ಕಡೂರಿನಲ್ಲಿ ಪುತ್ರಕಾಮೇಷ್ಠಿಯಾಗ ; 3ದಿನ ನಡೆಯುವ ಉಮಾಮಹೇಶ್ವರ ದೇವಾಲಯದ 125ನೇ ವಾರ್ಷಿಕೋತ್ಸವ

ಸುದ್ದಿಕಡೂರು : ಪಟ್ಟಣದ ಛತ್ರದ ಬೀದಿಯ ವಾಸವಿ ದೇವಾಲಯದಲ್ಲಿ ನೆಲೆಸಿರುವ ಶ್ರೀ ಉಮಾಮಹೇಶ್ವರ ಸ್ವಾಮಿಯ 125ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಫೆ.12,13 ಮತ್ತು 14ರಂದು ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರ್ಯವೈಶ್ಯ ಸಂಘದ ಅಧ್ಯಕ್ಷ ಕೆ.ಎಸ್.ನಾಗೇಂದ್ರ ಗುಪ್ತ ತಿಳಿಸಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಧಾರ್ಮಿಕ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಬಳಿಕ  ಮಾತನಾಡಿ, ತನ್ನದೇ ಐತಿಹಾಸಿಕ ಇತಿಹಾಸ ಹೊಂದಿರುವ ದೇವಾಲಯದಲ್ಲಿ ಶತಮಾನೋತ್ಸವದ ಸಂಭ್ರಮವನ್ನು 1999ರಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಇದೀಗ 125 ವರ್ಷದ ವಾರ್ಷಿಕ ಮಹೋತ್ಸವದಲ್ಲಿ
ಫೆ.12ರ ಸೋಮವಾರ ಬೆಳಿಗ್ಗೆ ಯಾಗಶಾಲಾ ಪ್ರವೇಶ ಮಹಾಗಣಪತಿ ಪೂಜೆ, ಕಳಸಪ್ರತಿಷ್ಟಾಪನೆ, ಶ್ರೀ ಮಹಾರುದ್ರಪಾರಾಯಣ, ನವಗ್ರಹ ಹೋಮ, ಪುರಸ್ವರವಾಗಿ ನಾಲ್ಕು ದ್ರವ್ಯಗಳಿಂದ ಮಹಾಗಣಪತಿ ಹೋಮ ಪೂರ್ಣಹುತಿ ಸಂಜೆ ಶ್ರೀ ಚಂಡಿಕಾ ಪಾರಾಯಣ ಹಾಗೂ ಶ್ರೀ ಲಕ್ಷಿö್ಮÃನಾರಾಯಣ ಹೃದಯಹೋಮ ಏರ್ಪಡಿಸಲಾಗಿದೆ ಎಂದರು.
ಫೆ. 13ರ ಮಂಗಳವಾರಬೆಳಿಗ್ಗೆ ಶ್ರೀ ಮಹಾರುದ್ರಪಾರಾಯಣ ಚಂಡಿಕಾಹೋಮ, ಪೂರ್ಣಹುತಿ, ಸಂಜೆ ಶ್ರೀರಾಮ ಪಟ್ಟಾಭಿಷೇಕ 13 ದ್ರವ್ಯಗಳಿಂದ ಶ್ರೀ ರಾಮತಾರಕ ಹೋಮ ನಡೆಯಲಿದೆ.
ಫೆ.14ರ ಬುಧವಾರ ಬೆಳಿಗ್ಗೆ ರುದ್ರಪಾರಾಯಣ ನಂತರ ಮಹಾರುದ್ರ ಹೋಮ ಎಲ್ಲಾ ದೇವತೆಗಳ ಸನ್ನಿಧಿಯಲ್ಲಿ ಕಲಾಹೋಮ, ಸಂತಾನ ಅಪೇಕ್ಷೆಗಳಿಗಾಗಿ ಪುತ್ರಕಾಮೇಷ್ಠಿಯಾಗ ನಂತರ ಉಮಾಮಹೇಶ್ವರ ಸ್ವಾಮಿ ಹಾಗೂ ವಾಸವಿ ಅಮ್ಮನವರ ಗೋಪುರಗಳಿಗೆ ಕುಂಭಾಭಿಷೇಕ, ಪೂರ್ಣಹುತಿ ನಡೆಯಲಿದ್ದು, ಧಾರ್ಮಿಕ ಕಾರ್ಯಕ್ರಮವು ಮತ್ತೂರಿನ ಕೇಶವ ಅವಧಾನಿಗಳು ಮತ್ತು ತಂಡದವರಿ0ದ ನೆರವೇರಿಸಲಾಗುತ್ತದೆ ಎಂದರು.
ಫೆ.14ರ ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭವನ್ನು ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷರಾದ ಆರ್.ಪಿ. ರವಿಶಂಕರ್ ನೆರವೇರಿಸಲಿದ್ದು, ವಿಶೇಷ ಅತಿಥಿಗಳಾಗಿ ಕ್ಷೇತ್ರದ ಶಾಸಕರಾದ ಕೆ.ಎಸ್.ಆನಂದ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಗೌರವಾಧ್ಯಕ್ಷರಾದ ಕೆ.ಎಸ್. ಸುದರ್ಶನ್, ಟಿ.ಡಿ. ಸತ್ಯನ್ ಸೇರಿದಂತೆ ಆರ್ಯವೈಶ್ಯ ಸಮಾಜದ ಬಂಧುಗಳು ವಿವಿಧ ಸಮತಿಗಳ ಪದಾಧಿಕಾರಿಗಳು ಮಹಿಳಾ ಸದಸ್ಯರು ಭಾಗಿಯಾಗಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಕೆ.ಎಸ್. ಸುದರ್ಶನ್, ಪದಾಧಿಕಾರಿಗಳಾದ ರಂಗನಾಥ್ ಭಂಡಿ, ಕೆ.ಎಸ್. ತ್ಯಾಗರಾಜ್, ಡಿ.ಪ್ರಶಾಂತ್, ಕೆ.ಎಸ್. ಮಂಜುನಾಥ್ ಶೆಟ್ಟಿ, ಟಿ.ಎಸ್. ಶ್ರೀನಾಥ್, ರಘುರಾಮ್, ದ್ವಾರಕನಾಥ್ ಬಾಬು ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!