ತಿರಸ್ಕೃತಗೊಂಡ ರೈತರ ಬೆಳೆವಿಮೆ ಆಕ್ಷೇಪಕ್ಕೆ ಮಾ.2 ಕೊನೆದಿನ; ಎಂ. ಅಶೋಕ್

ಸುದ್ದಿ ಕಡೂರು : 2022-23 ನೇ ಸಾಲಿನ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆಯ 363 ರೈತರ ಅರ್ಜಿಗಳು ತಿರಸ್ಕೃತಗೊಂಡಿದ್ದು, ಆಕ್ಷೇಪಣೆ ಸಲ್ಲಿಸಲು ಮಾ.02 ಕಡೆ ದಿನವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಅಶೋಕ್.ಎಂ ತಿಳಿಸಿದ್ದಾರೆ. ಬೆಳೆ ವಿಮೆ ನೋಂದಾಣಿ ಮಾಡಿಕೊಂಡ 2022-23 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರ ಪ್ರಸ್ತಾವನೆಗಳನ್ನು ಬೆಳೆ ಸಮೀಕ್ಷೆ ದತ್ತಾಂಶದೊAದಿಗೆ ಹೋಲಿಕೆ ಮಾಡಿದಾಗ ತಾಳೆಯಾಗದೇ ಇರುವ ಮುಂಗಾರು ಹಂಗಾಮಿನ 360 ಮತ್ತು ಹಿಂಗಾರು ಹಂಗಾಮಿನ 03 ರೈತರ ಪ್ರಸ್ತಾವನೆಗಳನ್ನು ತಿರಸ್ಕೃತಗೊಂಡಿವೆ. ಅಂತಹ ರೈತರ ಮಾಹಿತಿಯನ್ನು ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯತಿ ನೋಟಿಸ್ ಬೋರ್ಡಗಳಲ್ಲಿ ಪ್ರಕಟಿಸಲಾಗಿದೆ ಆಕ್ಷೇಪಣೆ ಸಲ್ಲಿಸುವವರು ಅರ್ಜಿಯೊಂದಿಗೆ 2022-23 ನೇ ಸಾಲಿನ ಬೆಳೆ ವಿಮೆಗೆ ನೋಂದಾಯಿಸಿರುವ ಬೆಳೆ ನಮೂದಾಗಿರುವ ಪಹಣಿ ಅಥವಾ ಬೆಂಬಲ ಬೆಲೆ ಪ್ರಯೋಜನಾ ಪಡೆದಿದ್ದಲ್ಲಿ ಅದರ ರಶೀದಿ ಅಥವಾ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳೆ ಮಾರಾಟ ಮಾಡಿದ್ದಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಬಹುದು. ಮಾ.2 ರೊಳಗಾಗಿ ಮಾತ್ರ ಆಕ್ಷೇಪಣೆ ಸಲ್ಲಿಸಲು ರೈತರಿಗೆ ಅವಕಾಶ ನೀಡಲಾಗಿದೆ. ನಂತರದ ಆಕ್ಷೇಪಣೆಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!