ಕಡೂರಿನಲ್ಲಿ ಡಿಎಸ್‌ಎಸ್‌ ಸಂಘಟನೆ ವತಿಯಿಂದ ನಡೆದ ʼಸಂವಿಧಾನ ಸಮರ್ಪಣಾ ದಿನʼ

ಸುದ್ದಿ ಕಡೂರು : ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಭಾರತದ ಸಂವಿಧಾನವು ಸರ್ವರಿಗೂ ಸಮಬಾಳು-ಸಮಪಾಲು ನೀಡಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಪಟ್ಟಣದಲ್ಲಿ ಡಿಎಸ್‌ಎಸ್ ಸಂಘಟನೆಗಳ ವತಿಯಿಂದ ಭಾನುವಾರ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ ಎಂಬ ಹೆಮ್ಮೆಯನ್ನು ನಮಗೆ ತಂದುಕೊಟ್ಟಿರುವುದು ನಮ್ಮ ಸಂವಿಧಾನ. ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲೂ ಸಹೋದರತೆ ಮೂಡಿಸುವುದಕ್ಕೆ ರಾಷ್ಟ್ರಕ್ಕೆ ಸಂವಿಧಾನ ಅರ್ಪಣೆಗೊಂಡಿರುತ್ತದೆ. ಇದರಿಂದ ದೇಶದ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ‍್ಯವನ್ನು ಸ್ಥಾನ-ಮಾನ ಮತ್ತು ಅವಕಾಶಗಳ ಸಮಾನತೆಯ ಅವಕಾಶ ಲಭಿಸಿದೆ ಎಂದರು.
ಅಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ನವೆಂಬರ್ 26, ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನವಾಗಿದೆ. 1949ರ ನವೆಂಬರ್ 26 ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಇದರ ಅಂಗವಾಗಿಯೇ ನಾವು ಇಂದು ಸಂವಿಧಾನ ದಿನವನ್ನು ಆಚರಣೆ ಮಾಡುತ್ತಿದ್ದೇವೆ. ಪ್ರತಿ ಮನುಷ್ಯನ ಹುಟ್ಟು ಸಾಧಾರಣ ಪ್ರಕ್ರಿಯೆ. ಹಲವು ಶಾಸ್ತç ಮತ್ತು ಸಮುದಾಯದ ಬುಡಕಟ್ಟಿನ ವ್ಯವಸ್ಥೆಯನ್ನು ಪ್ರಪಂಚಕ್ಕೆ ಪರಿಚಯಿಸುವುದೆ ಈ ನಮ್ಮ ಸಂವಿಧಾನ. ಅಂಬೇಡ್ಕರ್ ರವರು ಶೋಷಿತ ತಳಸಮುದಾಯಗಳಿಗೆ ಧ್ವನಿ ಮತ್ತು ಶಕ್ತಿ ನೀಡಿದ್ದರು. ಅಂಬೇಡ್ಕರ್ ಅವರ ಪೋಟೋ ಮತ್ತು ಪ್ರತಿಮೆ ಸೀಮಿತವಾಗದೇ ಅವರ ಕುರಿತಾದ ಪುಸ್ತಕಗಳ ಅಧ್ಯಯನದೊಂದಿಗೆ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಲ್.ಎಸ್. ಶ್ರೀಕಾಂತ್ ಮಾತನಾಡಿ, ಭಾರತದ ಪ್ರಜೆಯಾಗಿ ಹುಟ್ಟಿದ ಪ್ರತಿ ಮಗು ಕೂಡ ಭಾರತ ಸಂವಿಧಾನ ಅರಿಯಬೇಕು. ಎಲ್ಲ ಧರ್ಮಗಳಿಗೆ ಒಂದೊಂದು ಗ್ರಂಥಗಳಿವೆ ಆದರೆ ಸಂವಿಧಾನ ಎಲ್ಲರಿಗೂ ಧರ್ಮಗ್ರಂಥ ಇದ್ದ ಹಾಗೆ, ಪ್ರತಿಯೊಬ್ಬರು ಸಂವಿಧಾನದಲ್ಲಿನ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ಅದರಂತೆ ನಡೆದುಕೊಳ್ಳಬೇಕು. ಸಮಾಜದ ಎಲ್ಲಾ ನಾಯಕರುಗಳು ಮಕ್ಕಳಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡರಾದ ಟಿ.ಮಂಜಪ್ಪ, ಟಿ.ಲಕ್ಷö್ಮಣ್, ಕೃಷ್ಣಸ್ವಾಮಿ, ಉದ್ದೇಬೋರನಹಳ್ಳಿ ಈಶಣ್ಣ, ಪಟ್ಟಣಗೆರೆ ನಾರಾಯಣ್, ಸಗುನಪ್ಪ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಗಿರೀಶ್, ಜಿಲ್ಲಾ ದೌರ್ಜನ್ಯ ಕಮಿಟಿ ಸದಸ್ಯ ಡಿ. ಪ್ರಶಾಂತ್, ಗಣೇಶ್, ತಾಲ್ಲೂಕು ಸಂಚಾಲಕ ಪ್ರಮೋದ್, ಗೋವಿಂದಪ್ಪ, ಹುಲ್ಲೇಹಳ್ಳಿ ಲಕ್ಷö್ಮಣ್, ಮಾದಿಗ ಮಹಾಸಭಾ ತಾಲ್ಲೂಕು ಅಧ್ಯಕ್ಷ ಪದ್ಮನಾಭಯ್ಯ, ವಕೀಲ ನಾಗರಾಜ್, ಪ್ರಭು, ಜಗದೀಶ್, ಮೆಸ್ಕಾಂ ನೌಕರರ ಸಂಘದ ಮೈಲಾರಪ್ಪ, ರಘು ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!