ಸೇವೆಕಾಯಂಗೊಳಿಸುವಂತೆ ಕಡೂರಿನಲ್ಲಿ ಅತಿಥಿ ಉಪನ್ಯಾಸಕರ ಮುಷ್ಕರ

ಸುದ್ದಿ ಕಡೂರು : ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸುವಂತೆ ಆಗ್ರಹಿಸಿ ತರಗತಿಗಳನ್ನು ಬಹಿಷ್ಕರಿಸಿ ತಾಲ್ಲೂಕಿನ ಅತಿಥಿ ಉಪನ್ಯಾಸಕರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗೇಟ್‌ಬಳಿ ಬುಧವರ ಅನಿರ್ಧಿಷ್ಠಾವಧಿ ಧರಣಿ ನಡೆಸಿದರು.
ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಗೋಪಿನಾಥ್ ಮಾತನಾಡಿ, ಕಳೆದ ಹತ್ತಾರು ವರ್ಷಗಳಿಂದ ನಾವುಗಳು ಅತಿಥಿ ಉಪನ್ಯಾಸಕರಾಗಿಯೇ ಸೇವೆ ಸಲ್ಲಿಸುತ್ತಿದ್ದೇವೆ. ನಮಗೆ ಕನಿಷ್ಟ ಸೇವಾ ಭದ್ರತೆಯೂ ಇಲ್ಲದಾಗಿದ್ದು. ನಮ್ಮಗಳ ಬೇಡಿಕೆಗಳನ್ನು ಈಡೇರಿಸುವಂತೆ ಹಲವಾರು ಬಾರಿ ಮನವಿಗಳ ಮಾಡಿದರೂ ಯಾವುದೇ ಪ್ರಯೋಜನಕಾರಿಯಾಗುತ್ತಿಲ್ಲ, ಕೇವಲ ಭರವಸೆಗಳಾಗಿಯೇ ಉಳಿಯುತ್ತಿರುವುದು ದುರಾದೃಷ್ಟಕರ ಸಂಗತಿ. ಈ ಹಿನ್ನಲೆಯಲ್ಲಿ ಕಳೆದ 20 ದಿನಗಳಿಂದ ರಾಜ್ಯಾದ್ಯಂತ ಅನಿರ್ಧಿಷ್ಠಾವಧಿ ಮುಷ್ಕರವನ್ನು ನಡೆಸಲಾಗುತ್ತಿದೆ. ಸರಕಾರ ನಮ್ಮ ಬೇಡಿಕೆಗಳನ್ನು ಬೆಳಗಾವಿಯ ಅಧಿವೇಶನದೊಳಗಾಗಿ ಈಡೇರಿಸಬೇಕಿದೆ. ಇಲ್ಲದಿದ್ದರೆ ತರಗತಿಗಳಿಗೆ ತೆರಳದೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯ ಸ್ವರೂಪವನ್ನು ಬದಲಾಯಿಸಿ ಹೋರಾಟವನ್ನು ಮುಂದುವರಿಸಲಾಗುತ್ತದೆ ಚಿಕ್ಕಮಗಳೂರಿನಲ್ಲಿ ಡಿ.14ರಂದು ಸಾಮೂಹಿಕವಾಗಿ ಜಿಲ್ಲೆಯ ಅತಿಥಿ ಉಪನ್ಯಾಸಕರು ಧರಣಿ ನಡೆಸಲಿದ್ದು, ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಬಸವರಾಜ್, ನವೀನ್, ಗಿರೀಶ್, ಲೋಲಾಕ್ಷಿ, ಮಮತಾ, ಶೃತಿ, ಪ್ರಸನ್ನ, ಪೂರ್ಣಿಮಾ, ಹರೀಶ್, ಶುಭಾರಾಣಿ, ಹೀನಾ, ಕರುಣಕರ್, ರಾಮಚಂದ್ರನಾಯ್ಕ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!