಳ ಸಂತೆ ಉದ್ಘಾಟಿಸಿದ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ವಿಜಯ್‌ಕುಮಾರ್ ಮಾತನಾಡಿ, ಪಠ್ಯದ ಜೊತೆಗೆ ಮಾರುಕಟ್ಟೆಯ ನೈಜ ಚಿತ್ರಣದ ಮಕ್ಕಳಿಗೆ ಬಾಲ್ಯದಲ್ಲಿಯೇ ಅರಿವು ಮೂಡಿಸಿಕೊಂಡಾಗ ಮಗುವಿನಲ್ಲಿ ಸಾಮಾಜಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ವಿದ್ಯಾರ್ಥಿ ದೆಸೆಯಲ್ಲೇ ವ್ಯವಹಾರ, ಉದ್ಯಮ ಶೀಲತೆ ಕುರಿತು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸರಕಾರ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯವಾದದ್ದು ಎಂದರು.

ಶಾಲೆಯ ಮುಖ್ಯೋಪಾಧ್ಯಯೆ ಬಿ. ರೇಣುಕಮ್ಮ ಮಾತನಾಡಿ,  ಶಾಲಾ ಮಕ್ಕಳು ಕಲಿಕೆಯ ಹಂತದಲ್ಲಿಯೇ ವ್ಯವಹಾರಿಕ ಜ್ಞಾನವನ್ನು ಸಂಪಾದಿಸಿಕೊಳ್ಳುವುದು ಅವಶ್ಯಕವಾಗಿದ್ದು, ಈ ಹಿನ್ನಲೆಯಲ್ಲಿ ಶಿಕ್ಷಕರ ಬಳಗದ ಉತ್ತೇಜನದಿಂದ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ವ್ಯವಹಾರಿಕ ಜ್ಞಾನವನ್ನು ನೀಡುವ ನಿಟ್ಟಿನಲ್ಲಿ ಮಕ್ಕಳ ಸಂತೆಯನ್ನು ಆಯೋಜಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಎಸ್ಡಿಎಂಸಿ ಸದಸ್ಯರಾದ ಫೈಯೋಜ್, ಅನ್ನಪೂರ್ಣ, ಶಾಲೆಯ ಶಿಕ್ಷಕರಾದ ಲಕ್ಷö್ಮಣ್, ನೇತ್ರಮ್ಮ, ಪದ್ದಮ್ಮ, ಪ್ರತಿಭಾ, ಶಂಕರಮ್ಮ, ಪ್ರಶಾಂತ್, ಲತಾ, ಪ್ರೀತಮ್, ಸುಜಾತ, ಗಿರೀಶ್, ಮಂಜುನಾಥ್, ಮೋನಿಕಾ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!