ವಿವಿಧ ಬೇಡಿಕೆಗೆ ಒತ್ತಾಯಿಸಲು ಫೆ.1ಕ್ಕೆ ಬೆಂಗಳೂರು ಚಲೋ ; ಎಐಟಿಯುಸಿ ರಾಜ್ಯ ಕಾರ್ಯದಶಿ ಜಯಮ್ಮ

ಸುದ್ದಿಕಡೂರು : ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲು ಫೆ 1ರಂದು ಬೆಂಗಳೂರು ಚಲೋ ಹಮ್ಮಿಕೊಂಡಿರುವುದಾಗಿ ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಎಂ.ಜಯಮ್ಮ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ, ಸಹಾಯಕಿಯರಿಗೆ 10 ಸಾವಿರ ಗೌರವಧನ ಹೆಚ್ಚಿಸುವುದು, ನಿವೃತ್ತಿಯಾದವರಿಗೆ 3 ಲಕ್ಷ ಇಡುಗಂಟು ಜಾರಿಗೊಳಿಸಬೇಕು, ಗ್ರಾಚ್ಯಟಿ ನಿವೃತ್ತಿಯಾದವರಿಗೆ ಯಾರೊಬ್ಬರಿಗೂ ಗ್ರಾಚ್ಯುಟಿ ಹಣ ನೀಡಿಲ್ಲ ಕೂಡಲೆ ನೀಡಬೇಕು, ಸ್ವಯಂ ನಿವೃತ್ತಿ ತೀವ್ರ ಸ್ವರೂಪದ ಖಾಯಿಲೆಗಳಿಂದ ಅನಾರೋಗ್ಯ ಪೀಡಿತರಾಗಿರುವವರಿಗೆ ನಿವೃತ್ತಿಯ ಅವಕಾಶ ನೀಡಬೇಕು, ಮೊಟ್ಟೆ ಸರಬರಾಜು ಟೆಂಡರ್ ರದ್ದುಗೊಳಿಸಿ ಬಾಲವಿಕಾಸ ಸಮಿತಿ ಖಾತೆಗೆ ಮೊಟ್ಟೆ ಖರೀದಿಸಲು ಮುಂಗಡವಾಗಿ ಹಣ ಬಿಡುಗಡೆ ಮಾಡುವುದು, 4 ರಿಂದ 5 ವರ್ಷ ವಯೋಮಿತಿಯ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ತೆರೆಯುವುದನ್ನು ಕೈಬಿಟ್ಟು ಅಂಗನವಾಡಿಗಳನ್ನು ಬಲಗೊಳಿಸಬೇಕು, ಹಾಳಾಗಿರುವ ಮೊಬೈಲ್‌ಗಳನ್ನು ವಾಪಸ್ಸು ಪಡೆದು ಮೊಬೈಲ್ ನೀಡಬೇಕು ಎಂಬ ಪ್ರಮುಖ 25 ಬೇಡಿಕೆಗಳನ್ನು ಮುಂದಿಟ್ಟುಕೊAಡು ಫೆ.1 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಕಾರ್ಯಕರ್ತೆಯರು,ಸಹಾಯಕಿಯರು ತಪ್ಪದೇ ಬೆಂಗಳೂರಿಗೆ ಬರುವಂತೆ ಕರೆ ನೀಡಿದರು. ತಾಲೂಕು ಅಧ್ಯಕ್ಷೆ ಯು.ಆರ್.ಪಾರ್ವತಮ್ಮ, ಕಾರ್ಯದರ್ಶಿ ಪಿ.ಎಸ್.ಭಾಗ್ಯ, ಶಾಹೀನ, ಕಾಂತಮಣಿ, ರಾಧಾ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!