ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಸಜ್ಜಾದ ಕಡೂರು-ಬೀರೂರು ಶೈಕ್ಷಣಿಕ ವಲಯ : ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳ ಮಾಹಿತಿ ಇಲ್ಲಿದೆ ನೋಡಿ

ಸುದ್ದಿ ಕಡೂರು : ಮಾ.25ರಿಂದ ಪ್ರಾರಂಭವಾಗುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಡೂರು-ಬೀರೂರು ಶೈಕ್ಷಣಿಕ ವಲಯಗಳ 15ಕೇಂದ್ರಗಳಲ್ಲಿ 3908 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ‌.
ಕಡೂರು ಶೈಕ್ಷಣಿಕ ವಲಯದಲ್ಲಿ ಒಟ್ಟು 63 ಶಾಲೆಗಳ
ಬಾಲಕರು(1326), ಬಾಲಕಿಯರು(1155), ಖಾಸಗಿ ಹಾಗೂ ಪುನರಾವರ್ತಿತ(137) ವಿದ್ಯಾರ್ಥಿಗಳು ಸೇರಿ ಒಟ್ಟು 2618 ವಿದ್ಯಾರ್ಥಿಗಳು ಪರೀಕ್ಷೆಯನ್ನು ನೊಂದಾಯಿಸಿಕೊಂಡಿದ್ದು.
ಪರೀಕ್ಷಾ ಕೇಂದ್ರಗಳಲ್ಲಿ, ತಲಾ ಹತ್ತು ಪರೀಕ್ಷಾ ಅಧೀಕ್ಷಕರು, ಕಸ್ಟೋಡಿಯನ್ಸ್, ಮೊಬೈಲ್ ಸ್ವಾಧೀನಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿರುತ್ತಾರೆ.
ಕಡೂರು ಶೈಕ್ಷಣಿಕ ವಲಯದಲ್ಲಿ ಕಡೂರು, ಪಂಚನಹಳ್ಳಿ ಮತ್ತು ಯಗಟಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಿಂಗಟಗೆರೆಯ ಕಲ್ಲೇಶ್ವರ ಪದವಿಪೂರ್ವ ಕಾಲೇಜು, ಚೌಳಹಿರಿಯೂರಿನ ಕೆ.ಪಿ.ಎಸ್.ಶಾಲೆ, ಕಡೂರಿನ ವೇದಾವತಿ ಬಾಲಿಕಾ ಮತ್ತು ಬಿಜಿಎಸ್ ಪ್ರೌಡ ಶಾಲೆಗಳು, ಹೇಮಗಿರಿಯ ಮಲ್ಲಿಕಾರ್ಜುನ ಗ್ರಾಮಾಂತರ ಪ್ರೌಡ ಶಾಲೆ, ಹೋಚಿಹಳ್ಳಿಯ ಬೀರಲಿಂಗೇಶ್ವರ ಪ್ರೌಢ ಶಾಲೆ, ಮತ್ತು ಗಿರಿಯಾಪುರದ ಗುರುಕೃಪಾ ಪ್ರೌಡ ಶಾಲೆಗಳನ್ನು ಪರೀಕ್ಷಾ ಕೇಂದ್ರಗಳಾಗಿ ಗುರುತಿಸಲಾಗಿದೆ.
ಇನ್ನು ಬೀರೂರು ಶೈಕ್ಷಣಿಕ ವಲಯದ ವ್ಯಾಪ್ತಿಗೆ ಒಳಪಡುವ ಬೀರೂರು, ಲಿಂಗದಹಳ್ಳಿ, ದೇವನೂರು, ಸಖರಾಯಪಟ್ಟಣ, ಜೋಡಿಹೋಚಿಹಳ್ಳಿ ಪರೀಕ್ಷಾ ಕೇಂದ್ರಗಳಲ್ಲಿ ಬಾಲಕರು(623), ಬಾಲಕಿಯರು(609) ಹಾಗೂ ಖಾಸಗಿ ಮತ್ತು ಪುನರಾರ್ವತಿತ(58) ಸೇರಿದಂತೆ ಒಟ್ಟು 1290ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಒಟ್ಟು 15 ಪರೀಕ್ಷಾ ಕೇಂದ್ರಗಳಿವೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರು ಸ್ಥಾನಿಕ ಜಾಗೃತ ದಳದ ಅಧಿಕಾರಿ ಕಾರ್ಯನಿರ್ವಹಿಸಲಿದ್ದು. ಪ್ರತೀ ಪರೀಕ್ಷಾ ಕೇಂದ್ರದಲ್ಲಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳ ನೊಂದಣಿ ಸಂಖ್ಯೆ ವಿವರ ಪ್ರದರ್ಶಿಸಲಾಗುತ್ತದೆ. ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯುವ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಿರ್ಭಿತವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ.

Leave a Reply

Your email address will not be published. Required fields are marked *

error: Content is protected !!