32.67 ಲಕ್ಷ ಉಳಿತಾಯ ಬಜೆಟ್‌ ಮಂಡಿಸಿದ ಬೀರೂರು ಪುರಸಭೆ

ಬೀರೂರು ಪುರಸಭೆ:32ಲಕ್ಷದ 67ಸಾವಿರ ಉಳಿತಾಯ ಬಜೆಟ್
ಬೀರೂರು: ಪಟ್ಟಣದ ರಸ್ತೆ, ಚರಂಡಿ ಮೂಲಭೂತ ಸವಲತ್ತುಗಳು ಹಾಗೂ ಘನ ತಾಜ್ಯ ನಿರ್ವಹಣೆಯ ವಿಭಾಗಗಳು, ಪೈಪ್‌ಲೈನ್ ಅಳವಡಿಕೆ ಸೇರಿದಂತೆ ಮುಂತಾದ ಪ್ರಮುಖ ಅಂಶಗಳ ಒಳಗೊಂಡ 32.67 ಲಕ್ಷ ರೂಗಳ ಉಳಿತಾಯದ ಬಜೆಟ್‌ನ್ನು ಪುರಸಭಾ ಆಡಳಿತಾಧಿಕಾರಿ ತರೀಕೆರೆ ಎಸಿ ಕಾಂತರಾಜ್ ಮಂಡಿಸಿದ್ದಾರೆ.
ಪುರಸಭಾ ಕಚೇರಿಯಲ್ಲಿ 2024-25ನೇ ಸಾಲಿನ ಅಯವ್ಯಯದ ಬಜೆಟ್ ಮಂಡಿಸಿ ಈ ಸಾಲಿನ ಪುರಸಭೆಯ ಆಯ-ವ್ಯಯದ ಬಾಬ್ತಿನಲ್ಲಿ 33.58 ಕೋಟಿ ಆದಾಯ ಮತ್ತು 33.25 ಕೋಟಿ ವೆಚ್ಚದ ನಿರೀಕ್ಷೆಯನ್ನು ಹೊಂದಲಾಗಿದೆ.
ಪುರಸಭೆಯ ಪ್ರಮುಖ ಆದಾಯಗಳಾದ ಆಸ್ತಿ ತೆರಿಗೆ1.55 ಕೋಟಿ, ಆಸ್ತಿ ಮೇಲಿನ ತೆರಿಗೆ ದಂಡ 24ಲಕ್ಷ, ಖಾತೆ ಬದಲಾವಣೆ ಮತ್ತಿತರ ಶುಲ್ಕ 3.50ಲಕ್ಷ, ಮಳಿಗೆ ಬಾಡಿಗೆ 32ಲಕ್ಷ, ಕಟ್ಟಡ ಪರವಾನಗಿ, ಸುದಾರಣೆ ಶುಲ್ಕ 31ಲಕ್ಷ, ವ್ಯಾಪಾರ ಪರವನಗಿ ಮತ್ತಿತರೆ ಶುಲ್ಕ ಮತ್ತು ದಂಡ 9ಲಕ್ಷ, ಘನತ್ಯಾಜ್ಯ ನಿರ್ವಹಣಾ ಶುಲ್ಕಗಳು 15ಲಕ್ಷ, ನೀರಿನ ಶುಲ್ಕ ಮತ್ತು ದಂಡ 65ಲಕ್ಷ, ಒಳಚರಮಡಿ ಸಂಪರ್ಕ ಶುಲ್ಕ 3.5ಲಕ್ಷ, ನೆಲಬಾಡಿಗೆ , ಮಾರುಕಟ್ಟೆ ಶುಲ್ಕ 8.5ಲಕ್ಷ, ಬ್ಯಾಕ್ ಖಾತೆಗಳಿಂದ ಬಡ್ಡಿ 13ಲಕ್ಷ, ಸ್ಟಾಂಪ್ ಶುಲ್ಕ 3ಲಕ್ಷ, ಇತರೆ ಬಾಡಿಗೆ ಜಹಿರಾತು ಮತ್ತಿತರವುಗಳಿಂದ 12. 25 ಲಕ್ಷ ಆದಾಯಗಳಿಸಲಿದೆ.  ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದ
10.46 ಕೋಟಿಯಡಿ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಕುಡಿಯುವ ನೀರು ಮತ್ತು ಘನತಾಜ್ಯ ವಸ್ತು ನಿರ್ವಹಣೆಗೆ ಅಗತ್ಯ ಕ್ರಮವಹಿಸಲು 3 ಕೋಟಿ ಹಾಗೂ ರಸ್ತೆ-ಚರಂಡಿ ನಿರ್ವಹಣೆಗಾಗಿ ನಗರೋತ್ಥಾನ ಹಂತ 4ರಲ್ಲಿ 8.5ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!