ಸ್ನೇಹಿತನ ಕತ್ತುಕೊಯ್ದ ನಾಲ್ವರು ಸ್ನೇಹಿತರು‌ ಅಂದರ್

ಸುದ್ದಿ ಕಡೂರು: ವೈಯಕ್ತಿಕ ದ್ವೇಷದಿಂದ ತಡರಾತ್ರಿ ನಡೆದ ಗಲಾಟೆಯು ವಿಕೋಪಕ್ಕೆ ತಿರುಗಿ ಸ್ನೇಹಿತನನ್ನೇ ಕೊಲೆ ಮಾಡಿದ ಬೆಂಗಳೂರು ಮೂಲದ ಕೌಶಿಕ್, ಮನೋಜ್, ರಾಜುಬಾಬು ಮತ್ತು ಕಿರಣ್ ಬಂಧಿತ ನಾಲ್ವರು ಆರೋಪಿಗಳನ್ನು ಶುಕ್ರವಾರ ತಡರಾತ್ರಿ ಪೊಲೀಸರು ವಶಕ್ಕೆ ಪಡೆದು ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಲ್ಲೂಕಿನ ಹುಲಿಗೊಂದಿ ಸಮೀಪದ ಹೊಸೂರು ಗ್ರಾಮದ ಮಲ್ಲೇ ಅಜ್ಜನ ಮನೆಯಲ್ಲಿದ್ದ ಯುವಕ ದರ್ಶನ್‌ಗೆ(21) ಕತ್ತುಕೊಯ್ದು ಬರ್ಬರವಾಗಿ ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು 12ಗಂಟೆಯೊಳಗಾಗಿ ಕಡೂರು ಪೊಲೀಸರು ಬಂಧಿಸಿದ್ದಾರೆ.
ಬೆAಗಳೂರಿನ ರಾಜಾರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಯತ್ನದ ಬಗ್ಗೆ ಪ್ರಕರಣ ದಾಖಲುಗೊಂಡ ಹಿನ್ನಲೆಯಲ್ಲಿ ಆರೋಪಿಗಳಾಗಿದ್ದ ಕೌಶಿಕ್ ಮತ್ತು ಮನೋಜ್ ಹತ್ಯೆಗೀಡಾದ ದರ್ಶನ್ ಆಶ್ರಯದಡಿ ತಲೆಮರೆಸಿಕೊಂಡು ತಾಲ್ಲೂಕಿನ ಎಚ್. ಹೊಸೂರು ಗ್ರಾಮದಲ್ಲಿ ಕೆಲದಿನಗಳ ಕಾಲ ಉಳಿದುಕೊಂಡಿದ್ದರು. ಬಳಿಕ ಹಣಕಾಸಿನ ವಿಚಾರದಲ್ಲಿ ದರ್ಶನ್ ಮತ್ತು ಆರೋಪಿ ಕಿರಣ್ ನಡುವೆ ದೂರವಾಣಿ ಮೂಲಕ ಗಲಾಟೆಗಳು ನಡೆದಿದ್ದು, ಇದರಿಂದ ಕುಪಿತಗೊಂಡಿದ್ದ ಕಿರಣ್ ಸ್ನೇಹಿತರು ಕೌಶಿಕ್ ಮತ್ತು ಮನೋಜ್ ಸಹಾಯದಿಂದ ಕಾರಿನಲ್ಲಿ ತಾಲ್ಲೂಕಿನ ಎಚ್.ಹೊಸೂರು ಗ್ರಾಮಕ್ಕೆ ಆಗಮಿಸಿದ್ದಾರೆ. ಅಜ್ಜನ ಮನೆಯಲ್ಲಿದ್ದ ದರ್ಶನ್‌ನನ್ನು ಕರೆಯಿಸಿಕೊಂಡ ಸ್ನೇಹಿತರು ಮಾತಿನ ಚಕಮಕಿಯಿಂದ ಬರ್ಬರವಾಗಿ ಕೊಲೆ ಮಾಡಿ ಶಿವಮೊಗ್ಗದ ಬಳಿ ತಲೆಮರೆಸಿಕೊಂಡಿದ್ದರು.
ಡಿವೈಎಸ್ಪಿ ಹಾಲಮೂರ್ತಿರಾವ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯ ತನಿಖಾ ತಂಡವನ್ನು ರಚಿಸಲಾಗಿತ್ತು. ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು. ವಿಚಾರಣೆಯನ್ನು ನಡೆಸಿದ ಬಳಿಕ ಘಟನೆಯ ಹಿನ್ನಲೆಯ ಬಗ್ಗೆ ಬಾಯ್ಬಿಟ್ಟಿದ್ದಾರೆ. ಕೊಲೆಯಾದ ದರ್ಶನ್ ಕೂಡ ವಿವಿಧ ಪ್ರಕರಣಗಳಲ್ಲಿ ಕೇಸ್ ದಾಖಲಾಗಿದ್ದವು ಎಂದು ತಿಳಿದು ಬಂದಿದೆ. ಕಾರ್ಯಾಚರಣೆಯಲ್ಲಿ ಸಿಪಿಐ ದುರ್ಗಪ್ಪ, ಪಿಎಸೈಗಳಾದ ಧನಂಜಯ್, ನವೀನ್‌ಕುಮಾರ್, ಈಶ್ವರ್, ಬಿರೇಶ್, ದೇವರಾಜ್, ಮಧು, ಹರೀಶ್, ವಸಂತ, ನಜೀರ್, ಕಿಶೋರ್ ತಂಡದಲ್ಲಿದ್ದರು.

 

ನಾಲ್ವರು ಆರೋಪಗಳನ್ನು ವಶಕ್ಕೆ ಪಡೆದ ಕಡೂರು ಪೊಲೀಸರು

Leave a Reply

Your email address will not be published. Required fields are marked *

error: Content is protected !!