ಕಡೂರಿನಲ್ಲಿ 65 ಲಕ್ಷವೆಚ್ಚದ ಚಿತಾಗಾರ ಘಟಕ ನಿರ್ಮಾಣ: ರೋಟರಿ ಕ್ಲಬ್‌ ಅಧ್ಯಕ್ಷ ರಾಘವೇಂದ್ರ

ಸುದ್ದಿ ಕಡೂರು: ಪಟ್ಟಣದ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದ ಬಳಿ ಇರುವ ಹಿಂದೂ ರುದ್ರಭೂಮಿಯಲ್ಲಿ ಸುಮಾರು
 65 ಲಕ್ಷ ರೂಪಾಯಿ ವೆಚ್ಚದಲ್ಲಿ  ಸುಸಜ್ಜಿತವಾದ ಚಿತಾಗಾರ ಘಟಕ ನಿರ್ಮಾಣದ ಶಂಕು ಸ್ಥಾಪನೆ ಕಾರ್ಯವು ಜ.16ರಂದು ಏರ್ಪಡಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ.ರಾಘವೇಂದ್ರ ತಿಳಿಸಿದರು.
ಪಟ್ಟಣದ ರೋಟರಿ ಕ್ಲಬ್‌ ನಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು,
ಬೆಳೆಯುತ್ತಿರುವ ಕಡೂರು ಪಟ್ಟಣದಲ್ಲಿ ಚಿತಾಗಾರ ಈಗಾಗಲೇ ಇದ್ದರೂ ಅಲ್ಲಿ ವಿದ್ಯುತ್ ಅಥವಾ ಗ್ಯಾಸ ಮೂಲಕ ಶವದಹನ ಮಾಡುವಂತಹ ಸೌಲಭ್ಯವಿದ್ದರೆ ಅನುಕೂಲಕರ ಎಂಬ ಅಂಶವನ್ನು ಮನಗಂಡು ರೊಟರಿ ಕ್ಲಬ್ ಚಿತಾಗಾರ ಘಟಕವನ್ನು ನಿರ್ಮಿಸಲು ಮುಂದಾಗಿದೆ. ಇದಕ್ಕಾಗಿ ಒಂದು ನಿರ್ವಹಣಾ ಸಮಿತಿಯನ್ನು ರಚಿಸಲಾಗಿದ್ದು,
ಕ್ಷೇತ್ರದ ಶಾಸಕರಾದ ಕೆ.ಎಸ್.ಆನಂದ್ ಅವರನ್ನು ಗೌರವಾಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಪಟ್ಟಣದ ಪ್ರಮುಖರು ಇರುತ್ತಾರೆ. ಸರ್ವಜನರ ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸುಸಜ್ಜಿತವಾದ ಚಿತಾಗಾರ ಘಟಕ ನಿರ್ಮಾಣಗೊಳ್ಳಲಿದೆ ಎಂದರು.
 ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂದಿರುವ ರೋಟರಿ ಸಂಸ್ಥೆಯು ಈ ಮಹತ್ಕಾರ್ಯವನ್ನು ಮಾಡುತ್ತಿದೆ. ಈ ಚಿತಾಗಾರವನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ನಿರ್ಮಾಣ ಕಾರ್ಯ ಮುಗಿದ ನಂತರ ಹೊಸ ನಿರ್ವಹಣಾ ಸಮಿತಿ ರಚಿಸಿ ಅದರ ಮೂಲಕ ಚಿತಾಗಾರದ ಜವಾಬ್ದಾರಿ ನಿರ್ವಹಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್  ಕಾರ್ಯದರ್ಶಿ ಸವಿತಾ ಸತ್ಯನಾರಾಯಣ್, ರೋಟರಿ ಕ್ಲಬ್ ಹಿರಿಯ ಪದಾಧಿಕಾರಿಗಳಾದ ಬಿ. ಶಿವಕುಮಾರ್, ಟಿ.ಡಿ. ಸತ್ಯನ್, ಕೆ.ಎಚ್.ಎ.ಪ್ರಸನ್ನ, ಕೆ.ಎಚ್.‌ಮಂಜುನಾಥ್,
ಆರ್.ಜಿ.‌ಕೃಷ್ಣಸ್ವಾಮಿ, ಡಾ.ಸುರೇಂದ್ರನಾಥ್, ಕಲ್ಲೇಶಪ್ಪ ಮತ್ತಿತರರು.

Leave a Reply

Your email address will not be published. Required fields are marked *

error: Content is protected !!