ಓಬಿರಾಯನ ಕಾಲದ ಅನಿಷ್ಟ ಪದ್ದತಿಗೆ ತುತ್ತಾಗಿರುವ ರಾಗಿ ಬಸವನಹಳ್ಳಿ ಗ್ರಾಮದ ಬಡಕುಟುಂಬ!

ಸುದ್ದಿ ತರೀಕೆರೆ:  ಓಬಿರಾಯನ ಕಾಲದ ಬಹಿಷ್ಕಾರದಂತಹ ಅನಿಷ್ಟ ಪದ್ದತಿ ಇನ್ನು ಕೂಡಾ ಜೀವಂತವಾಗಿದೆ ಎನ್ನುವುದಕ್ಕೆ  ತರೀಕೆರೆ ತಾಲೂಕಿನ ರಾಗಿಬಸವನಹಳ್ಳಿ ಗ್ರಾಮದಲ್ಲಿ ಇಂದಿಗೂ ಜೀವಂತ ಸಾಕ್ಷಿಯಾಗಿ ಉಳಿದಿದೆ…

ಹೌದು ಓದುಗರೇ… ಸಾಮಾಜಿಕ ಬಹಿಷ್ಕಾರ ಅನ್ನೋ ಅನಿಷ್ಟ ಪದ್ಧತಿ ತೊಲಗಿದಂತೆ ಕಿಂಚಿತ್ ತೊಲಗಿದಂತೆ ಕಾಣುತ್ತಿಲ್ಲ , ಇಲ್ಲಿನ ಗ್ರಾಮದ ಒಂದು ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದ್ದು. ಕಳೆದ 18 ವರ್ಷದಿಂದ ನ್ಯಾಯಕ್ಕಾಗಿ ಬಡ ಕುಟುಂಬವೊಂದು ಕ್ರಾಂತಿಕಾರಕ ಹೋರಾಟ ನಡೆಸುತ್ತಿದೆ.

ಕಳೆದ 18. ವರ್ಷದ ಹಿಂದೆ ಈ ಗ್ರಾಮದಿಂದ ಬಹಿಷ್ಕಾರ ಹಾಕಲಾಗಿದ್ದ ವ್ಯಕ್ತಿಯೊಬ್ಬರ ಬಳಿ ಅಡಕೆ ಏರಲು ಎತ್ತಿನ ಗಾಡಿಯನ್ನು ಕೇಳಿ ಪಡೆದುಕೊಂಡಿದ್ದ ಎಂಬ ಒಂದೇ ಒಂದು ಕಾರಣಕ್ಕಾಗಿ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಪುಟ್ಟಸ್ವಾಮಿ ಮತ್ತಾತನ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ಈ ವೇಳೆ ತಪ್ಪೊಪ್ಪಿಕೊಂಡು 1101 ರೂ. ದಂಡ ಕಟ್ಟಿ ತಪ್ಪಿಕೊಳ್ಳುವಂತೆ ಷರತ್ತು ವಿಧಿಸಿದ್ದಾರೆ. ಆದರೆ, ಸಾವಿರಾರು ಮಹನೀಯರ ಪ್ರಾಣ ತ್ಯಾಗದಿಂದ ದೊರೆತಿರುವ ಸ್ವತಂತ್ರವನ್ನು ಮಾರಿಕೊಳ್ಳುವುದಿಲ್ಲ. ಸ್ವಾಭಿಮಾನದಿಂದಲೇ ಬದುಕುತ್ತೇನೆ ಎಂದು. ಅಂದಿನಿಂದ ಇಂದಿನವರೆಗೂ ನ್ಯಾಯಕ್ಕಾಗಿ ಪೊಲೀಸ್‍ ಠಾಣೆ, ಜಿಲ್ಲಾಧಿಕಾರಿ ಕಚೇರಿ ಬಾಗಿಲು ತಟ್ಟಿದ್ದಾರೆಯೇ ವಿನಃ ಗ್ರಾಮದ ಮುಂದೆ ಒತ್ತೆಯಾಳಾಗಲು ಇಚ್ಛೆಪಟ್ಟಿಲ್ಲ.

