ಶಾರದ ಎಲೈಟ್ ರೂರಲ್ ಶಾಲೆಯ ಮಕ್ಕಳಿಂದ ಸ್ನಾಕ್ಸ್‌ ಬಜಾರ್‌ ಮೇಳ

ಸುದ್ದಿ ಕಡೂರು : ಪಟ್ಟಣದ ಬಂಡಿಕೊಪ್ಪಲು ರಸ್ತೆಯಲ್ಲಿರುವ ಶಾರದ ಎಲೈಟ್ ರೂರಲ್ ಶಾಲೆಯ ಮಕ್ಕಳು ಶನಿವಾರ ಸ್ನಾಕ್ಸ್ ಬಜಾರ್ ಮೇಳವನ್ನು ಹಮ್ಮಿಕೊಂಡಿದ್ದರು. ಶಾಲೆಯಲ್ಲಿ ಬಜಾರ್‌ನಲ್ಲಿ ಮಾರುವ ಸ್ನಾಕ್ಸ್ ಗಳ ಪ್ರಾತ್ಯಕ್ಷಿಕೆಯನ್ನು ಮಕ್ಕಳು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ವಿಜಯಲಕ್ಷ್ಮೀ ಮಾತನಾಡಿ, ಶಾಲಾ ಮಕ್ಕಳಿಗೆ ಬಾಲ್ಯದಲ್ಲಿ ವ್ಯವಹಾರದ ಜ್ಞಾನವೃದ್ದಿಗೊಳ್ಳಲು ಶಾಲೆಯ ವತಿಯಿಂದ ವಿಶೇಷವಾದ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಮಕ್ಕಳು ಕಲಿಕೆಯ ಜೊತೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಒತ್ತುನೀಡಲು ಶಾಲೆಯ ಆಡಳಿತ ಮಂಡಳಿ ಉತ್ತೇಜನ ನೀಡುತ್ತಿದೆ ಎಂದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಮತ್ತಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!