ಬೆಂಕಿ ಅವಘಡದಿಂದ ಬ್ಯಾಗಡೇಹಳ್ಳಿ ಗ್ರಾಮದಲ್ಲಿ ಸುಟ್ಟುಕರಕಲಾದ ಮನೆಗಳು

ಸುದ್ದಿಕಡೂರು : ತಾಲ್ಲೂಕಿನ ಬ್ಯಾಗಡೇಹಳ್ಳಿ ಗ್ರಾಮದ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿತಗುಲಿ ಅಪಾರ ಪ್ರಮಾಣದ ಮನೆಯ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಮಂಗಳವಾರ ನಡೆದಿದೆ.
ಬ್ಯಾಗಡೇಹಳ್ಳಿ ಗ್ರಾಮದ ಮಂಜುಳಾ ಮತ್ತು ರುದ್ರಪ್ಪ ಎಂಬುವವರ ಅಕ್ಕಪಕ್ಕದ ಮನೆಯಲ್ಲಿ ಮಂಜುಳಾ ಎಂಬುವವರ ಮನೆಗೆ ಆಕಸ್ಮಿಕವಾಗಿ ಬೆಂಕಿತಗುಲಿ ಇಡೀ ಹೆಂಚಿನ ಮನೆಯನ್ನು ಆವರಿಸಿಕೊಂಡು ಪಕ್ಕದ ಮನೆಗೂ ಬೆಂಕಿ ತಗುಲಿದ್ದು. ಕೂಡಲೇ ಅಗ್ನಿಶಾಮಕದಳವು ಆಗಮಿಸಿ ಎರಡು ಮನೆಗಳಿಗೆ ಹೊತ್ತಿಕೊಂಡ ಬೆಂಕಿಯನ್ನು ನಂದಿಸಿದರು. ಅಂದಾಜು ಎರಡು ಮನೆಗಳಿಂದ 6 ಲಕ್ಷ ಮೌಲ್ಯದ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿರುವ ಬಗ್ಗೆ ತಿಳಿದು ಬಂದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರ ಇಲ್ಲದಾಗ ರ್ದುಘಟನೆ ಸಂಭವಿಸಿದೆ. ಬೆಂಕಿನ0ದಿಸುವ ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಎಚ್,ಕೆ.ದೇವೇಂದ್ರಪ್ಪ, ಸಿದ್ದೇಗೌಡ, ಶಿವಪ್ರಸಾದ್, ಸಿದ್ದೇಶ್, ಬಸವರಾಜ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!