ಪ್ರತಿಹಂತದಲ್ಲೂ ನಮ್ಮ ಕನ್ನಡ ಭಾಷಾ ಪ್ರೇಮವನ್ನು ಬಳಸಿ – ರಮೇಶ್‌ನಾಗವಾರ

ಸುದ್ದಿ ಕಡೂರು : ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನವಿದ್ದು, ಪ್ರತಿಹಂತದಲ್ಲೂ ನಮ್ಮ ಕನ್ನಡ ಭಾಷಾ ಪ್ರೇಮವನ್ನು ಬಳಿಸಿದಾಗ ಮಾತೃಭಾಷೆಯನ್ನು ಗಟ್ಟಿಗೊಳಿಸಲು ಸಾಧ್ಯವಾಗಲಿದೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ರಮೇಶ್‌ನಾಗವಾರ ತಿಳಿಸಿದರು.
ತಾಲ್ಲೂಕಿನ ಯಗಟಿ ಗ್ರಾಮದಲ್ಲಿ ಶನಿವಾರ ಕನ್ನಡರಾಜ್ಯೋತ್ಸವ ಆಚರಣಾ ಸಮಿತಿ, ಶಕ್ತಿಗಣಪತಿ ಸೇವಾ ಸಮಿತಿ ಹಾಗೂ ಕರವೇ ಪ್ರವೀಣ್ ಶೆಟ್ಟಿ ಬಣದ ಹೋಬಳಿ ಘಟಕದ ಸಹಯೋಗದೊಂದಿಗೆ ಬಸ್‌ನಿಲ್ದಾಣದ ವೃತ್ತದಲ್ಲಿ ನಡೆದ ಕನ್ನಡರಾಜ್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿ, ಆಂಗ್ಲತನದ ವೃತ್ತಿ ಬದುಕಿನೊಂದಿಗೆ ಕನ್ನಡತನದಲ್ಲಿ ಬದುಕಿದ ಅನೇಕ ಚೇತನಗಳು, ಕನ್ನಡಕ್ಕೆ ವಿಶಿಷ್ಟವಾದ ಘನತೆಯನ್ನು ತಂದುಕೊಟ್ಟಿದ್ದಾರೆ. ಕನ್ನಡವು ಅನ್ನಕೊಡುವ ಭಾಷೆಯಾಗಿದ್ದು, ನಾವು ಹೇಗೆ ದುಡಿಸಿಕೊಳ್ಳುತ್ತೇವೆ ಎಂಬ ಆಧಾರದ ಮೇಲೆ ನಿಂತಿದೆ. ಈ ನಿಟ್ಟಿನಲ್ಲಿ ಯುವಪೀಳಿಗೆಯು ಕನ್ನಡತನವನ್ನು ಉಳಿಸಿಬೆಳೆಸು ಜವಬ್ದಾರಿಯನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.

ಕಸಾಪ ಪ್ರವೀಣ್ ಶೆಟ್ಟಿ ಬಣದ ತಾಲ್ಲೂಕು ಅಧ್ಯಕ್ಷ ಸತೀಶ್ ಮಾತನಾಡಿ, ಕನ್ನಡ ಭಾಷೆ ಶಾಸ್ತಿçÃಯ ಸ್ಥಾನಮಾನದೊಂದಿಗೆ ಶ್ರೀಮಂತ ಭಾಷೆಯಾಗಿದೆ. ಭಾಷಾ ಶುದ್ದತೆಯನ್ನು ಕಾಪಾಡಲು ಕೇಂದ್ರಿಕರಿಸಿದ ಹಿನ್ನಲೆಯಲ್ಲಿ ಇಂದು ಅನೇಕ ಭಾಷೆಗಳು ಅಳಿವಿನ ಅಂಚಿಗೆ ಬಂದಿದೆ. ಆದರೆ ಕನ್ನಡ ಜನ ಸಾಮಾನ್ಯರ ಭಾಷೆಯಾಗಿದ್ದು ಅಂತಹ ಯಾವುದೇ ಅಳಿವಿನ ಆತಂಕಗಳಿಲ್ಲ. ಈ ಹಿನ್ನಲೆಯಲ್ಲಿ ನಾಡುನುಡಿಯ ವಿಚಾರದ ಹೋರಾಟದಲ್ಲಿ ರಕ್ಷಣಾ ವೇದಿಕೆಯ ಘಟಕವು ನಿರಂತರವಾಗಿ ಕಾರ್ಯಚಟುವಟಿಕೆಯಿಂದ ಕೂಡಿರಲಿದೆ ಎಂದರು.
ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ. ರೇವಣ್ಣ ಉಪನ್ಯಾಸ ನೀಡಿದರು. ಯಗಟಿ ಗ್ರಾಪಂ ಅಧ್ಯಕ್ಷೆ ಕಲಾವತಿ ವೆಂಕಟೇಶ್, ಕರವೇ ಪ್ರವೀಣ್‌ಶೆಟ್ಟಿ ಬಣದ ಹೋಬಳಿ ಘಟಕದ ಅಧ್ಯಕ್ಷ ರುದ್ರಾಚಾರ್, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶರತ್‌ಕುಮಾರ್, ಭರತ್‌ಕುಮಾರ್, ಜನಜಾಗೃತಿ ವೇದಿಕೆಯ ಶಿವಲಿಂಗಸ್ವಾಮಿ, ರಘುರಾಮ್, ಚಂದ್ರುಶೇಖರ್, ಶ್ರೀನಿವಾಸ್, ಮಲ್ಲಿಕಾರ್ಜುನ್, ಅಭಿಷೇಕ್, ಬಸವರಾಜ್, ಸುನೀಲ್, ಸತೀಶ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!