ರಾಗಿಬಸವನಹಳ್ಳಿಯಲ್ಲಿ ಈ ಹಿಂದಿನಿಂದಲೂ ಈ ಅನಿಷ್ಟ ಪದ್ದತಿ ನಡೆದುಕೊಂಡುಬಂದಿದ್ದು‌ ಎನ್ನಲಾಗಿದೆ. ಬಹಿಷ್ಕಾರಕ್ಕೊಳಗಾಗಿರುವ ಪುಟ್ಟಸ್ವಾಮಿಯನ್ನ ಗ್ರಾಮದ ಯಾರಾದರೂ ಮಾತನಾಡಿಸಿದರೆ ಅಂದೇ ಗ್ರಾಮದಲ್ಲಿ ಪಂಚಾಯ್ತಿ ಸೇರಿ, ದಂಡ ವಿಧಿಸುವ ಪದ್ದತಿ ಇಂದಿಗೂ ಕೂಡಾ ಜೀವಂತವಾಗಿರುವುದರ ಜೊತೆಗೆ ಈ ಗ್ರಾಮದ ಬಹುತೇಕ ಪ್ರಜ್ಞಾವಂತರು ಬದುಕಿದ್ದೂ ನಿತ್ಯ ಸಾಯುವಂತೆ ಮಾಡಿದೆ.

ಒಟ್ಟಾರೆ ನಾಗರಿಕ ಸಮಾಜ ಬೆಳೆದಂತೆ ಅನಿಷ್ಟ ಪದ್ಧತಿಗಳು ದೂರಾಗುತ್ತವೆ ಅಂತಾ ನಂಬಿರೋ ಈ ದಿನಗಳಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಿರೋದು ದುರಂತದ ಸಂಗತಿ. ಈ ಕುರಿತು ದೂರು ನೀಡಲಾಗಿದ್ರೂ ಕ್ರಮ ವಹಿಸದೇ ನಿರ್ಲಕ್ಷ್ಯ ವಹಿಸಿರೋ ಅಧಿಕಾರಿಗಳ ಕ್ರಮ ಕೂಡ ಖಂಡನೀಯ. ಆದಷ್ಟು ಬೇಗ ಇವರ ಕುಟುಂಬಕ್ಕೆ ನ್ಯಾಯ ಸಿಗಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಗ್ರಾಮದಲ್ಲಿ ಏನಾಗುತ್ತಿದೆ.?
ಊರವರು ಮಾತಡ್ಸಲ್ಲ, ಅಂಗಡಿಯಲ್ಲಿ ದಿನಸಿ ಕೊಡಲ್ಲ,
ಕಳೆದ ಹದಿನಾಲ್ಕು ವರ್ಷಗಳ ಹಿಂದೆ ಗ್ರಾಮಸ್ಥರು ಪುಟ್ಟಸ್ವಾಮಿ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಊರಿನವರು ಕೆಲಸಕ್ಕೆ ಕರೆಯುತ್ತಿಲ್ಲ. ಅಂಗಡಿಗೆ ಹೋದ್ರೆ ದಿನಸಿ ಪದಾರ್ಥ ಕೊಡುತ್ತಿಲ್ಲ. ಮೋಟರ್ ರೀವೈಂಡಿಂಗ್ ಕೆಲಸ ಮಾಡಿ ಬದುಕುತ್ತಿರುವ ಈ ಕುಟುಂಬವನ್ನ ಊರಿನಿಂದ ಹೊರ ಇಡಲಾಗಿದೆ. ಸದ್ಯ ತೋಟದಲ್ಲೇ ಮನೆ ಕಟ್ಟಿಕೊಂಡಿರೋ ಪುಟ್ಟಸ್ವಾಮಿ‌ ಅಕ್ಕಪಕ್ಕದ ಹಳ್ಳಿಗಳಿಗೆ ಕೆಲಸಕ್ಕೆ ಹೋಗಿ ಜೀವನ ನಡೆಸುತ್ತಿದ್ದಾರೆ. ಆದರೆ, ಆಪತ್ತು ಎಂಬುದು ಎದುರಾದರೆ ಸಹಾಯಕ್ಕೆ ನಿಲ್ಲುವವರಿಲ್ಲದೆ ಈ ಕುಟುಂಬ ಆಧುನಿಕ ಯುಗದಲ್ಲೂ ವನವಾಸ ಅನುಭವಿಸುತ್ತಿದೆ.

