ಯಗಟಿಯಲ್ಲಿ ತಾಲ್ಲೂಕು ಮಟ್ಟದ ದ್ವಿತೀಯ ಜಾನಪದ ಸಮ್ಮೇಳನ ಜ.16ಕ್ಕೆ

ಸುದ್ದಿ ಕಡೂರು : ಶ್ರಮದ ದಣಿವು ನಿವಾರಣೆಗಾಗಿ ಹುಟ್ಟಿಕೊಂಡ ಕಲಾ ಪ್ರಕಾರಗಳ ಜಾನಪದ ಕಲೆಗಳ ಸಂರಕ್ಷಣೆಗೆ ಎಲ್ಲರೂ ಬದ್ದರಾಗಬೇಕಿದೆ. ಯುವ ಜನತೆ ಜಾನಪದ ಕಲೆ ಸಂಸ್ಕೃತಿಯ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕಿದೆ ಎಂದು ಜಿಪಂ ಮಾಜಿ ಸದಸ್ಯೆ ಲಕ್ಕಮ್ಮಸಿದ್ದಪ್ಪ ಅಭಿಪ್ರಾಯಿಸಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ಭಾನುವಾರ ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಯಗಟಿಯಲ್ಲಿ ಜ.16ರಂದು ಹಮ್ಮಿಕೊಂಡಿರುವ ದ್ವಿತೀಯ ಜಾನಪದ ತಾಲ್ಲೂಕು ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯ ದಾಳಿಗೆ ಸಿಲುಕಿ ನಲುಗುತ್ತಿರುವ ಜಾನಪದ ಕಲೆ ಸಂಸ್ಕೃತಿಯ ಪರಂಪರೆಯನ್ನು ಉಳಿಸಿ ಬೆಳೆಸಲು ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಜಾನಪದ ಕಲೆಗನ್ನು ಉಳಿಸುವುದು ನಮ್ಮೆಲ್ಲರ ಜವಬ್ದಾರಿಯಾಗಬೇಕಿದ್ದು, ಈ ಹಿನ್ನಲೆಯಲ್ಲಿ ಯಗಟಿಯಲ್ಲಿ ಹಮ್ಮಿಕೊಂಡಿರುವ ದ್ವಿತೀಯ ಜಾನಪದ ಸಮ್ಮೇಳನದಲ್ಲಿ ಹಿರಿಯ ಕಲಾವಿದರನ್ನು ಗೌರವಿಸುವ ಜೊತೆಗೆ ಅರ್ಥಪೂರ್ಣವಾಗಿ ಜರುಗುವಂತಾಗಲಿ ಎಂದು ಆಶಿಸಿದರು.
ಕರ್ನಾಟಕ ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಮಾತನಾಡಿ, ಜಾನಪದವೆಂದರೆ ಕೇವಲ ಹಾಡುಗಾರಿಕೆಯಲ್ಲ, 200ಕ್ಕು ಹೆಚ್ಚು ಕಲೆಯನ್ನು ಒಳಗೊಂಡ ದೊಡ್ಡ ಕಲಾ ಗ್ರಂಥ ಭಂಡಾರವಾಗಿದೆ. ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಸಾಹಿತ್ಯ ಸಂಸ್ಕೃತಿಯ ಜಾನಪದವಾಗಿದ್ದು, ಪರಿಷತ್ ಘಟಕವು ಜಾನಪದ ಕಲೆಗಳ ಜೊತೆಗೆ ಕಲಾವಿದರನ್ನು ಹೆಚ್ಚು ಗೌರವಿಸುವ ಮೂಲಕ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾನಪದ ಪರಿಷತ್ ಸಮ್ಮೇಳನ ಮಾಡಲು ಪರಿಷತ್ ಘಟಕ ಚಿಂತನೆ ನಡೆಸಲಾಗುತ್ತಿದೆ ಎಂದರು
ಕಜಾಪ ತಾಲ್ಲೂಕು ಅಧ್ಯಕ್ಷ ಜಗದೀಶ್ವರಾಚಾರ್ ಮಾತನಾಡಿ, ಜ.16ರಂದು ಯಗಟಿಯ ವೀರಾಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ನಡೆಯುವ ದ್ವಿತೀಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾದ ಈ.ಓಂಕಾರಮೂರ್ತಿ ಅವರನ್ನು ಯಗಟಿಯ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳೊAದಿಗೆ ಅದ್ದೂರಿಯ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆತರಲಾಗುವುದು. ಜಿಲ್ಲೆಯ ವಿವಿಧ ಪ್ರಕಾರಗಳ ಕಲಾತಂಡಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಬಳಿಕ ಸಮ್ಮೇಳನ ಉದ್ಘಾಟನೆ, ವಿಚಾರಗೋಷ್ಟಿ, ಸಮಾರೋಪದೊಂದಿಗೆ ಅರ್ಥಪೂರ್ಣವಾದ ಸಮ್ಮೇಳನವನ್ನು ಆಯೋಜಿಸಲಾಗಿದೆ. ಕ್ಷೇತ್ರದ ಶಾಸಕರಾದ ಕೆ.ಎಸ್.ಆನಂದ್ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಮಾಜಿ ಶಾಸಕರಾದ ವೈ.ಎಸ್.ವಿ.ದತ್ತ, ಬೆಳ್ಳಿಪ್ರಕಾಶ್ ಹಾಗೂ ನಾಡಿನ ಜಾನಪದ ಕಲಾವಿದರು, ಚಿಂತಕರು ಸೇರಿದಂತೆ ಗಣ್ಯರುಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಮ್ಮೇಳನಕ್ಕಾಗಿ ವಿವಿಧ ಉಪಸಮಿತಿಗಳನ್ನು ರಚಿಸಿಕೊಳ್ಳಲಾಗಿದ್ದು, ಸಿದ್ದತೆಯ ಕಾರ್ಯಗಳು ಭರದಿಂದ ಸಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರಾದ ಈ. ಓಂಕಾರಮೂರ್ತಿ, ಯಗಟಿ ಗ್ರಾಪಂ ಮಾಜಿ ಅಧ್ಯಕ್ಷ ಚನ್ನಪಿಳ್ಳೆಗೋವಿಂದಪ್ಪ, ಪರಿಷತ್ ಪದಾಧಿಕಾರಿಗಳಾದ ತಿಪ್ಪೇಶ್, ಚಿಕ್ಕನಲ್ಲೂರು ಜಯಣ್ಣ, ಹೋಬಳಿ ಅಧ್ಯಕ್ಷ ಪರಮೇಶ್, ನಂದೀಶ್ ಬಾಬು, ಕೀರ್ತಿಕುಮಾರ್, ಮಲಿಯಪ್ಪ, ಉಮೇಶ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!