ಅಜ್ಜಂಪುರ ಬಳಿ ರೈಲಿಗೆ ಸಿಲುಕಿ ಸಾವನ್ನಪ್ಪಿದ ಅಪ್ರಾಪ್ತೆ ವಿದ್ಯಾರ್ಥಿನಿ ಮತ್ತು ಖಾಸಗಿ ಶಾಲೆಯ ಚಾಲಕ

ಸುದ್ದಿ ಅಜ್ಜಂಪುರ : ಅಪ್ರಾಪ್ತೆ ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ
ವರ್ತಿಸುತ್ತಿದ್ದ ಖಾಸಗಿ ಶಾಲೆಯ ಚಾಲಕನೋರ್ವನು ವಿದ್ಯಾರ್ಥಿನಿಯನ್ನು ಪುಸಲಾಯಿಸಿಕೊಂಡು ಭಾನುವಾರ ತಡರಾತ್ರಿ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣೆ
ವ್ಯಾಪ್ತಿಯಲ್ಲಿ ನಡೆದಿದೆ.
ಅಜ್ಜಂಪುರ ಸಮೀಪದ 14 ವರ್ಷದ ಅಪ್ರಾಪ್ತೆ ವಿದ್ಯಾರ್ಥಿನಿ ಮತ್ತು ಸಂತೋಷ್(34)
ಅಜ್ಜಂಪುರ ಸಮೀಪದ ರೈಲ್ವೆ ಹಳಿಯ ಭಕ್ತನಕಟ್ಟೆ ಸೇತುವೆ ಬಳಿ ರೈಲಿಗೆ ಸಿಲುಕಿ
ಆತ್ಮಹತ್ಯೆಗೆ ಶರಣಾಗಿದ್ದು, ಸೋಮವಾರ ಬೆಳಿಗ್ಗೆ ಮೃತದೇಹಗಳನ್ನು ಸ್ಥಳೀಯರು
ಪತ್ತೆಹಚ್ಚಿದ್ದಾರೆ. ಖಾಸಗಿ ಶಾಲೆಯೊಂದರಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ
ವಿವಾಹಿತ ಸಂತೋಷ್ ಎಂಬಾತನು 8ನೇ ತರಗತಿ ಓದುತ್ತಿರುವ ಅಪ್ರಾಪ್ತೆ
ವಿದ್ಯಾರ್ಥಿನಿಯನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ವಿವಿಧ ಆಮಿಷಗಳೊಡ್ಡಿ ಅಸಭ್ಯವಾಗಿ
ವರ್ತಿಸುತ್ತಿದ್ದ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ವಾಹನದ ಚಾಲಕ ಸಂತೋಷ್ ವಿರುದ್ದ
ಶಾಲೆಯ ಆಡಳಿತ ಮಂಡಳಿಗೆ ಚಾಲಕನನ್ನು ಕೆಲಸದಿಂದ ವಜಾಗೊಳಿಸುವಂತೆ ಸಾಕಷ್ಟು ಬಾರಿ
ಹೇಳಿದ್ದರೂ. ಖಾಸಗಿ ಶಾಲೆಯ ಆಡಳಿತ ಮಂಡಳಿ ಚಾಲಕನ ವಿರುದ್ದ ಯಾವುದೇ ಕ್ರಮ ಕೈಗೊಳ್ಳದೆ
ನಿರ್ಲಕ್ಷö್ಯ ವಹಿಸಿದ್ದರು. ಬಳಿಕ ಡಿ.31ರ ರಾತ್ರಿ ಅಪ್ರಾಪ್ತೆ ವಿದ್ಯಾರ್ಥಿನಿಗೆ
ಮಾನಸಿಕವಾಗಿ ಭಯಭೀತಗೊಳಿಸಿಕೊಂಡು ಚಾಲಕ ಸಂತೋಷ್ ವಿದ್ಯಾರ್ಥಿಯನ್ನು ಮನೆಯಿಂದ
ಕರೆದುಕೊಂಡು ಹೋಗಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಇಂತಹ ವಿಕೃತ ಮೆರೆಯುತ್ತಿದ್ದ
ಸಂತೋಷ್ ಬಗ್ಗೆ ಈ ಹಿಂದೆ ಸಾಕಷ್ಟು ದೂರುಗಳು ನೀಡಿದ್ದರೂ ಶಾಲೆಯ ಆಡಳಿತ ಮಂಡಳಿ
ಈತನನ್ನು ಕೆಲಸದಿಂದ ವಜಾ ಮಾಡದೆ  ನಿರ್ಲಕ್ಷ್ಯ ವಹಿಸಿದ್ದರ ಬಗ್ಗೆ ವಿದ್ಯಾರ್ಥಿನಿಯ
ಪೋಷಕರು ಅಜ್ಜಂಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಮಹಿಳೆ ಸಾವು : 
ಇನ್ನು ಕೂಲಿ ಕೆಲಸಕ್ಕೆಂದು ಚನ್ನಾಪುರಕ್ಕೆ ಆಗಮಿಸಿದ್ದ ರಾಣೇಬೆನ್ನೂರು ಮೂಲದ
ರೇಣುಕಮ್ಮ(35) ಬೈಕ್‌ನಲ್ಲಿ ಹೋಗುತ್ತಿರುವಾಗ ಹಿಂಬದಿಯಿAದ ಬಂದ ವಾಹನವೊಂದು ಬೈಕಿಗೆ
ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಮಹಿಳೆ ಭಾನುವಾರ ತಡರಾತ್ರಿ ಅಸುನೀಗಿದ್ದಾರೆ.
ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಸಮುದಾಯ ಆರೋಗ್ಯ ಕೇಂದ್ರದ ಬಳಿ ಪ್ರತಿಭಟನೆ : ಪ್ರತ್ಯೇಕ ಪ್ರಕರಣಗಳಲ್ಲಿ ಸಾವನ್ನಪ್ಪಿದ ಮೂರು ಮೃತದೇಹಗಳನ್ನು ಅಜ್ಜಂಪುರ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇರಿಸಲಾಗಿತ್ತು. ವೈದ್ಯರುಗಳು ಹಾಜರಿಲ್ಲದ್ದ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯಾದರೂ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸದೆ ಸತಾಯಿಸುತ್ತಿದ್ದ ಬಗ್ಗೆ ಮೃತ ಕುಟುಂಬಸ್ಥರು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ವಿರುದ್ಧ
ಆಕ್ರೋಶ ವ್ಯಕ್ತಪಡಿಸಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಬಳಿಕ ರಾಣೆಬೆನ್ನೂರು ಮೂಲದ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಸ್ಥಳಕ್ಕೆ ಅರಸೀಕೆರೆ ರೈಲ್ವೆ ಪೊಲೀಸರು ಭೇಟಿ ನೀಡಿ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ನಡೆಸಲು ರವಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!