ದೂರು ಕೊಟ್ಟರೂ ಫಲಸಿಗುತ್ತಿಲ್ಲ!
ಕಳೆದ ಹದಿನಾಲ್ಕು ವರ್ಷ ಹಿಂದೆ ಬಹಿಷ್ಕಾರಕ್ಕೊಳಗಾಗಿರುವ ಪುಟ್ಟಸ್ವಾಮಿ ಮತ್ತವನ ಕುಟುಂಬ ಅಂದಿನಿಂದಲೂ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಡುತ್ತಲೇ ಬಂದಿದ್ದು. ಈ ಕುರಿತು ಪೊಲೀಸ್ ಠಾಣೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ನಮ್ಮ ಮೇಲಿನ ಬಹಿಷ್ಕಾರ ತೆರವುಗೊಳಿಸಿ ನ್ಯಾಯದ ಜೊತೆಗೆ ಸ್ವತಂತ್ರ ಕೊಡಿಸಿ ಎಂದು ಅಲೆದು ಬೇಸತ್ತು ಸುಮ್ಮನಾಗಿದೆ. ಪೊಲೀಸರು ಗ್ರಾಮಕ್ಕೆ ಬಂದು ಹೋದರೂ ಕೂಡಾ ನಮಗೆ ನ್ಯಾಯ ಸಿಕ್ಕಿಲ್ಲ ಹಾಗಾಗಿ ಇದರ ಕುರಿತು ಯಾವುದೇ ಅಧಿಕಾರಿಗಳ. ಬಳಿ ನ್ಯಾಯ ಕೊಡಿಸುವಂತೆ ಕೇಳುವುದನ್ನೇ ಬಿಟ್ಟಿದ್ದೇವೆ ಎಂದು ಇವರ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಬಹಿಷ್ಕಾರಕ್ಕೆ ಬಲವಾದ ಕಾರಣವೇನು.?
ಇದಕ್ಕೂ ಮೊದಲು ಬಹಿಷ್ಕಾರಕ್ಕೆ ಒಳಗಾಗಿದ್ದ ಇದೇ ರಾಗಿ ಬಸವನಹಳ್ಳಿ ಗ್ರಾಮದ ಉಪ್ಪಾರ ಸಮುದಾಯಕ್ಕೆ ಸೇರಿದ್ದ ವ್ಯಕ್ತಿಯೊಬ್ಬರಿಂದ ತಮ್ಮ ತೋಟದಿಂದ ಅಡಕೆ ತರಲು ಎತ್ತಿನ ಗಾಡಿ ಕೇಳಿ ಪಡೆದುಕೊಂಡಿದ್ದರು. ಆದರೆ, ಅವರನ್ನು ಮಾತನಾಡಿಸಿದ್ದೂ ಅಲ್ಲದೆ ಎತ್ತು-ಗಾಡಿ ಎರಡನ್ನೂ ತೆಗೆದುಕೊಂಡಿದ್ದೀಯ ಗ್ರಾಮದ ನಿಯಮ ಮೀರಿರುವುದರಿಂದ ಸಾವಿರದ ಒಂದುನೂರ ಒಂದು ರೂ. ದಂಡ ಕಟ್ಟಿ ತಪ್ಪೊಪ್ಪಿಕೊಳ್ಳುವಂತೆ ಬಲವಂತ ಮಾಡಿದ್ದಾರೆ. ಆದರೆ, ಮಾಡದ ತಪ್ಪಿಗೆ ನಾನೇಕೆ ದಂಡ ಕಟ್ಟಲಿ ಕಾನೂನು ರೀತಿ ಹೋರಾಡುತ್ತೇನೆಯೇ ವಿನಃ ಮಹಾತ್ಮರು ತಮ್ಮ ಪ್ರಾಣ ಅರ್ಪಿಸಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದು ಹೇಳಿದ್ದೇ ಬಹಿಷ್ಕಾರಕ್ಕೆ ಕಾರಣವಾಗಿದೆ.

ಗ್ರಾಮದಲ್ಲಿ ಕುಟುಂಬಕ್ಕೆ ಹಾಕಿರುವ ನಿಬಂಧನೆಗಳು!

1). ಗ್ರಾಮದಲ್ಲಿ ನೀರು ತೆಗೆದುಕೊಳ್ಳುವಂತಿಲ್ಲ.
2)ಅಂಗಡಿಗಳಲ್ಲಿ ಸಾಮಾಗ್ರಿಗಳನ್ನು ಖರೀದಿಸುವಂತಿಲ್ಲ.
3) ಯಾರ ಮನೆಯಲ್ಲಿಯೂ ಕೂಡ ಉಪ್ಪು ನೀರು ನೀಡುವಂತಿಲ್ಲ.
4) ಬಹಿಷ್ಕಾರಕ್ಕೆ ಒಳಪಟ್ಟ ಕುಟುಂಬಗಳನ್ನು ಮಾತನಾಡಿಸಿದರೂ 1101 ರೂ. ದಂಡ ವಿಧಿಸಲಾಗುತ್ತದೆ.

 

Leave a Reply

Your email address will not be published. Required fields are marked *

error: Content is protected !!