ಕಡೂರು-ಬೀರೂರು ಪುರಸಭೆಗಳಿಗೆ ಮೀಸಲಾತಿ ಪಟ್ಟಿ ಪ್ರಕಟ ; ಇಲ್ಲಿದೆ ಮಾಹಿತಿ

ಸುದ್ದಿ ಕಡೂರು : ಕಡೂರು-ಬೀರೂರು ಹಾಗೂ ತರೀಕೆರೆ ಪುರಸಭೆಗಳ ಮೊದಲನೇ ಅವಧಿಯ ಅಧಿಕಾರಾವಧಿಯ ಮುಕ್ತಾಯಗೊಂಡು ಇದೀಗ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪಟ್ಟಿಯ ಸ್ಥಾನಗಳು ನಿಗಧಿಗೊಂಡು ಸೋಮವಾರವು ಆದೇಶ ಹೊರಬಿದ್ದಿದೆ.
ಕಡೂರು ಪಟ್ಟಣದ ಪುರಸಭೆಗೆ ಅಧ್ಯಕ್ಷ(ಸಾಮಾನ್ಯ) ಮತ್ತು ಉಪಾಧ್ಯಕ್ಷ (ಸಾಮಾನ್ಯ),

ಬೀರೂರು ಪುರಸಭೆಗೆ ಅಧ್ಯಕ್ಷ ಸ್ಥಾನವು (ಸಾಮಾನ್ಯ ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನವು (ಸಾಮಾನ್ಯ ವರ್ಗಕ್ಕೆ) ಮೀಸಲು ನಿಗಧಿಯಾಗಿದೆ. ಹಾಗೂ ತರೀಕೆರೆ ಪುರಸಭೆಗೆ ಅಧ್ಯಕ್ಷ ಸ್ಥಾನವು (ಪರಿಶಿಷ್ಟ ಪಂಗಡ) ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ (ಬಿಸಿಎಂ ಮಹಿಳೆಗೆ) ನಿಗಧಿಗೊಂಡಿದೆ. ರಾಜ್ಯದ ವಿವಿದೆಡೆಯ ಎರಡನೇ ಅಧಿಕಾರವಧಿಗೆ ನಗರಸಭೆ ಮತ್ತು ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಮೀಸಲಾತಿ ನಿಗಧಿಪಟ್ಟಿಯು ಅಂತಿಮವಾಗಿ ಪ್ರಕಟಣೆ ಗೊಂಡಿದೆ.

Leave a Reply

Your email address will not be published. Required fields are marked *

error: Content is protected !!