ಕಡೂರು ಪಟ್ಟಣದಲ್ಲಿ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆ

ಸುದ್ದಿ ಕಡೂರು : ಹಿಂದುಳಿದ ವರ್ಗಗಳ ವ್ಯಾಪ್ತಿಯಲ್ಲಿ ಒಳಪಡುವ ಉಪ್ಪಾರ ಸಮುದಾಯದ ಅಭಿವೃದ್ದಿ ಹಾಗೂ ಹಕ್ಕೋತ್ತಾಯದೊಂದಿಗೆ ಕೇಂದ್ರ ಸರಕಾರದ ಸವಲತ್ತುಗಳನ್ನು ಪಡೆಯುವ ಉದ್ದೇಶದಿಂದ ಶ್ರೀ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆಯು ದೇಶಾದ್ಯಂತ ಸಾಗುತ್ತಿದೆ ಎಂದು ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.

ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಥಯಾತ್ರೆಯ ಭವ್ಯ ಮೆರವಣಿಗೆ ಬಳಿಕ ನಡೆದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಭಗೀರಥರು ಮನುಕುಲದ ಉದ್ದಾರಕ್ಕಾಗಿ ಸಮಸ್ತ ಜನರ ಕಲ್ಯಾಣವಾಗಬೇಕು ಎಂಬ ಉದ್ದೇಶದಿಂದ ನೀರನ್ನು ಭೂಮಿಗೆ ಹರಿಸಿದರು. ಜಾತಿ ಧರ್ಮಗಳು ಇದ್ದರೂ ಏಕತೆಯನ್ನು ಕಾಣಬೇಕಿದೆ. ಉಪ್ಪಾರ ಸಮುದಾಯದ ಹಕ್ಕೋತ್ತಾಯಕ್ಕಾಗಿ ರಥಯಾತ್ರೆಯನ್ನು ನಡೆಸಲಾಗುತ್ತಿದೆ ಎಂದರು.
ಆAಧ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಮಾತ್ರ ಸರಕಾರಗಳು ಭಗೀರಥ ಜಯಂತಿ ಆಚರಣೆ ನಡೆಸುತ್ತಿದ್ದು, ಈ ಜಯಂತಿ ಆಚರಣೆ ದೇಶಾದ್ಯಂತ ಎಲ್ಲ ರಾಜ್ಯಗಳಲ್ಲೂ ನಡೆಯುವಂತಾಗಬೇಕಿದೆ. ಹಾಗೂ ಗಂಗಾನದಿಯ ತಡದಲ್ಲಿ ಭಗೀರಥರ ಪುತ್ತಳಿ ಸ್ಥಾಪನೆಯಾಗಬೇಕಿದೆ. ಉಪ್ಪಾರ ಜನಾಂಗಕ್ಕೆ 4 ಸಾವಿರ ವರ್ಷಗಳ ಇತಿಹಾಸವಿದ್ದರೂ ಈಗಲೂ ಸಹ ಅತ್ಯಂತ ಹಿಂದುಳಿದ ವರ್ಗವಾಗಿದ್ದು, ರಾಜಕೀಯವಾಗಿ ಹಿಂದೆ ಉಳಿದಿರುವುದು ದುರಾದೃಷ್ಟಕರ ಸಂಗತಿ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಉಪ್ಪಾರ ಸಮಾಜವನ್ನು ಪರಿಗಣಿಸಬೇಕಿದೆ. ತಮ್ಮ ಹಕ್ಕೋತ್ತಾಯಕ್ಕಾಗಿ ಫೆ.29ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ದೇಶದಾದ್ಯಂತ 10 ಲಕ್ಷ ಸಮಾಜದ ಬಂಧುಗಳು ಆಗಮಿಸುವುದರ ಮೂಲಕ ಬೃಹತ್ ಸಮಾವೇಶ ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಗಮನಸೆಳೆಯುವ ಕಾರ್ಯ ಮಾಡಲಾಗುವುದು ಎಂದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ, , ರಥಯಾತ್ರೆಯು ದೇಶದ ಅನೇಕ ರಾಜ್ಯಗಳಲ್ಲಿ ಸಂಚರಿಸಿ ರಾಜ್ಯದಲ್ಲಿಯೂ ಕೆಲವು ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡು ಕಡೂರು ಪಟ್ಟಣಕ್ಕೆ ಆಗಮಿಸಿದ್ದು ಈ ರಥಯಾತ್ರೆಯ ಮೂಲಕ ಸಮಾಜದ ಅಭಿವೃದ್ದಿಗೆ ದಾರಿಯಾಗಲಿದೆ. ಜನಕಲ್ಯಾಣ ರಥಯಾತ್ರೆಯ ಮೂಲಕ ಶೈಕ್ಷಣಿಕ,ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಉಪ್ಪಾರ ಸಮಾಜ ಮುಂದೆ ಬರಲು ಸಾಧ್ಯವಾಗಲಿದೆ. ಒಳ್ಳೆಯ ದಿಕ್ಕಿನಲ್ಲಿ ಸಾಗಲು ರಥಯಾತ್ರೆ ಸಹಕಾರಿಯಾಗಲಿದೆ. ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಭಗೀರಥ ಸಮುದಾಯಭವನಕ್ಕೆ ಅಗತ್ಯ ಅನುದಾನಕ್ಕಾಗಿ ಸಮಾಜದ ಮುಖಂಡರುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ನಿಯೋಗ ತೆರಳಿ ಹೆಚ್ಚಿನ ಅನುದಾನ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು.ಮಠ ಮಂದಿರಗಳನ್ನು ಪೂಜ್ಯಭಾವನೆಯಿಂದ ನೋಡಬೇಕಿದೆ. ಸಮಾಜದ ಅಭಿವೃದ್ದಿಗೆ ಮಠಗಳ ಪಾತ್ರ ಬಹುಮುಖ್ಯವಾಗಲಿದೆ ಎಂದರು.
