2.05 ಲಕ್ಷಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ಕಳ್ಳನನ್ನ ಬಂಧಿಸಿದ ಬೀರೂರು ಪೊಲೀಸರು

ಸುದ್ದಿ ಕಡೂರು(ಬೀರೂರು) : ತಾಲ್ಲೂಕಿನ ಹೊಗರೇಹಳ್ಳಿ ಗ್ರಾಮದ ಮನೆಗೆ ನುಗ್ಗಿ 2.05ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದ ಕಳ್ಳನನ್ನು ಬೀರೂರು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಮಂಗಳವಾರ ಒಪ್ಪಿಸಿದ್ದಾರೆ.
ಹೊಗರೇಹಳ್ಳಿ ಗ್ರಾಮದ ಕುಮಾರ್ ಬಂಧಿತ ಆರೋಪಿಯಾಗಿದ್ದು, ಕಳೆದ ಜ.10ರಂದು ಹೊಗರೇಹಳ್ಳಿ ಗ್ರಾಮದ ಆರೋಪಿತ ವ್ಯಕ್ತಿಯ ಮನೆ ಹಿಂಭಾಗದ ಗೋವಿಂದರಾಜು ಎಂಬುವವರ ಮನೆಗೆ ನುಗ್ಗಿ ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣವನ್ನು ದೋಚಿ ಕಾಲ್ಕಿತ್ತಿದ್ದಾನೆ.‌ಪ್ರಕರಣವನ್ನು ದಾಖಲಿಸಿಕೊಂಡಿದ್ದ ಬೀರೂರು ಪೊಲೀಸರು ಡಿವೈಎಸ್ಪಿ ಹಾಲಮೂರ್ತಿರಾವ್ ಮಾರ್ಗದರ್ಶನದಲ್ಲಿ ಸಿಪಿಐ ಎಸ್.ಎನ್.ಶ್ರೀಕಾಂತ್ ಪಿಎಸ್ಐ ಸಜಿತ್ ಕುಮಾರ್ ನೇತೃತ್ವದ ತಂಡವು ಕಾರ್ಯಚರಣೆ ನಡೆಸಿ ಬೀರೂರಿನಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿತ ವ್ಯಕ್ತಿ ಕುಮಾರ್ ನನ್ನು ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಚಿನ್ನಾಭರಣವನ್ನು ಕಳ್ಳತನ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಆತನಿಂದ 20ಗ್ರಾಂ ಎರಡು ಚಿನ್ನದ ಉಂಗುರಗಳು, 6ಗ್ರಾಂ ಚಿನ್ನದ ಹ್ಯಾಂಗಿಂಗ್ಸ್, 7ಗ್ರಾಂ ಜುಮುಕಿ ಓಲೆ, ತಲಾ 4ಗ್ರಾಂ ಜುಮುಕಿ ಓಲೆ ಮತ್ತು ಚಿನ್ನದ‌ ಮಾಟಿಯನ್ನು ವಶ ಪಡಿಸಿಕೊಂಡಿದ್ದಾರೆ.
ಕಾರ್ಯಚರಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಗಳಾದ ಡಿ.ವಿ. ಹೇಮಂತ್ ಕುಮಾರ್, ಬಿ.ಪಿ.ಕೃಷ್ಣಮೂರ್ತಿ, ಶಿವಕುಮಾರ್, ರಾಜಪ್ಪ ಇದ್ದರು.

Leave a Reply

Your email address will not be published. Required fields are marked *

error: Content is protected !!