ವಿದ್ಯುಕ್ತವಾಗಿ ಚಾಲನೆಗೊಂಡ ಹೇಮಗಿರಿ ಮಲ್ಲಿಕಾರ್ಜುನಸ್ವಾಮಿಯ ಜಾತ್ರಾಮಹೋತ್ಸವ

ಸುದ್ದಿ ಕಡೂರು : ಜ.10ರಂದು ನಡೆಯುವ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಹೇಮಗಿರಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಮಹಾರಥೋತ್ಸವದ ಅಂಗವಾಗಿ ಸೋಮವಾರದಿಂದ ಜಾತ್ರಾಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ದೊರಕಿತು.
ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ಸೋಮವಾರ ಸಂಜೆ ಕಳಸಸ್ಥಾಪನೆ, ವಧುವಣಿಗೆ ಶಾಸ್ತçಗಳು ನೆರವೇರಿದವು. ಯಳನಡು ಮಠದ ಶ್ರೀ ಜ್ಞಾನಪ್ರಭುಸಿದ್ದರಾಮದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಂಡವು.
ಜ.8ರ ಸೋಮವಾರದಿಂದ ಜಾತ್ರಾಮಹೋತ್ಸವವು ಪ್ರಾರಂಭಗೊಂಡಿದ್ದು, ಶ್ರೀ ಮಹಾಗಣಪತಿ ಪೂಜೆ, ಧ್ವಜಾರೋಹಣ, ಕಳಸ ಸ್ಥಾಪನೆ, ವಧುವಣಿಗೆ ಶಾಸ್ತçಗಳು ನೆರವೇರಿದವು.
ಜ.9ರ ಮಂಗಳವಾರ  ಗಂಗಾಪೂಜೆ, ನವಗ್ರಹ ಕಳಸಸ್ಥಾಪನೆ, ಗಿರಿಜಾ ಕಲ್ಯಾಣೋತ್ಸವ ಜರುಗಲಿದೆ.
ಜ.10ರ ಬುಧವಾರ ಸ್ವಾಮಿಯವರಿಗೆ ಅಭಿಷೇಕ ಪೂಜಾ ಕೈಕಂರ್ಯಗಳು ಜರುಗಿ ಬಳಿಕ ಮಧ್ಯಾಹ್ನ 3 ಗಂಟೆಗೆ ಮಹಾರಥೋತ್ಸವವು ನೆರವೇರಲಿದೆ.
ಜ.11ರ ಗುರುವಾರ ಬೆಳಿಗ್ಗೆ 12ಗಂಟೆಗೆ ಬೆಳಗಿನರಥೋತ್ಸವವು ನಡೆಯಲಿದೆ. ರಾತ್ರಿ ಶ್ರೀ ಸ್ವಾಮಿಯವರಿಗೆ ಶಯನೋತ್ಸವ ಹಾಗೂ ಶ್ರೀ ಪಾರ್ವತಿದೇವಿಯವರ ಸಂವಾದ ಪೂಜೆನಡೆಯಲಿದ್ದು, ಬರುವ ಭಕ್ತಾದಿಗಳಿಗೆ ಜಾತ್ರಾ ಮಹೋತ್ಸವದಲ್ಲಿ ಅನ್ನದಾಸೋಹ ಏರ್ಪಡಿಸಲಾಗಿದೆ.
ಜ.12ರ ಶುಕ್ರವಾರ ಸ್ವಾಮಿಯವರಿಗೆ ಅವಭೃತ ಸ್ನಾನ, ಪ್ರಧಾನಹುತಿ ಮತ್ತು ಪೂರ್ಣಹುತಿ ಮಹಾಮಂಗಳಾರತಿಯೊಂದಿಗೆ ಜಾತ್ರಾ ಮಹೋತ್ಸವವು ಸಂಪನ್ನಗೊಳ್ಳಲಿದೆ. ಆಗಮಿಕರಾದ ಮಹೇಶ್ವರಯ್ಯ ಶಾಸ್ತಿçಗಳು ಕಾಡಶೇಟ್ಟಿಹಳ್ಳಿ ತಿಪಟೂರು ಹಾಗೂ ಜಗದೀಶ್ ಶಾಸ್ತಿç ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕಪನೇಗೌಡರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!