ಫೆ.18ಕ್ಕೆ ನಾಟ್ಯಕೇಶವ ನೃತ್ಯ ಕಲಾನಿಕೇತನದ ನಾಟ್ಯಸಂಭ್ರಮ

ಸುದ್ದಿಕಡೂರು : ನಾಟ್ಯಪ್ರವೀಣೇ ದಿ. ಡಾ. ವೆಂಕಟಲಕ್ಷö್ಮಮ್ಮ ಅವರ ಸ್ಮರಣಾರ್ಥವಾಗಿ ಪಟ್ಟಣದಲ್ಲಿ ಫೆ.18ರಂದು ನಾಟ್ಯಕೇಶವ ನೃತ್ಯ ಕಲಾನಿಕೇತನದ ವತಿಯಿಂದ 9ನೇ ವರ್ಷದ ನಾಟ್ಯ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕಲಾಶ್ರೀ ವಿದ್ವಾನ್ ಎಸ್. ಕೇಶವಕುಮಾರ್ ಪಿಳ್ಳೈ ತಿಳಿಸಿದರು.
ಪಟ್ಟಣದಲ್ಲಿ  ಮಾತನಾಡಿ, ನಾಟ್ಯಕೇಶವ ನೃತ್ಯ ಶಾಲೆಯ 80ಕ್ಕು ಹೆಚ್ಚು ಮಕ್ಕಳು ಭರತನಾಟ್ಯ ಕಲೆಯಲ್ಲಿ ಉತ್ತಮ ತರಬೇತಿ ಹೊಂದಿದ್ದು, ಮಕ್ಕಳ ಕಲಾಪ್ರತಿಭೆಯನ್ನು ಪ್ರದರ್ಶಿಸುವ ಜೊತೆಗೆ ಭರತನಾಟ್ಯ ಕಲೆಯನ್ನು ಬೆಳೆಸಬೇಕೆಂಬ ಆಶಯದೊಂದಿಗೆ ವಿಶೇಷವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಫೆ.18ರ ಭಾನುವಾರ ಸಂಜೆ 5-30ಕ್ಕೆ ನಡೆಯುವ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಲಿದ್ದಾರೆ. ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್, ಬಿಇಒ ಆರ್. ಸಿದ್ದರಾಜುನಾಯ್ಕ್, ಶಾಸಕರ ಮಾದರಿ ಶಾಲೆಯ ಮುಖ್ಯೋಪಾಧ್ಯಯನಿ ಕೆ.ಎಂ.ರುಕ್ಮುಣಿ, ಯುವಮುಖಂಡ ಪಂಗ್ಲಿಮಂಜುನಾಥ್ ಭಾಗವಹಿಸಲಿದ್ದಾರೆ ಎಂದರು.
ಭರತನಾಟ್ಯವು ಅತ್ಯಂತ ಹಳೆಯ ಭಾರತೀಯ ಶಾಸ್ತಿçಯ ನೃತ್ಯ ರೂಪಕವಾಗಿದ್ದು, ಪ್ರಸ್ತುತ ದಿನಗಳಲ್ಲಿ ಭರತನಾಟ್ಯ ಕಲೆಯಲ್ಲಿ ಮಕ್ಕಳು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದು, ನೃತ್ಯ ಕಲಾನಿಕೇತನ ಶಾಲೆಯಲ್ಲಿ ತರಬೇತಿ ಪಡೆದ ನೂರಾರು ಮಕ್ಕಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ವಿಜೇತರಾಗಿರುವುದು ಹೆಮ್ಮೆಯ ಸಂಗತಿ. ಕರೋನಾ ಪರಿಣಾಮವಾಗಿ ಕಳೆದ ಮೂರು ವರ್ಷಗಳಿಂದ ಪಟ್ಟಣದಲ್ಲಿ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲು ಸಾಧ್ಯವಾಗದೆ ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಮುಂದಿನ ದಿನಗಳಲ್ಲಿ ನಾಟ್ಯಕೇಶವ ನೃತ್ಯ ಕಲಾನಿಕೇತನದ ಶಾಲೆಯು ದಶಮಾನೋತ್ಸವ ಸಂಭ್ರಮಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ವಿಶೇಷವಾದ ಕಾರ್ಯಕ್ರಮವನ್ನು ರೂಪಿಸಲು ಸಿದ್ದಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಕೆ.ಎಂ. ರುಕ್ಮಣಿ, ಪಂಗ್ಲಿಮಂಜುನಾಥ್, ಶಿಕ್ಷಕಿ ಶೋಭಾ ಇದ್ದರು.

Leave a Reply

Your email address will not be published. Required fields are marked *

error: Content is protected !!