ರೈತ ಉತ್ಪಾದಕ ಸಂಸ್ಥೆಗಳಿಂದ 20 ಲಕ್ಷ ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ

ಸುದ್ದಿ ಕಡೂರು: ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈತರ ಉತ್ಪನ್ನ ಕ್ರೋಢಿಕರಣಕ್ಕಾಗಿ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸಂಸ್ಕರಿಸಿದ ಉತ್ಪನ್ನಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಒದಗಿಸುವ ಮೂಲಕ ಹಿಂದುಳಿದ ತಾಲ್ಲೂಕುಗಳ ರೈತ ಉತ್ಪಾದಕರ ಸಂಸ್ಥೆಗಳ ಆದಾಯ ವೃದ್ದಿಸಲು ಸಹಕಾರಿಯಾಗಲು ಯೋಜನೆಯನ್ನು ರೂಪಿಸಿದ್ದು, ರೈತ ಉತ್ಪಾದಕರ ಸಂಸ್ಥೆಗಳನ್ನು ಬಲಪಡಿಸಲು ಹಿಂದುಳಿದ ತಾಲ್ಲೂಕುಗಳ 100 ರೈತ ಉತ್ಪಾದಕರ ಸಂಸ್ಥೆಗಳಿಗೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ನೀಡುವ ತಲಾ 20 ಲಕ್ಷದವರೆಗಿನ ಸಾಲಕ್ಕೆ ಶೇ.4ರ ಬಡ್ಡಿ ಸಹಾಯಧನ ನೀಡುವ ಯೋಜನೆ ರೂಪಿಸಲಾಗಿದೆ. ಕೃಷಿ ಇಲಾಖೆಯಿಂದ ರೈತರ ಉತ್ಪನ್ನ ಕ್ರೋಢಿಕರಣಕ್ಕಾಗಿ ಸಾಲ ಸೌಲಭ್ಯಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯ ಕಚೇರಿಯಲ್ಲಿ ಸಂಪರ್ಕಿಸುವಂತೆ ಸಹಾಯಕ ಕೃಷಿ ನಿರ್ದೇಶಕ ಎಂ. ಅಶೋಕ್ ತಿಳಿಸಿದ್ದಾರೆ.

 

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಹತ ಮಾನದಂಡಗಳು:

1. ಅರ್ಜಿಯನ್ನು ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿ, ಉಪ ಕೃಷಿ ನಿರ್ದೇಶಕರ ಕಛೇರಿ, ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ರೈತ ಸಂಪರ್ಕ ಕೇಂದ್ರ, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳಿಂದ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆಯ ಜಾಲತಾಣದಿಂದ ಪಡೆದು, ಭರ್ತಿ ಮಾಡಿ ಡಿ.28ರ ಸಂಜೆ 5ಗಂಟೆಯೊಳಗೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಸಲ್ಲಿಸುವುದು,

2 ರಾಜ್ಯದಲ್ಲಿ ಹಿಂದುಳಿದ ತಾಲ್ಲೂಕಿನಲ್ಲಿ ರಚನೆಗೊಂಡು, ಕಂಪನಿ ಕಾಯ್ದೆ 2013 ಅಡಿಯಲ್ಲಿ ನೊಂದಾಯಿಸಿರಬೇಕು.

3, ಕನಿಷ್ಟ 600 ರೈತ ಷೇರುದಾರರನ್ನು ಹೊಂದಿರಬೇಕು

4 2022-23 ನೇ ಸಾಲಿನಲ್ಲಿ ವಾರ್ಷಿಕ ಕನಿಷ್ಪ (ಕೃಷಿ ಪರಿಕರ ವ್ಯಾಪಾರ ಮತ್ತು ಕೃಷಿ ಉತ್ಪನ್ನ ಮಾರಾಟ ಸಂಸ್ಕರಣೆ ವ್ಯವಹಾರದಿಂದ ಒಟ್ಟು ರೂ. 20.00 ಲಕ್ಷಗಳವರಗ ವ್ಯವಹಾರ ವಹಿವಾಟು ಮಾಡಿರಬೇಕು.

5 ದಿನಾಂಕ: 01.04.203 ರ ನಂತರ ಯೋಜನೆ (Project) ಘಟಕದ ಮಂಜೂರಾತಿ ಪಡೆದು ಸಹಕಾರಿ ಅಥವಾ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆದಿರಬೇಕು.

6. ಪ್ರತಿ ತ್ರೈಮಾಸಿಕ ಅರ್ಧವಾರ್ಷಿಕ ಅವಧಿಯೊಳಗೆ ಸಾಲ ಮರುಪಾವತಿ ಕಂತು, ಬಡ್ಡಿ ಸಹಿತ ಪಾವತಿಸಿರಬೇಕು.

7. ಬಡ್ಡಿ ಪಾವತಿಸದೇ ಉಳಿಸಿಕೊಂಡು ದಂಡದ ಮೊತ್ತಕ್ಕೆ (Penalty Amount ಸಂಬಂಧಿಸಿದಂತ, ಬಡ್ಡಿ ಸಹಾಯಧನ ಪಡೆಯಲು ಅವಕಾಶವಿರುವುದಿಲ್ಲ.

8. 2023-24 ನೇ ಸಾಲಿನಲ್ಲಿ ಸಾಲ ಪಡೆದು ಅರ್ಜಿಗಳನ್ನು ಸಲ್ಲಿಸಿದ ರೈತ ಉತ್ಪಾದಕರ ಸಂಸ್ಥೆಗಳು ಪ್ರಸಕ್ತ ಸಾಲಿಗೆ ಮಾತ್ರ ಪರಿಗಣಿಸಲಾಗುವುದು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು :

1) ರೈತ ಉತ್ಪಾದಕರ ಸಂಸ್ಥೆಯ ನೊಂದಣಿ ಪ್ರಮಾಣ ಪತ್ರದ ಪ್ರತಿ

2) ವ್ಯಾಪಾರ ವ್ಯವಹಾರ ಅಭಿವೃದ್ಧಿಗಾಗಿ ಬ್ಯಾಂಕ್ ಮೂಲಕ ಪಡೆದ ಸಾಲದ ಚಟುವಟಿಕೆಗಳ ವಿಕೃತ ಯೋಜನಾ ವರದಿಯ

3) ಬ್ಯಾಂಕ್‌ನಿಂದ ನೀಡಲಾಗಿರುವ ಸಾಲ ಮಂಜೂರಾತಿ ಪ್ರಮಾಣ ಪತ್ರದ ದೃಢೀಕೃತ ಪ್ರತಿ

4) ರೈತ ಉತ್ಪಾದಕರ ಸಂಸ್ಥೆಯ GST PAN ಮತು TAN ಸಂಖ್ಯೆಗಳ ಪ್ರತಿಗಳು

5) ಸಂಬಂಧಿಸಿದ ಕೃಷಿ ಪರಿಕರ ವ್ಯವಹಾರ ಹಾಗೂ ಕೃಷಿ ಉತ್ಪನ್ನ ಮಾರಾಟ/ಸಂಸ್ಕರಣೆ ವ್ಯಾಪಾರ ವ್ಯವಹಾರದ ದಾಖಲಾತಿಗಳ ಸ್ವಯಂ ದೃಢೀಕೃತ ಪ್ರತಿ.

ಹೆಚ್ಚಿನ ಮಾಹಿತಿಗಾಗಿ  ಕಡೂರು ಹಾಗೂ ರೈತ ಸಂಪರ್ಕ ಕೇಂದ್ರದ ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!