ಮಾಜಿ ಶಾಸಕ ವೈ.ಎಸ್.ವಿ. ದತ್ತ ಮಾತನಾಡಿ, ಭಗೀರಥ ಪೀಠದ ಶ್ರೀ ಪುರುಷೋತ್ತಾಮನಂದ ಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಜನಕಲ್ಯಾಣ ರಥಯಾತ್ರೆಯು ಐತಿಹಾಸಿಕವಾಗಿದ್ದು, ಅತ್ಯಂತ ಹಿಂದುಳಿದ ವರ್ಗವಾಗಿರುವ ಉಪ್ಪಾರ ಸಮಾಜದ ಸಂಘಟನೆಗೆ ಸರಕಾರದ ಸವಲತ್ತುಗಳನ್ನು ಪಡೆಯಲು ಭಗೀರಥ ಯಾತ್ರೆ ಸಹಕಾರಿಯಾಗಲಿದೆ. ಉತ್ತರದಿಂದ ದಕ್ಷಿಣದವರೆಗೆ ಯಾತ್ರೆ ಸಾಗಿಬಂದಿದ್ದು. ರಾಜಕೀಯವಾಗಿ ಇಡೀ ರಾಜ್ಯದಲ್ಲಿ ಶಕ್ತಿ ಇಲ್ಲದಾಗಿರುವ ಬಗ್ಗೆ ಇಂದಿಗೂ ಕೊರತೆ ಕಾಣುತ್ತಿದೆ. ದೇಶದಲ್ಲಿ 11 ಕೋಟಿ ಜನಸಂಖ್ಯೆ ಹೊಂದಿದ್ದು, ರಾಜ್ಯದಲ್ಲಿಯೂ ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರು ಹೊಂದಿದ್ದಾರೆ. ಬರುವ ದಿನಗಳಲ್ಲಿ ರಾಜಕೀಯ ಶಕ್ತಿ ತುಂಬಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಮಾರಂಭಕ್ಕು ಮುನ್ನ ಪಟ್ಟಣದ ವೆಂಕಟೇಶ್ವರ ದೇವಾಲಯದಿಂದ ಬಿ.ಎಚ್. ರಸ್ತೆಯ ಮೂಲಕ ಬನಶಂಕರಿ ಕಲ್ಯಾಣ ಮಂಟಪದವರೆಗೆ ವಿವಿಧ ಕಲಾತಂಡಗಳೊAದಿಗೆ ಭಗೀರಥ ರಥಯಾತ್ರೆಯ ಮೆರವಣಿಗೆ ನಡೆಸಲಾಯಿತು. ಸಮಾಜದ ಮುಖಂಡರುಗಳು ಭಾಗವಹಿಸಿದ್ದರು. ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಮಲ್ನಾಡನಾಗರಾಜ್, ತಾಲ್ಲೂಕು ಅಧ್ಯಕ್ಷ ಎನ್.ಕೆ. ಲೋಕೇಶ್ ಬಾಬು, ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್, ಜಿಪಂ ಮಾಜಿ ಸದಸ್ಯೆ ಕಾವೇರಿಲಕ್ಕಪ್ಪ, ಪುರಸಭಾ ಸದಸ್ಯರಾದ ತೋಟದಮನೆ ಮೋಹನ್‌ಕುಮಾರ್, ಬೀರೂರು ಮೋಹನ್, ವನಿತಾ, ಬಾವಿಮನೆ ಮಧು, ಕವಿತಾ, ದಿವ್ಯ ಉಪ್ಪಾರ್, ಸಪ್ತಕೋಟಿ ಧನಂಜಯ್, ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಸತೀಶ್, ವೈ.ಎಂ. ತಿಪ್ಪೇಶ್, ಟಿ.ಆರ್. ಲಕ್ಕಪ್ಪ, ಯಳಗೊಂಡನಹಳ್ಳಿ ಈಶ್ವರಪ್ಪ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!