ಸಂಪನ್ನಗೊಂಡ ಮಲಿಯಮ್ಮದೇವಿಯ ವಾರ್ಷಿಕಪೂಜಾ ಮಹೋತ್ಸವ

ಸುದ್ದಿ ಕಡೂರು: ಪಟ್ಟಣದ ಪೇಟೆಯ ಶ್ರೀಮಲ್ಲಿಯಮ್ಮ ದೇವಾಲಯದ ಪ್ರತಿಷ್ಟಾಪನೆಯ ಪ್ರಥಮ ವಾರ್ಷಿಕ ಮಹೋತ್ಸವವು ಗುರುವಾರ ಸುಸಂಪನ್ನವಾಗಿ ನೆರವೇರಿಸಲಾಯಿತು.

ಕಳೆದ ಎರಡು ದಿನಗಳಿಂದ ಆಗಮಿಕರಾದ ದಿನೇಶ್‌ನಾಗರಾಜ್ ಭಟ್ ಸಂಗಡಿಗರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಗಣಹೋಮ, ಸುಪ್ರಭಾತಸೇವೆ, ಪುಣ್ಯಹವಾಚನ ಜರುಗಿದವು. ಗುರುವಾರ ಬೆಳಿಗ್ಗೆ ಕಲಾಹೋಮ, ಅಭಿಷೇಕ, ಅಲಂಕಾರ ಸೇವೆ, ದುರ್ಗಾಹೋಮ ಸಂಜೆ ಸಾಮೂಹಿಕ ಕುಂಕುಮಾರ್ಚನೆ, ದುರ್ಗಾಸಪ್ತಶತಿ ಪಾರಾಯಣ ಸಹಿತ ದುರ್ಗಾ ದೀಪನಮಸ್ಕಾರ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀದೇವಿಯ ಪೂಜಾ ಕೈಕಂರ್ಯಗಳು ಜರುಗಿದವು.

ಶಾಸಕ ಕೆ.ಎಸ್.ಆನಂದ್ ದೇವಾಲಯಕ್ಕೆ ಭೇಟಿ ನೀಡಿ ಸಮಿತಿಯ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ದೇವಾಲಯದ ಅಭಿವೃದ್ದಿಗೆ ಒತ್ತು ನೀಡಲಾಗಿದ್ದು, ಈಗಾಗಲೇ ಪ್ರಾಂಗಣದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಗೊಳಿಸಲಾಗಿದೆ. ಸಮಿತಿಯ ಬೇಡಿಕೆಯಂತೆ ಮೇಲ್ಚಾವಣಿ ನಿರ್ಮಾಣಕ್ಕೆ 8 ಲಕ್ಷ ಅನುದಾವನ್ನು ಒದಗಿಸಿಕೊಡಲಾಗುತ್ತದೆ. ಖಂಡುಗದಹಳ್ಳಿ ಸೋಮೇಶ್ವರ ಸ್ವಾಮಿ ದೇವಾಲಯದ ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಗೌಡರಾದ ಕೆ.ಸಿ. ಸೋಮೇಶ್, ಖಂಡುಗದಹಳ್ಳಿ ಸೋಮೇಶ್ವರ ಸ್ವಾಮಿ ದೇವಾಲಯದ ಧರ್ಮದರ್ಶಿ ಕೆ.ಬಿ.ಸೋಮೇಶ್, ಪುರಸಭಾ ಸದಸ್ಯ ಈರಳ್ಳಿರಮೇಶ್, ಮುಖಂಡರಾದ ಶೇಖರಪ್ಪ, ಕೆ.ಜಿ.ಲೋಕೇಶ್, ಅನಿಲ್, ಕೆ.ಎಸ್.ಮಂಜು, ಸೋಮಶೇಖರ್, ಕೆ.ಇ.ಹಿರಿಯಣ್ಣ, ಮಂಜುನಾಥ್, ಮಂಡಿರAಗನಾಥ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!