ಬರಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್‌ ಭೇಟಿ; 3 ದಿನ ಪ್ರವಾಸ

ಸುದ್ದಿ ಚಿಕ್ಕಮಗಳೂರು:  ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ  ಕೆ.ಜೆ. ಜಾರ್ಜ್ ನ.27, 28 ಮತ್ತು 29 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ನ,27ಕ್ಕೆ :-  ಸೋಮವಾರ

ನ. 27ರ ಸೋಮವಾರ ದಂದುಬೆ. 09.30 ಗಂಟೆಗೆ ಬಾಳೆಹೊನ್ನೂರಿಗೆ ಆಗಮಿಸಿ ಬಾಳೆಹೊನ್ನೂರಿನ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಚಿವರು ನಂತರ ಬೆ. 10.00 ಗಂಟೆಗೆ ಬಾಳೆಹೊನ್ನೂರಿನ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾ ಸಂಸ್ಥಾನ ಪೀಠದಲ್ಲಿ ಶ್ರೀ ವೀರಭದ್ರಸ್ವಾಮಿ ವಸತಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆಗಳ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ನಂತರ ಮ. 2.30 ಗಂಟೆಗೆ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಚಿವರು ಸಂ. 4.00 ಗಂಟೆಗೆ ಬಾಳೆಹೊನ್ನೂರಿನಿಂದ ಗರ್ಗೆಖಾನ್ ಎಸ್ಟೇಟ್‌ಗೆ ತೆರಳಿ ವಾಸ್ತವ್ಯ ಮಾಡುವರು.

ನ,28ಕ್ಕೆ :-  ಮಂಗಳವಾರ

ಅಂದು ಮ. 12.00 ಗಂಟೆಗೆ ಕೊಪ್ಪಕ್ಕೆ ಆಗಮಿಸಿ ಮ. 12.00 ರಿಂದ 2.00 ಗಂಟೆವರೆಗೆ ಕೊಪ್ಪದಲ್ಲಿ ಮೂಡಿಗೆರೆ ವಿಧಾನಸಭಾ ಮತಕ್ಷೇತ್ರ ಮತ್ತು ಶೃಂಗೇರಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಬರಪೀಡಿತ ಪ್ರದೇಶಗಳ ಕುರಿತಂತೆ ಸಭೆ ನಡೆಸುವರು. ನಂತರ ಮ. 3.00 ರಿಂದ 4.30 ಗಂಟೆವರೆಗೆ ಕೊಪ್ಪದಲ್ಲಿ ದಿ. ಡಿ.ಬಿ. ಚಂದ್ರೇಗೌಡರವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂ. 4.30 ಗಂಟೆಗೆ ಕೊಪ್ಪದಿಂದ ಗರ್ಗೆಖಾನ್ ಎಸ್ಟೇಟ್‌ಗೆ ತೆರಳಿ ವಾಸ್ತವ್ಯ ಮಾಡುವರು.

ನ,29ಕ್ಕೆ :-  ಬುಧವಾರ

ಅಂದು ಬೆ. 11.00 ಗಂಟೆಗೆ ಅಜ್ಜಂಪುರಕ್ಕೆ ಆಗಮಿಸಿ ಅಜ್ಜಂಪುರ ಹಾಗೂ ಕಡೂರು ತಾಲ್ಲೂಕುಗಳ ವ್ಯಾಪ್ತಿಯ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮ. 3.00 ಗಂಟೆಗೆ ಕಡೂರಿಗೆ ಆಗಮಿಸಿ ಅಜ್ಜಂಪುರ ಹಾಗೂ ಕಡೂರು ತಾಲ್ಲೂಕುಗಳ ವ್ಯಾಪ್ತಿಯ ಅಭಿವೃದ್ಧಿ ಮತ್ತು ಬರ ಪೀಡಿತ ಪ್ರದೇಶಗಳ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸುವ ಸಚಿವರು ಸಂ 4.30 ಗಂಟೆಗೆ ಕಡೂರಿನಿಂದ ಗರ್ಗೆಖಾನ್ ಎಸ್ಟೇಟ್‌ಗೆ ತೆರಳುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!