ವಿವೇಕಾನಂದರ ಚಿಂತನೆ, ಆದರ್ಶದ ಬದುಕು ಇಡೀ ವಿಶ್ವಕ್ಕೆ ದಾರಿದೀಪ – ಜಿಗಣೇಹಳ್ಳಿ ನೀಲಕಂಠಪ್ಪ

ಸುದ್ದಿ ಕಡೂರು : ಸ್ವಾಮಿ ವಿವೇಕಾನಂದರ ಚಿಂತನೆ, ಆದರ್ಶದ ಬದುಕು ಇಡೀ ವಿಶ್ವಕ್ಕೆ ದಾರಿದೀಪವಾಗಿದೆ ಎಂದು ಕಡೂರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.ತಾಲ್ಲೂಕಿನ ಪಂಚೆಹೊಸಹಳ್ಳಿ ಗ್ರಾಮದಲ್ಲಿ ಗೆಳೆಯರ ಬಳಗ  ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿವೇಕಾನಂದರಂತಹ ಮಹಾನ್ ಚೇತನದ ಸ್ಮರಣೆಯಲ್ಲಿ ಗ್ರಾಮೀಣ ದೇಶೀ ಸೊಗಡಿನ ಪಂದ್ಯಾವಳಿ ಆಯೋಜಿಸಿರುವ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯವಾದದ್ದು ಎಂದರು.
ತಾಲ್ಲೂಕಿನ ವಿವಿಧ ಗ್ರಾಮಗಳ 24 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಪಂಚಾಯಿತಿ ಸದಸ್ಯ ಪರಮೇಶ್ವರಪ್ಪ ವಹಿಸಿದ್ದರು. ರಘುಗೌಡ, ರಾಜು, ಗೋಪಿ.ಮಹೇಶ್, ಚೇತನ್, ಗೆಳೆಯರ ಬಳಗದ ರಾಜೇಶ್,ಶರತ್,ದಿನೇಶ್,ಮಧು ಮತ್ತು ಪಂಚೆಹೊಸಹಳ್ಳಿ ಗ್ರಾಮದ ಗೌಡರುಗಳು,ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *

error: Content is protected !!